ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಕಾಲೇಜಿನ ಬಾಲಕರ ತಂಡಕ್ಕೆ ರನ್ನರ್‍ಸ್ ಅಪ್ ಪ್ರಶಸ್ತಿ

ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಫನಾ ಪಿಯು ಕಾಲೇಜು ಬಜ್ಪೆಯಲ್ಲಿ ಅಗಸ್ಟ್ 18, 2016 ರಂದು ನಡೆದ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಕಾಲೇಜಿನ ಬಾಲಕರ ತಂಡ ರನ್ನರ್‍ಸ್ ಅಪ್ ಪ್ರಶಸ್ತಿಯನ್ನು ಪಡೆದಿದೆ. ಸುಮಾರು 20 ಕ್ಕೂ ಮಿಕ್ಕಿ ಕಾಲೇಜುಗಳ 106 ಸ್ಪರ್ಧಿಗಳು ಭಾಗವಹಿಸಿದ ಪಂದ್ಯಾಟದಲ್ಲಿ ಮೂರನೇ ಸ್ಥಾನಗಳಿಸಿದ ವತನ್ ಹಾಗೂ ಐದನೇ ಸ್ಥಾನಗಳಿಸಿದ ಚಿರಾಗ್ ಹಿರಿಂಜ ಇವರು ರಾಯಚೂರ್‌ನಲ್ಲಿ ನಡೆಯುವ ರಾಜ್ಯಮಟ್ಟದ ಚೆಸ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ತಂಡದ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದ ಅಭಿನಂದಿಸಿದ್ದಾರೆ.

IMG-20160820-WA0030

Highslide for Wordpress Plugin