ಚಿಗುರು ಭಿತ್ತಿ ಪತ್ರಿಕೆ ಮತ್ತು ಕಲಾ ಸಂಘದ ಸಮಾರೋಪ ಸಮಾರಂಭ

ನಾಯಕತ್ವ ಗುಣ, ಬದ್ಧತೆ, ದೃಢ ಸಂಕಲ್ಪವನ್ನು ವಿದ್ಯಾರ್ಥಿಯು ಅಳವಡಿಸಿಕೊಳ್ಳಬೇಕು- ಜೀವನ್‌ದಾಸ್

ಪ್ರತಿಯೊಬ್ಬ ವಿದ್ಯಾರ್ಥಿಯು ವಿವಿಧ ರೀತಿಯ ಸ್ಫರ್ಧಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಾಗ ವ್ಯಕ್ತಿತ್ವ ವಿಕಾಸಗೊಳ್ಳಲು ಮಾತ್ರ ಸಾಧ್ಯ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸಮಾಜಕ್ಕೆ ಪೂರಕವಾದ ಕೆಲಸ ಕಾರ್ಯಗಳನ್ನು ಕೈಗೊಳ್ಳಬೇಕು. ಈ ರೀತಿ ತೊಡಗಿಸಿಕೊಳ್ಳುವುದರಿಂದ ದೇಶವು ಉನ್ನತಿಗೇರಲು ಸಾಧ್ಯ ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜೀವನ್‌ದಾಸ್ ಹೇಳಿದರು.

Jeevandas-Speaking

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಚಿಗುರು ಭಿತ್ತಿ ಪತ್ರಿಕೆ ಮತ್ತು ಕಲಾ ಸಂಘದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಉತ್ತಮ ವ್ಯಕ್ತಿತ್ವದ ಜೊತೆ ಒಳ್ಳೆಯ ಅಂಕಗಳು ಸಮ್ಮಿಳಿತಗೊಂಡಗ ಯಶಸ್ವಿ ವ್ಯಕ್ತಿ ರೂಪುಗೊಳ್ಳುತ್ತಾನೆ. ತನ್ನ ಗುರಿಯನ್ನು ನಿರ್ಧರಿಸಿಕೊಂಡು ನಾಯಕತ್ವ ಗುಣ ಮನೋದೈಹಿಕ ಸಾಮರ್ಥ್ಯ,ಆತ್ಮವಿಶ್ವಾಸ, ಆತ್ಮಾವಲೋಕನ, ಬದ್ಧತೆ, ದೃಢ ಸಂಕಲ್ಪಗಳನ್ನು ಮೈಗೂಡಿಸಿಕೊಂಡಾಗ ಬದುಕು ಸಫಲವಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಕಾರ್ಡ್­ನಲ್ಲಿ ಕಥೆಗಳು ಸ್ಫರ್ಧೆಯಲ್ಲಿ ವಿಜೇತರಾದ ಬೆಥನಿ ಶಾಲೆಯ ವಿದ್ಯಾರ್ಥಿ ಸಂಯಕ್ತ ಇವರಿಗೆ ಬಹುಮಾನವನ್ನು ನೀಡಲಾಯಿತು.

ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಕುಸುಮ ಸ್ವಾಗತಿಸಿ ಜ್ಯೋತಿಕಲಕ್ಷ್ಮಿ ವಂದಿಸಿದರು.

Highslide for Wordpress Plugin