ಪುನಶ್ಚೇತನ ಶಿಬಿರದಲ್ಲಿ ಕ್ಯಾ. ಗಣೇಶ್ ಕಾರ್ಣಿಕ್

ಪುತ್ತೂರು :  ‘ಗುಣ ಮಟ್ಟದ ಶಿಕ್ಷಕರ ಕೊರತೆ ಜಾಗತಿಕ ಸಮಸ್ಯೆಯಾಗಿದೆ. ಭಾರತೀಯ ಶಿಕ್ಷಕರಿಗೆ ಈ ಸಮಸ್ಯೆಯನ್ನು ನೀಗಲು ಸಾಧ್ಯವಿದೆ. ಭಾರತದ ಪಾರಂಪಾರಿಕ ಶಿಕ್ಷಣವೇ ಗುಣಮಟ್ಟದಾಗಿತ್ತು. ಕಾಲಕ್ಕೆ ಅನುಗುಣವಾದ ಶಿಕ್ಷಣದತ್ತ ಭಾರತೀಯರು ಒಲವು ತೋರುತ್ತ ಬಂದಿದ್ದಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಧ್ಯಾಪಕರು ಅಪಡೇಟ್ ಆಗಬೇಕಾದದ್ದು ಅನಿವಾರ್ಯ’ ಎಂದು ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಅವರು ಹೇಳಿದರು.

DSC_0039

ವಿವೇಕಾನಂದ ಪ.ಪೂ.ಕಾಲೇಜಿನಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರಶಿಕ್ಷಣ ಘಟಕದ ವತಿಯಿಂದ ನಡೆದ ಉಪನ್ಯಾಸಕರ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಮೂಡಿತ್ತಾಯ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪ್ರಾಂಶುಪಾಲ ಜೀವನ್‌ದಾಸ್ ಸ್ವಾಗತಿಸಿದರು. ಉಪನ್ಯಾಸಕಿ ವಿದ್ಯಾಪಾರ್ವತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Highslide for Wordpress Plugin