ಯಶಸ್ – 3 ನೇ ತಂಡದ ಆಯ್ಕೆ ಪ್ರಕ್ರಿಯೆಯ ಸಂದರ್ಶನ

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಇದರ ವತಿಯಿಂದ ನಾಗರೀಕ ಸೇವಾ ಪರೀಕ್ಷೆಗಳ ತರಬೇತಿಗಾಗಿ ನಡೆಸಲ್ಪಡುವ ಯಶಸ್ ಇದರ 3 ನೇ ತಂಡದ ಆಯ್ಕೆ ಪ್ರಕ್ರಿಯೆಯ ಸಂದರ್ಶನವು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. ಲಿಖಿತ ಪರೀಕ್ಷೆಯಲ್ಲಿ ಆಯ್ಕೆಗೊಂಡ ಸುಮಾರು 100 ವಿದ್ಯಾರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಸಂದರ್ಶನದ ಮೊದಲು ನಡೆದ ಸಭಾಕಾರ್ಯಕ್ರಮದಲ್ಲಿ ಯಶಸ್‌ನ ನೀತಿನಿಯಮಗಳನ್ನು ಶೈಕ್ಷಣಿಕ ನಿರ್ದೇಶಕರಾದ ಶ್ರೀ ವಿಘೇಶ್ವರ ವರ್ಮುಡಿ ಅವರು ವಿವರಿಸಿದರು. ಯಶಸ್‌ನ ಕಾರ್ಯಕ್ರಮದ ಬಗ್ಗೆ ಅಧ್ಯಕ್ಷರಾದ ಡಾ| ಸೂರ್ಯನಾರಾಯಣ ತಿಳಿಸಿದರು.

Shri-vigneshwara-varmudi-speaking

Interview

ಕಾರ್ಯಕ್ರಮವನ್ನು ಅಧ್ಯಾಪಕಿ ಶ್ರೀಮತಿ ವಿಜಯ ಸರಸ್ವತಿ ನಿರೂಪಿಸಿದರು. ಕಾರ್ಯದರ್ಶಿ ಶ್ರೀ ಮುರಳಿ ಯವರು ಸ್ವಾಗತಿಸಿದರು. ಕಾಲೇಜಿನ ನಿಲಯ ಪಾಲಕರಾದ ಶ್ರೀ ಗೋವಿಂದರಾಜ್‌ಶರ್ಮ ವಂದಿಸಿದರು.

Highslide for Wordpress Plugin