ವಾಣಿಜ್ಯ ಸಂಘದ ಸಮಾರೋಪ ಸಮಾರಂಭ

ವಿದ್ಯಾರ್ಥಿಗಳಿಗೆ ಬದುಕಿನಲ್ಲಿ ಶಿಕ್ಷಣ ಮುಖ್ಯ. ಅದರಲ್ಲೂ ಜೀವನ ಮೌಲ್ಯ ತಿಳಿಸಿಕೊಡುವ ಶಿಕ್ಷಣ ಅತ್ಯಂತ ಹೆಚ್ಚು ಅವಶ್ಯಕ ಎಂದು ಸವಣೂರು ವಿದ್ಯಾರಶ್ಮಿ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾದ್ಯಾಪಕರಾದ ಶ್ರೀ ಪುಷ್ಪರಾಜ್ ಹೇಳಿದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಾಣಿಜ್ಯ ಸಂಘದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

Shri-Pushparaj-speaking

ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜೀವನ್‌ದಾಸ್ ವಹಿಸಿಕೊಂಡಿದ್ದರು.ಕಾರ್ಯಕ್ರಮದಲ್ಲಿ ವಾಣಿಜ್ಯ ಸಂಘದ ಸಂಯೋಜಕಿ ಕು| ಅಕ್ಷತಾ ಉಪಸ್ಥಿತರಿದ್ದರು.

ಸಂಘದ ವತಿಯಿಂದ ನಡೆಸಲಾದ ಹಲವು ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು ವಿದ್ಯಾರ್ಥಿ ದೀಕ್ಷಿತ್ ಶೆಟ್ಟಿ ನಿರೂಪಿಸಿದರು.ವಿದ್ಯಾರ್ಥಿ ಅಕ್ಷಯ್ ವಿನಾಯಕ್ ಪೈ ಸ್ವಾಗತಿಸಿ ಶ್ಯಾಮ್ ಕಿಶೋರ್ ವಂದಿಸಿದರು.

Highslide for Wordpress Plugin