ಬ್ರಿಡ್ಜ್ ಕೋರ್ಸ್-2018 ಕೋಚಿಂಗ್ ತರಬೇತಿಯ ಉದ್ಘಾಟನಾ ಸಮಾರಂಭ

ಪಿಯುಸಿ ಕೋರ್ಸ್ ಒಂದು ಅವಕಾಶಗಳ ದೊಡ್ಡ ರಾಶಿ. ಅದನ್ನು ಬಳಸಿಕೊಳ್ಳಲು ಸರಿಯಾಗಿ ಸಿದ್ದತೆ ಬೇಕಾಗುತ್ತದೆ. ಸಿದ್ದತೆಯಿಲ್ಲದೆ ಕಾರ್ಯವನ್ನು ಮಾಡಿಕೊಂಡು ಹೋದರೆ ಅದರಲ್ಲಿ ಜಯಶಾಲಿಯಾಗಲು ಸಾಧ್ಯವಿಲ್ಲ ಎಂದು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಕ್ಯಾಂಪಸ್ ನಿರ್ದೇಶಕರಾದ ಪ್ರೊ. ವಿವೇಕ್ ರಂಜನ್ ಭಂಡಾರಿ ಹೇಳಿದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೋಸ್ಕರ ರಜಾ ಅವಧಿಯಲ್ಲಿ ನಡೆಸಲಾಗುವ ಬ್ರಿಡ್ಜ್ ಕೋರ್ಸ್-2018 ಕೋಚಿಂಗ್ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

Inagurating-bridge-course-books-by-prof

ಪ್ರತಿಯೊಬ್ಬ ವಿದ್ಯಾರ್ಥಿಯು ಸಮಯಕ್ಕೆ ಮಹತ್ವವನ್ನು ಕೊಟ್ಟಾಗ ತಮ್ಮ ಗುರಿಯನ್ನು ತಲುಪಲು ಸಾಧ್ಯ. ಇಚ್ಛಾಶಕ್ತಿ ಮತ್ತು ಮಾನಸಿಕ ದೃಢತೆಯಿಂದ ಕಾರ್ಯವನ್ನು ಕೈಗೊಂಡಾಗ ಮಾತ್ರ ನಮ್ಮ ಕನಸು ನನಸಾಗಲು ಸಾಧ್ಯ. ಈ ದಿಶೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಕಾಯೋನ್ಮುಖರಾಗಬೇಕು. ಪ್ರತಿಯೊಂದು ವಿಷಯದಲ್ಲಿ ತಯಾರಿಯಾಗಲು ಈ ಬ್ರಿಡ್ಜ್ ಕೋರ್ಸ್ ರೂಪಿತವಾದುದು. ಇದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಹಾರೈಸಿದರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜೀವನದಾಸ್ ಮಾತನಾಡಿ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ವಿದ್ಯಾರ್ಥಿಗಳು ಈ ರಜೆಯ ಅವಧಿಯಲ್ಲಿ ತಯಾರಿಯನ್ನು ನಡೆಸಬೇಕು. ಇದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನನು ತಾನು ಸಮರ್ಪಿಸಿಕೊಂಡಾಗ ಇದನ್ನು ಸಾಧಿಸಲು ಸಾಧ್ಯ.ಓದಿನ ಕಡೆಗೆ ಗಮನ ಹರಿಸಿ ತಮ್ಮದೇ ಆದ ಸುಂದರವಾದ ವ್ಯಕ್ತಿತ್ವವನ್ನು ಈ ಮೂಲಕ ರೂಪಿಸಬಹುದು. ಇದು ಉತ್ತಮ ಭವಿಷ್ಯಕ್ಕೆ ಅಡಿಪಾಯ. ನಿರ್ಬಂಧಗಳಿಲ್ಲದ ಬದುಕು ಇಲ್ಲ. ಆದರೆ ಅದನ್ನು ಪಾಲಿಸದೇ ಇದ್ದಾಗ ಜಯಶಾಲಿಗಳಾಗಲು ಸಾಧ್ಯವಿಲ್ಲ. ಉತ್ತಮವಾದ ಕಾಲ ಘಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಭದ್ರ ಬುನಾದಿಯನ್ನು ನೀಡುವ ಉದ್ದೇಶದಿಂದ ಈ ಕೋಚಿಂಗ್ ತರಬೇತಿಯನ್ನು ನೀಡಲಾಗುತ್ತದೆ ಎಂದು ಹೇಳಿದರು.

ಬ್ರಿಡ್ಜ್ ಕೋರ್ಸ್-2018 ಕೋಚಿಂಗ್ ತರಬೇತಿಯ ಮುಖ್ಯ ಸಂಯೋಜಕರಾದ ಶ್ರೀಮತಿ ನಳಿನಾ ಕುಮಾರಿ ಸ್ವಾಗತಿಸಿ ವಂದಿಸಿದರು.

Highslide for Wordpress Plugin