ಅಟೆಂಡರ್ಸ್ ಕಾರ್ಯಕ್ಷಮತಾ ಪುನಃಶ್ಚೇತನಾ ಕಾರ್ಯಗಾರ

ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶದಲ್ಲಿ ಪ್ರಶಿಕ್ಷಣ ಘಟಕದ ವತಿಯಿಂz ಇತ್ತಿಚೇಗೆ ವಿವೇಕಾನಂದ ಪದವಿ ಪೂರ್ವಕಾಲೇಜಿನಲ್ಲಿ ಅಟೆಂಡರ್ಸ್‌ಗಳಿಗೆ ಪುನಃಶ್ಚೇತ ಕಾರ್ಯಗಾರವು ನಡೆಯಿತು. ಪ್ರಸ್ತುತ ಕಾಲಘಟ್ಟದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಹುದ್ದೆಯಲ್ಲಿ ನೈಪುಣ್ಯತೆಯನ್ನು ಸಾಧಿಸಲು ತರಭೇತಿ ಪಡೆದುಕೊಳ್ಳುವುದು ಅವಶ್ಯಕ. ತುಕು ಹಿಡಿz ಕತ್ತಿಯನ್ನು ಹೇಗೆ ಸಾಣೆಗೆಕೊಟ್ಟು ಹರಿತ ಮಾಡುತ್ತೇವೆಯೋ, ಹಾಗೆಯೇ ನಮ್ಮಕಾರ್ಯಶಕ್ತಿಗೆ ಆಗಾಗ ತರಭೇತಿಯನ್ನು ಪಡೆದುಕೊಳ್ಳುತ್ತಾ ಹರಿತಗೊಳಿಸಬೇಕೆಂದು ವಿವೇಕಾನಂದ ಪದವಿ ಪೂರ್ವಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ರೋ.ಡಾ. ಸೂರ್ಯನಾರಾಯಣರವರು ತಮ್ಮಉದ್ಘಾಟನಾ ಭಾಷಣದಲ್ಲಿ ನುಡಿದರು. ಪ್ರಾಂಶುಪಾಲರಾದ ಶ್ರೀ ಜೀವನ್‌ದಾಸ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಸಂಯೋಜಕರಾದ ಪ್ರೋ.ವಿ.ಜಿ.ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.


ಸಂಪನ್ಮೂಲ ವ್ಯಕ್ತಿಗಳಾಗಿ ಇಂಡಸ್‌ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಸೀತರಾಮ ಕೇವಳ, ಉಪನ್ಯಾಸಕರಾದ ಶ್ರೀ ಕೃಷ್ಣಮೋಹನ ಹಾಗೂ ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನ ಪ್ರಾಂಶುಪಲರಾದ ಶ್ರೀ ಕೃಷ್ಣಪ್ರಸಾದ್ ತರಬೇತಿ ನೀಡಿದರು. ವಿವೇಕಾನಂದ ಪದವಿ ಪೂಕಾಲೇಜಿ ಉಪಪ್ರಾಂಶುಪಾಲರಾದ ಶ್ರೀ ಪರಮೇಶ್ವರ ಶರ್ಮ ಹಾಗೂ ಪ್ರಶಿಕ್ಷಣ ಘಟಕದ ಸಂಯೋಜಕ ಶ್ರೀ ರಘುರಾಜ್ ಉಬರಡ್ಕ ತರಬೇತಿ ಸಂಘಟಿಸಿದ್ದರು.

ಸಂಜೆ ನಡೆದ ಸಮಾರೋಪದಲ್ಲಿ ಮನೋವಿಶ್ಲೇಷಕ ಶ್ರೀ ಗಂಗಾಧರ ಬೆಳ್ಳಾರೆ ಸಮರೋಪ ಮಾತನ್ನಾಡಿದರು. ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಶಿವಪ್ರಸಾದ್ ಇ. ಅಧ್ಯಕ್ಷತೆ ವಹಿಸಿದ್ದರು. ಶ್ರೀ ಪರಮೇಶ್ವರ ಶರ್ಮ ವಂದಿಸಿದರು. ಶ್ರೀ. ರಘುರಾಜ್ ಉಬರಡ್ಕ ಸ್ವಾಗತಿಸಿ ನಿರೂಪಿಸಿದರು.

Highslide for Wordpress Plugin