ವಿವೇಕಾನಂದದಲ್ಲಿ ಜೆ.ಇ.ಇ. ಮತ್ತು ನೀಟ್ ಪುಸ್ತಕಗಳ ಬಿಡುಗಡೆ

ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳನ್ನೆದುರಿಸಲು ಸಹಾಯವಾಗುವಂತೆ ವಿದ್ಯಾರ್ಥಿಗಳಿಗಾಗಿ ತಯಾರಿಸಲಾದ ಜೆ.ಇ.ಇ ಮತ್ತು ನೀಟ್ ಪುಸ್ತಕಗಳನ್ನು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿಶೇಷ ತರಗತಿಗಳ ಹೆತ್ತವರ-ಶಿಕ್ಷಕರ ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು. ಇಂತಹ ಪುಸ್ತಕಗಳ ಮತ್ತು ಅಧ್ಯಾಪಕರ ಮಾರ್ಗದರ್ಶನವನ್ನು ಸೂಕ್ತವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಲಿ ಎಂದು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ರವಿ ಮುಂಗ್ಲಿ ಮನೆ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

DSC_2102

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ನೀಡಲು ಆಡಳಿತ ಮಂಡಳಿ ಸಿದ್ಧವಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಅಧ್ಯಾಪಕರಾದ ಶ್ರೀ ಹರೀಶ ಶಾಸ್ತ್ರಿ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಾಲೇಜಿನ ಹಿಂದಿನ ಸಾಧನೆ ಮತ್ತು ಪ್ರಸ್ತುತ ವಿಶೇಷ ತರಗತಿಯ ಉದ್ದೇಶ, ಕಲ್ಪನೆ ಮತ್ತು ಗುರಿಗಳ ಬಗ್ಗೆ ಹೆತ್ತವರಿಗೆ ವಿವರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎ. ಜೀವನ್ ದಾಸ್ ಅವರು ವಿದ್ಯಾರ್ಥಿಗಳ ಸಾಧನೆಗೆ ಪೂರಕವಾಗಿ ಹೆತ್ತವರು ಮತ್ತು ಅಧ್ಯಾಪಕರು ಮಾಡಬೇಕಾದ ಕಾರ್ಯಗಳ ಬಗ್ಗೆ ತಿಳಿಸಿದರು. ಸಭೆಯಲ್ಲಿ ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಶ್ರೀನಿವಾಸ ಭಟ್, ಕೋಶಾಧಿಕಾರಿಗಳಾದ ಶ್ರೀ ಕೇಶವ ಮೂರ್ತಿ ಮತ್ತು ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು. ರಾಸಾಯನ ಶಾಸ್ತ್ರ ಉಪನ್ಯಾಸಕಿ ಕುಮಾರಿ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಕು. ಅವನಿ ಪ್ರಾರ್ಥಿಸಿದರು, ಆಂಗ್ಲ ಭಾಷಾ ಪ್ರಾಧ್ಯಾಪಕ ಶ್ರೀ ನಾಗರಾಜ್ ವಂದಿಸಿದರು.

Highslide for Wordpress Plugin