ವಿಜ್ಞಾನ ಕ್ಷೇತ್ರದತ್ತ ಹೆಚ್ಚಿನ ಒಲವಿರಲಿ: ವಿದ್ಯಾರ್ಥಿಗಳಿಗೆ ಕರೆ

ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಕನಸುಗಳು-2013

ಭಾರತ ಅತ್ಯುನ್ನತವಾದ ರಾಷ್ಟ್ರ ಮಂಗಳಯಾನಕ್ಕೆ ಬೇಕಾದ ಎಲ್ಲಾ ಸಾಧನೆಗಳನ್ನು ನಮ್ಮ ದೇಶದಲ್ಲಿಯೇ ತಯಾರಿಸುವ ಮೂಲಕ ಭಾರತ ಒಳ್ಳೆಯ ಗುರಿಯೊಂದಿಗೆ ಮುನ್ನಡೆಯುತ್ತಿದೆ. ಸಮಾಜದ ಅಭಿವೃದ್ದಿಗೆ ಮತ್ತು ದೇಶ ರಕ್ಷಣೆಯ ಉದ್ದೇಶದಿಂದಲೂ ಬಾಹ್ಯಕಾಶ ಸಂಶೋಧನೆಗಳು ಅಗತ್ಯ ಎಂದು ಭಾರತದ ಪರಮಮಾಣು ಶಕ್ತಿ ಮತ್ತು ಬಾಹ್ಯಾಕಾಶ ಭೂಮಿಯ ಆಯೋಗಗಳ ಹಣಕಾಸು ವಿಭಾಗದ ಸದಸ್ಯ ವಿ.ವಿ ಭಟ್ ತಿಳಿಸಿದರು.

ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನ. 29 ರಂದು 10 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಕನಸುಗಳು-2013 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬೇರೆ ಬೇರೆ ರೀತಿಯಲ್ಲಿ ಮಾಹಿತಿಗಳನ್ನು ಸಂಗ್ರಹಿಸುವ ಉಪಗ್ರಹಗಳ ಬಗ್ಗೆ ಸಂಶೋಧನೆ ಅಗತ್ಯವಿದೆ. ಅದಕ್ಕಾಗಿ ಒಂದೇ ಕ್ಷೇತ್ರದ ಮೇಲೆ ಹೆಚ್ಚು ಪ್ರಭಾವ ಬೀರಲು ಸಾಧ್ಯವಿಲ್ಲ. ಭಾರತವು ಇನ್ನೊಂದು ದೇಶದ ಮೇಲೆ ಅವಲಂಬಿಸದೆ ಮಂಗಳಯಾನ ಉಪಗ್ರಹ ಉಡಾವಣೆ ನಡೆಸಿದೆ. ಮಾಂಗಳಯಾನಕ್ಕೆ ಹೋಗಿರುವ ಉಪಗ್ರಹಗಳು ಯಾವ ರೀತಿಯಲ್ಲಿ ಕಾರ್ಯಾಚರಿಸುತ್ತಿರುತ್ತವೆ ಎಂಬುದನ್ನು ಸುಮಾರು ಐದು ಸಾವಿರ ಕಿ.ಮೀ ದೂರದಿಂದ ನಿಯಂತ್ರಿಸಲು ಸಾಧ್ಯವಿರುವ ತಂತ್ರಜ್ಞಾನಗಳು ನಮ್ಮಲ್ಲಿವೆ. ದೇಶದ ಭವಿಷ್ಯ ಮತ್ತು ಆರ್ಥಿಕಾಭಿವೃದ್ದಿ ದೃಷ್ಠಿಯಿಂದ ಮತ್ತು ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಉಪಗ್ರಹಗಳ ಉಡಾವಣೆ ಅಗತ್ಯವಿದೆ. ಇಂದು ಸಮಾಜದ ಅಭಿವೃದ್ದಿಗೆ ಮಾತ್ರವಲ್ಲದೆ ದೇಶ ರಕ್ಷಣೆಯ ಉದ್ದೇಶದಿಂದಲೂ ಬಾಹ್ಯಾಕಾಶ ಸಂಶೋಧನೆಗಳು ಅಗತ್ಯ ಎಂದ ಅವರು, ಮಕ್ಕಳು ವಿಜ್ಞಾನ ಕ್ಷೇತ್ರದತ್ತ ಹೆಚ್ಚಿನ ಒಲವನ್ನು ತೋರಿಸಬೇಕು ವಿಜ್ಞಾನಿಗಳಿಗಾಗಿ ಇನ್ನೊಂದು ದೇಶದ ಸಹಾಯವನ್ನು ಪಡೆಯುವಂತಾಗಬಾರದು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಕಲಿಕಾ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಶ್ರೀ ಜಯರಾಮ ಭಟ್ ಮಾತನಾಡಿ, ವಿದ್ಯಾರ್ಥಿಗಳಿಗೆ ಮುಂದಿನ ಜೀವನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿಕನಸುಗಳು ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಿಷ್ಠಾವಂತ ಭಾರತೀಯ ವಿಜ್ಞಾನಿಗಳಾಗಿ ವಿದ್ಯಾರ್ಥಿಗಳು ಬೆಳೆಯಬೇಕು ಎಂದರು. ಪ್ರಾಂಶುಪಾಲ ಜೀವನ್ ದಾಸ್, ಕಾರ್ಯಕ್ರಮದ ಸಂಯೋಜಕ ವಿ.ಜಿ. ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಹುಮಾನ ವಿತರಣೆ ಕನಸುಗಳು ವಿಶೇಷ ಕಾರ್ಯಕ್ರಮದ ಅಂಗವಾಗಿ ಗ್ರಾಮ ವೀಕ್ಷಣೆ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

