ವಿವೇಕಾನಂದ ಪ.ಪೂ.ಕಾಲೇಜಿನಲ್ಲಿ ರೋಟರಿ ಇಂಟರ್‍ಯಾಕ್ಟ್ ಕ್ಲಬ್‌ನ ಉದ್ಘಾಟನೆ

ಪುತ್ತೂರು : ಸಂಘಟನೆಯ ಮೂಲಕ ವಿದ್ಯಾರ್ಥಿಗಳಿಗೆ ಲೋಕಾನುಭವ ಹೆಚ್ಚಾಗುತ್ತದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ವ್ಯಕ್ತಿಗಳೊಂದಿಗೆ ಬೆರೆಯುವ ಅವಕಾಶ ಇಂಟರ್‍ಯಾಕ್ಟ್ ಕ್ಲಬ್‌ನ ಸದಸ್ಯರಿಂದ ವಿದ್ಯಾರ್ಥಿಗಳಿಗೆ ದೊರೆಯುತ್ತದೆ ಎಂದು ರೋಟರಿ ಕ್ಲಬ್‌ನ ಜಿಲ್ಲಾ ಕಾರ್ಯದರ್ಶಿಯಾಗಿರುವ ಡಾ.ಸೂರ್ಯನಾರಾಯಣ ಕೆ.ಅವರು ಹೇಳಿದರು. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ರೋಟರಿ ಕ್ಲಬ್ ನ ಘಟಕವಾದ ಇಂಟರ್‍ಯಾಕ್ಟ್ ಕ್ಲಬ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ರೋಟರಿಕ್ಲಬ್ ನ ಪುತ್ತೂರು ಪೂರ್ವದ ಅಧ್ಯಕ್ಷರಾಗಿರುವ ಕೆ.ವಿ.ಶೆಣೈ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಜೀವನ್ ದಾಸ್ ಉಪಸ್ಥಿತರಿದ್ದರು. ಕಾಲೇಜು ಸಂಚಾಲಕರಾದ ಜಯರಾಮ ಭಟ್ ಅವರು ಪ್ರಾಸ್ತವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ಅಖಿಲ ಪ್ರಾರ್ಥಿಸಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರಸಾದ್ ಶ್ಯಾನ್‌ಭಾಗ್ ಅವರು ಸ್ವಾಗತಿಸಿದರು. ಉಪನ್ಯಾಸಕಿ ಅಕ್ಷತಾ ಕಾರ್ಯಕ್ರಮ ನಿರೂಪಿದರು. ವಿದ್ಯಾರ್ಥಿನಿ ಪ್ರೇಕ್ಷಾ ವಂದಿಸಿದರು.

ನೂತನ ಇಂಟರ್‍ಯಾಕ್ಟ್ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ವಿನೂತ್‌ಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ಆಯ್ಕೆಯಾದ ಪ್ರೇಕ್ಷಾ ಬಿ. ಶೆಟ್ಟಿ ಅವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.

Highslide for Wordpress Plugin