ಇಂಟರ್‍ಯಾಕ್ಟ್ ಕ್ಲಬ್ ರಚನೆ

ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿ ಪ್ರಾಯೋಜಕತ್ವದ ಇಂಟರ್‍ಯಾಕ್ಟ್ ಕ್ಲಬ್‌ನ ಪದಗ್ರಹಣ ಕಾರ್ಯಕ್ರಮ ಕಾಲೇಜಿನ ಸಭಾಭವನದಲ್ಲಿ ನಡೆಯಿತು.

ರೋಟರಿ ಕ್ಲಬ್ ಪುತ್ತೂರು ಸಿಟಿಯ ಚೇರ್‌ಮನ್ ವಸಂತ್ ಕುಮಾರ್ ರೈ ರವರು ಇಂಟರ್‍ಯಾಕ್ಟ್ ಕ್ಲಬ್‌ನ ನೂತನ ಅಧ್ಯಕ್ಷೆ ಶಿಲ್ಪಾ ಪಿ.ವಿ ರವರಿಗೆ ರೋಟರಿ ಕೊರಳಪಟ್ಟಿಯನ್ನು ಹಾಕುವುದರ ಮೂಲಕ ಪದಗ್ರಹಣ ಕಾರ್ಯಕ್ರಮ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ವ್ಯಕ್ತಿಯ ಮಾನಸಿಕ ಬೆಳವಣಿಗೆಗೆ, ನಾಯಕತ್ವ ಕೌಶಲ್ಯಕ್ಕೆ, ವೈಯಕ್ತಿಕ ಸಮಗ್ರತೆಯ ಬಗ್ಗೆ ಅರಿವಾಗಲು ಇಂಟರ್‍ಯಾಕ್ಟ್‌ನಲ್ಲಿ ತೊಡಗಿಸಿಕೊಳ್ಳಬೇಕು ಮಾತ್ರವಲ್ಲದೆ ಪರಸ್ಪರ ಒಡನಾಟವನ್ನು ಕೂಡ ಸಂಪಾದಿಸಬಹುದಾಗಿದೆ ಎಂದರು.

1

ರೋಟರಿ ಕ್ಲಬ್ ಅಧ್ಯಕ್ಷರಾದ ಜಯಂತ್ ನಡುಬೈಲು ಮಾತನಾಡಿ ಸದಸ್ಯರಲ್ಲಿ ಪರಸ್ಪರ ಸ್ನೇಹ ಹಾಗೂ ಒಡನಾಟ ವೃದ್ಧಿಯಾಗುವುದಕ್ಕೆ ಇಂಟರ್‍ಯಾಕ್ಟ್ ಕ್ಲಬ್ ಹುಟ್ಟಿಕೊಂಡಿದೆ. ಸ್ವಹಿತ ಮೀರಿದ ಸೇವೆಯೆಂಬುದು ರೋಟರಿಯ ಧ್ಯೇಯವಾಕ್ಯಗಳಾಗಿದ್ದರೂ ಇಂತಹ ಕ್ಲಬ್­ಗಳಲ್ಲಿ ಗುರುತಿಸಿಕೊಂಡಾಗ ಕಾಲೇಜಿನಲ್ಲಿ , ಸಮಾಜದಲ್ಲಿ ನಾಯಕತ್ವ ರಾಪಿಸಿಕೊಳ್ಳಲು, ಇತರರಿಗೆ ಸಹಾಯ ಮಾಡಲು ಅವಕಾಶ ಲಭಿಸುತ್ತದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಜೀವನ್ ದಾಸ್ ಮಾತನಾಡಿ ವಿದ್ಯಾರ್ಥಿಗಳನ್ನು ಹುರಿದುಂಬಿಸಲು ಮತ್ತು ಅವರಲ್ಲಿ ನಾಯಕತ್ವದ ಕೌಶಲ್ಯಗಳನ್ನು ಮೂಡಿಸಲು ರೋಟರಿ ಕ್ಲಬ್ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಚಟುವಟಿಕೆಗಳು ಉದ್ಘಾಟನೆಗೆ ಮಾತ್ರ ಸೀಮಿತವಾಗದೆ ಸಾಮಾಜಿಕ ಚಟುವಟಿಕೆಗಳಿಗೆ ಆಸ್ಪದ ನೀಡಬೇಕು ಎಂದರು.

Shilpa-prajwal

ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಶಿಲ್ಪಾ ಪಿ.ವಿ ಮಾತನಾಡಿ ಸರ್ವರ ಸಹಕಾರದೊಂದಿಗೆ ಉತ್ತಮ ಸೇವೆ ಮಾಡುತ್ತಾ ರೋಟರಿ ಕ್ಲಬ್ ಮೌಲ್ಯವನ್ನು ಎತ್ತಿ ಹಿಡಿಯುತ್ತದೆ ಎಂದು ಹೇಳಿ ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ನೂತನ ಕಾರ್ಯದರ್ಶಿಯಾಗಿ ಪ್ರಜ್ವಲ್ ಎಸ್. ಆಯ್ಕೆಗೊಂಡರು.

ಸಮಾರಂಭದಲ್ಲಿ ರೋಟರಿ ಸಂಸ್ಥೆಯ ಕಾರ್ಯದರ್ಶಿ ಡಾ. ಶ್ಯಾಮಪ್ರಸಾದ್ ಉಪಸ್ಥಿತರಿದ್ದರು. ಸಂಯೋಜಕಿ ಕುಮಾರಿ ಅಕ್ಷತಾ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಯಶಸ್ವಿನಿ ಮತ್ತು ಶೆರಿಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯದರ್ಶಿ ಪ್ರಜ್ವಲ್ ಎಸ್ ವಂದಿಸಿದರು.

Highslide for Wordpress Plugin