ವಾಣಿಜ್ಯ ಸಂಘದ ಸಮಾರೋಪ ಸಮಾರಂಭ

ವಿದ್ಯಾರ್ಥಿ ಜೀವನದಲ್ಲಿ ಬದುಕಿನ ವಿವಿಧ ಆಯಾಮಗಳನ್ನು ಅರ್ಥೈಸಿಕೊಂಡು ಅದನ್ನು ಬದುಕಿನ ವಿವಿಧ ಹಂತಗಳಲ್ಲಿ ಸಮಾಜಮುಖಿಯಾಗಿ ಬಳಸಿಕೊಳ್ಳಬೇಕು ಎಂದು ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಉಪನ್ಯಾಸಕ ಹರಿಪ್ರಸಾದ್ ಹೇಳಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ವಾಣಿಜ್ಯ ಸಂಘದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

Hariprasad-Speaking1

ವಾಣಿಜ್ಯ ಕ್ಷೇತ್ರ ದಿನದಿಂದ ದಿನಕ್ಕೆ ತಂತ್ರಜ್ಞಾನದ ಜೊತೆ ಸೇರಿ ಬದಲಾಗುತ್ತಿದ್ದು ಅಂತಹ ಬದಲಾನಣೆಗಳನ್ನು ವಿದ್ಯಾರ್ಥಿಗಳು ಹತ್ತಿರದಿಂದ ಗಮನಿಸಿ ಅದನ್ನು ಅಳವಡಿಸಿಕೊಂಡಲ್ಲಿ ಮಾತ್ರ ಔದ್ಯೋಗಿಕ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ. ದಿನನಿತ್ಯ ತರಗತಿಯೊಳಗೆ ಅಧ್ಯಯನ ಮಾಡುವ ವಿಷಯಕ್ಕೆ ಪೂರಕವಾಗಿ ಅದರ ಜೊತೆ ವಾಣಿಜ್ಯದ ಸ್ಥಿತ್ಯಂತರಗಳನ್ನು ತಿಳಿದುಕೊಂಡಾಗ ವಿದ್ಯಾರ್ಥಿಯು ಉದ್ಯೋಗ ಮಾರುಕಟ್ಟೆಯಲ್ಲಿ ಉತ್ತಮ ಅಭ್ಯರ್ಥಿಯಾಗಿ ಮೂಡಿಬರುತ್ತಾನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಉಪನ್ಯಾಸಕ ಶ್ರೀಧರ್ ಶೆಟ್ಟಿಗಾರ್ ಮಾತನಾಡಿ ಉನ್ನತ ಸಾಧನೆ ಮಾಡಿದ ಸಾಧಕರ ಯಶಸ್ಸು ಶಾಲಾ ದಿನಗಳ ಪಠ್ಯೇತರ ಚಟುವಟಿಕೆಯಿಂದ ಮೊಳಕೆ ಒಡೆದು ಹೆಮ್ಮರವಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆ ಅತೀ ಅವಶ್ಯಕ ಎಂದರು.

ವಿದ್ಯಾರ್ಥಿನಿ ಸಮೃದ್ದಿ ಸ್ವಾಗತಿಸಿ ಶ್ರೀಹರ್ಷ ವಂದಿಸಿದರು.ಕಾರ್ಯಕ್ರಮವನ್ನು ಪ್ರತೀಕ್ಷಾ ಕಾನ ನಿರ್ವಹಿಸಿದರು.

Highslide for Wordpress Plugin