4 ತಾಲೂಕಿನ 22 ಪ್ರೌಢಶಾಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉಪನ್ಯಾಸಕಿ ವಿನೋದ ಸರಸ್ವತಿ ಸ್ವಾಗತಿಸಿದರು. ವಿದ್ಯಾರ್ಥಿನಿ ಸಿಂಚನ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ಜೀವಶಾಸ್ತ್ರ ವಿಭಾಗದ ಮುರಳಿ ಪಿ ಹೆಚ್ ವಂದಿಸಿದರು. ಉಪನ್ಯಾಸಕ ರೋಹಿಣಾಕ್ಷ ಸಹಕರಿಸಿದರು. ಸಭಾ ಕರ್ಯಕ್ರಮದ ಬಳಿಕ ಸಾರ್ವಜನಿಕರಿಗಾಗಿ ಭಾರತ ಸರ್ಕಾರ ಮತ್ತು ಮಾಹಿತಿ ತಂತ್ರಜ್ಞಾನದ ಸಲಹೆಗರ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಸಿ.ವಿ ಗೋಪಿನಾಥರವರಿಂದ ವೈದಿಕ ಚಿಂತನೆಗಳಲ್ಲಿ ಹಿಮಾಲಯ ದರ್ಶನ ಕುರಿತು ವಿಶೇಷ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸಿ.ವಿಗೋಪಿನಾಥರವರನ್ನು ಸನ್ಮಾನಿಸಲಾಯಿತು.

ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಟಿ. ಉದ್ಘಾಟಿಸಿದರು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ ಪೈ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲಕ ಪ್ರಸಾದ್ ಶ್ಯಾನ್‌ಭಾಗ್ ಉಪಸ್ಥಿತರಿದ್ದರು. ಬಳಿಕ ಪೆರುವಾಜೆ ಮತ್ತು ವಾರಣಾಸಿಯಲ್ಲಿ ಗ್ರಾಮ ವೀಕ್ಷಣೆ ನಡೆಸಿದರು. ಉಪನ್ಯಾಸಕರಾದ ಪರಮೇಶ್ವರ್ ಹಾಗೂ ರೋಹಿತ್ ಗ್ರಾಮ ವೀಕ್ಷಣೆಯ ಸಂದರ್ಭದಲ್ಲಿ ಸಹಕರಿಸಿದರು.

2014 : ವಿವೇಕಾನಂದದಲ್ಲಿ ರಾಜ್ಯ ಮಟ್ಟದ ವಿಜ್ಞಾನಮೇಳ: ಈ ಕಾರ್ಯಕ್ರಮ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ 4 ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನವನ್ನು ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ. 2014 ರಲ್ಲಿ ಕಾಲೇಜಿನಲ್ಲಿ ರಾಮಟ್ಟದ ವಿಜ್ಞಾನಮೇಳ ನಡೆಯಲಿದ್ದು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕನಸುಗಳು ಕಾರ್ಯಕ್ರಮವನ್ನು 3 ದಿನಗಳ ಕಾರ್ಯಕ್ರಮವಾಗಿ ಆಯೋಜಿಸಲಾಗುವುದು ಎಂದು ಕಾಲೇಜು ಸಂಚಾಲಕ ಶ್ರೀ ಜಯರಾಮ ಭಟ್ ಹೇಳಿದರು.

Highslide for Wordpress Plugin