ವರ್ಣ ಚಿತ್ರ ಸ್ಪರ್ಧೆ

ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ 29-11-2013 ಮತ್ತು 30-11-2013 ರಂದು ನಡೆದ ಕನಸುಗಳು ಕಾರ್ಯಕ್ರಮದಡಿಯಲ್ಲಿ ನಡೆಸಿದ ವರ್ಣಚಿತ್ರ ಸ್ಪರ್ಧೆಯಲ್ಲಿ ಹದಿನೈದು ಪ್ರೌಢ ಶಾಲೆಯ ಇಪ್ಪತ್ತೊಂಭತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪೂರ್ವಾಹ್ನ 10-30 ರಿಂದ ಪ್ರಾರಂಭವಾದ ಸ್ಪರ್ಧೆಯು ಮೂರು ಘಂಟೆಗಳ ಕಾಲಾವಧಿಯಲ್ಲಿ ಜರುಗಿತು. ಈ ಸ್ಪರ್ಧೆಯಲ್ಲಿ ಉತ್ಸುಕತೆಯಿಂದ ಭಾಗವಹಿಸಿದ ವಿದ್ಯಾರ್ಥಿಗಳು ಸೂರ್ಯೋದಯದ ಸೌಂದರ್ಯದ ಕುರಿತಾಗಿ ವರ್ಣಚಿತ್ರವನ್ನು ಚಿತ್ರಿಸಿದರು. ಸ್ಪರ್ಧೆಯ ತೀರ್ಪುಗಾರರಾಗಿ ಶ್ರೀ ಮೌನೇಶ್, ಭಾವನಾ ಕಲಾ ಆರ್ಟ್ಸ್ ಮತ್ತು ಶ್ರೀ ಹರೀಶ್ ಶಾಸ್ತ್ರೀ ಉಪನ್ಯಾಸಕರು ಭೌತ ವಿಜ್ಞಾನ ವಿಭಾಗ ಇವರು ಸಹಕರಿಸಿದರು. ತೀರ್ಪಗಾರರ ತೀರ್ಪಿನಂತೆ ಅತ್ತ್ಯುತ್ತiವಾದ ಎಂಟು ವರ್ಣಚಿತ್ರಗಳಿಗೆ ಬಹುಮಾನವನ್ನು ವಿತರಿಸಲಾಯಿತು.

Highslide for Wordpress Plugin