ವಿದ್ಯಾರ್ಥಿ ಸಂಘದ ಚುನಾವಣೆ

ವಿವೇಕಾನಂದ ಪದವಿ ಪೂರ್ವ ಕಾಲೇಜಿನ ೨೦೧೪-೧೫ ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆ ಇತ್ತೀಚೆಗೆ ನಡೆದು,ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಅನುಪಮ್ ಶೆಟ್ಟಿ ದ್ವಿತೀಯ ಪಿ.ಯು.ಸಿ ವಿಜ್ಞಾನ ‘ಎ’ ವಿಭಾಗ., ಕಾರ್ಯದರ್ಶಿಯಾಗಿ ವಿನುತ್ ಎನ್ ಶೆಟ್ಟಿ ದ್ವಿತೀಯ ಪಿ.ಯು.ಸಿ. ವಾಣಿಜ್ಯ ‘ಸಿ’ ವಿಭಾಗ ಹಾಗೂ ಜೊತೆ ಕಾರ್ಯದರ್ಶಿಯಾಗಿ ಕುಮಾರಿ ಪ್ರೇಕ್ಷಾ ಬಾಲಕೃಷ್ಣ ಶೆಟ್ಟಿ ದ್ವೀತಿಯ ಪಿ.ಯು.ಸಿ.ವಾಣಿಜ್ಯ ‘ಡಿ’ ವಿಭಾಗ ಇವರುಗಳು ಆಯ್ಕೆಯಾಗಿರುತ್ತಾರೆ.ಪ್ರತಿ ತರಗತಿಗಳಿಂದ ಆಯ್ಕೆಯಾದ ಎರಡು ತರಗತಿ ಪ್ರತಿನಿಧಿಗಳು ವಿದ್ಯಾರ್ಥಿಸಂಘದ ಈ ಪದಾಧಿಕಾರಿಗಳನ್ನು ಮತದಾನದ ಮೂಲಕ ಆಯ್ಕೆ ಮಾಡಿದರು.ಚುನಾವಣಾ ಪ್ರಕ್ರಿಯೆಯನ್ನು ಪ್ರಾಂಶುಪಾಲರಾದ ಶ್ರೀ.ಜೀವನ್‌ದಾಸ್,ವಿದ್ಯಾರ್ಥಿ ಕ್ಷೇಮ ಪಾಲಕರಾದ ಶ್ರೀ ಪ್ರಸಾದ್ ಶ್ಯಾನಭಾಗ್,ಶ್ರೀ ಮುರಳಿ ಪಿ.ಜಿ., ಶ್ರೀಮತಿ ನಳಿನಾ ಕುಮಾರಿ,ಶ್ರೀಮತಿ ವಿನೋದ ಸರಸ್ವತಿ ಇವರುಗಳು ನಡೆಸಿಕೊಟ್ಟರು.

Highslide for Wordpress Plugin