ಚಿಗುರು ಭಿತ್ತಿ ಪತ್ರಿಕೆಯ ಸಮಾರೋಪ ಸಮಾರಂಭ

ವಿದ್ಯಾರ್ಥಿಗಳನ್ನು ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳುವಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜು ನಡೆಸುತ್ತಾ ಬಂದಿರುವ ’ಚಿಗುರು’ ಮಹತ್ವದ ಹೆಜ್ಜೆಯಾಗಿದ್ದು ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುತ್ತಿದೆ. ಸಾಹಿತ್ಯದ ಪ್ರಕಾರಗಳಾದ ಕಥೆ, ಕವನ, ಪ್ರಬಂಧ ಮುಂತಾದ ಸೃಜನಶೀಲ ಕ್ರಿಯೆಗಳ ಮೇಲೆ ಆಸಕ್ತಿ ಹುಟ್ಟುವಂತೆ ಮಾಡುತ್ತದೆ ಎಂದು ವಿವೇಕಾನಂದ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಡಾ| ರೋಹಿಣಾಕ್ಷ ಶಿರ್ಲಾಲು ಹೇಳಿದರು.

2016-17  ನೇ ಸಾಲಿನ ಚಿಗುರು ಭಿತ್ತಿ ಪತ್ರಿಕೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

Dr.-Rohinaksha-speaking

ಸಾಹಿತ್ಯವು ಸಮಾಜದ ಕೈಗನ್ನಡಿ.ಪ್ರತಿಭೆ, ಪರಂಪರೆಯ ಅರಿವು ಮತ್ತು ಸೂಕ್ತ ಮಾರ್ಗದರ್ಶನದೊಂದಿಗೆ ಕಲಿಕೆಯ ಒತ್ತಡಗಳ ನಡುವೆ ಭಿತ್ತಿಪತ್ರಿಕೆಗಳನ್ನು ಸುಂದರವಾಗಿ ರೂಪಿಸಿದ ವಿದ್ಯಾರ್ಥಿಗಳು ಮತ್ತು ಸಹಕರಿಸಿದ ಉಪನ್ಯಾಸಕ ವೃಂದದವರು ಅಭಿನಂದನೀಯರು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜೀವನದಾಸ್ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಆಧುನಿಕ ಸಮೂಹ ಮಾಧ್ಯಮಗಳ ಭರದಲ್ಲಿ ಸಿಲುಕಿ ಸೃಜನಶೀಲತೆಯನ್ನು ಕಳೆದುಕೊಳ್ಳಬಾರದು. ಸಾಹಿತ್ಯವು ಕೇವಲ ಪಠ್ಯದ ಭಾಗವಲ್ಲ. ಬದುಕಿನ ಅವಿಭಾಜ್ಯ ಅಂಗವೂ ಆಗಬೇಕು ಎಂದು ಅಭಿಪ್ರಾಯಪಟ್ಟರು.

ರಾಜ್ಯಮಟ್ಟದ ಕಥಾಸ್ಪರ್ಧೆ ಮತ್ತು ವಿವಿಧ ಸ್ಪರ್ಧೆಗಳ ಬಹುಮಾನಗಳನ್ನು ವಿತರಿಸಲಾಯಿತು. ಕನ್ನಡ ಉಪನ್ಯಾಸಕ ಶ್ರೀ ಸುಭಾಷ್ ಪಟ್ಟಾಜೆ ಕಾರ್ಯಕ್ರಮವನ್ನು ನಿರೂಪಿಸಿದರು. ಚಿಗುರು ಭಿತ್ತಿಪತ್ರಿಕೆಯ ಸಂಯೋಜಕಿ ಶ್ರೀಮತಿ ಪುಷ್ಪಲತಾ ಸ್ವಾಗತಿಸಿ, ಉಪನ್ಯಾಸಕಿ ಮೊನಿಷಾ ವಂದಿಸಿದರು.

Highslide for Wordpress Plugin