ವಿದ್ಯಾರ್ಥಿ ನಿಲಯದ ಹೆತ್ತವರ ಸಭೆ

ಮಕ್ಕಳು ಇಚ್ಛಾಶಕ್ತಿ, ಬದ್ಧತೆ, ಛಲವನ್ನು ಬೆಳೆಸಿಕೊಳ್ಳಬೇಕು. ನಕರಾತ್ಮಕ ಮಾತುಗಳನ್ನಾಡದೆ ಸಕರಾತ್ಮಕ ಮಾತುಗಳನ್ನು ಆಡುವಂತೆ ಮಕ್ಕಳಲ್ಲಿ ಜಾಗೃತಿಯನ್ನು ತರಬೇಕು. ಅಧ್ಯಯನ ಮತ್ತು ಸಹಕಾರ ಮನೋಭಾವವನ್ನು ಮಕ್ಕಳಲ್ಲಿ ಮೂಡಿಸುವುದು ಹೆತ್ತವರ ಕರ್ತವ್ಯ ಎಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಂಚಾಲಕರಾದ ಶ್ರೀ ರಾಧಕೃಷ್ಣ ಭಕ್ತ ತಿಳಿಸಿದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ನಿಲಯದ ಹೆತ್ತವರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

Shri-Radhakrishna-Bhakta-speaking

ಮಕ್ಕಳಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ಮೂಡಿಸಬೇಕಾದುದು ಪ್ರತಿಯೊಬ್ಬ ಹೆತ್ತವರ ಜವಾಬ್ದಾರಿ. ಜೀವನದಲ್ಲಿ ಸ್ಪಷ್ಟತೆ ಇದ್ದಾಗ ಯಶಸ್ಸು ಗಳಿಸಲು ಸಾಧ್ಯ.ವಿದ್ಯಾರ್ಥಿಗಳು ಮುಂದೆ ಬರುವ ಪರೀಕ್ಷೆಗಳಿಗೆ ಈ ಕೂಡಲೇ ತಯಾರಿಯನ್ನು ನಡೆಸಬೇಕು. ವಿದ್ಯಾರ್ಥಿಗಳು,ಹೆತ್ತವರು, ಅಧ್ಯಾಪಕವೃಂದ ಒಟ್ಟಾಗಿ ಕೈ ಜೋಡಿಸಿದಾಗ ಶಿಕ್ಷಣ ಸಂಸ್ಥೆ ಉನ್ನತಿಗೇರಲು ಸಾಧ್ಯ ಎಂದರು.

ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಹರೀಶ ಶಾಸ್ತ್ರಿಪರೀಕ್ಷಾ ತಯಾರಿ ಯೋಜನೆಗಳ ವಿವರ ನೀಡಿದರು.

ವಿದ್ಯಾರ್ಥಿ ನಿಲಯ ಸಮಿತಿಯ ಕಾರ್ಯದರ್ಶಿಯವರಾದ ಶ್ರೀ ತಿರುಮಲೇಶ್ವರ ಭಟ್ ವಿದ್ಯಾರ್ಥಿಗಳಿಗೆ ಮತ್ತು ಹೆತ್ತವರಿಗೆ ಶುಭ ಹಾರೈಸಿದರು.

ಸಮಾರಂಭದಲ್ಲಿ ಸಂಚಾಲಕರಾದ ಶ್ರೀ ಸಂತೋಷ್ ಬಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಶ್ಯಾಮಲ, ಸದಸ್ಯರಾದ ಶ್ರೀ ರವಿಮುಂಗ್ಲಿಮನೆ, ಶ್ರೀ ಶ್ರೀನಿವಾಸ್ ಭಟ್, ಪ್ರಾಂಶುಪಾಲರಾದ ಶ್ರೀ ಜೀವನ್‌ದಾಸ್ ಮೊದಲಾದವರು ಉಪಸ್ಥಿತರಿದ್ದರು.

ಆಂಗ್ಲ ವಿಭಾಗದ ಉಪನ್ಯಾಸಕಿ ಶ್ರೀಮತಿ ಮಂಗಳಾ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಾಂಶುಪಾಲರಾದ ಶ್ರೀ ಜೀವನ್‌ದಾಸ್ ಸ್ವಾಗತಿಸಿ, ಉಪನ್ಯಾಸಕ ಶ್ರೀ ನಾಗರಾಜ್ ವಂದಿಸಿದರು.

Highslide for Wordpress Plugin