ಸರ್ವೋದಯ ಸಮಾಜದ ಪರಿಕಲ್ಪನೆ – ಡಾ. ಪೀಟರ್ ವಿಲ್ಸನ್ ಪ್ರಭಾಕರ

ಎಲ್ಲಾ ವರ್ಗದ, ಎಲ್ಲಾಜನರ ಏಳಿಗೆ ಅಭಿವೃದ್ಧಿಯನ್ನು ಬಯಸುವುದು, ಬಡವರನ್ನು ಭೌತಿಕವಾಗಿ ಶ್ರೀಮಂತರನ್ನು ನೈತಿಕವಾಗಿ ಬಲಪಡಿಸುವುದು ಬಹು ಜನಕಲ್ಯಾಣ ಸಿಧ್ಧಾಂತ ಎಂದು ಡಾ. ಪೀಟರ್ ವಿಲ್ಸನ್ ಪ್ರಭಾಕರ, ಮುಖ್ಯಸ್ಥರು, ಇತಿಹಾಸ ವಿಭಾಗ, ವಿವೇಕಾನಂದಕಾಲೇಜು, ಪುತ್ತೂರುಇವರು ಹೇಳಿದರು. ಅವರು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ಆಯೋಜಿಸಲಾಗಿದ್ದ ಸರ್ವೋದಯ ಸಮಾಜದ ಪರಿಕಲ್ಪನೆಗಳು ಎಂಬ ವಿಷಯದ ಕುರಿತು ಮಾತಾನಾಡುತ್ತಿದ್ದರು.

ಅಧಿಕಾರದ ರಾಜಕೀಯವನ್ನು ಸಹಕಾರತತ್ವದ ವ್ಯವಸ್ಥೆಯಲ್ಲಿ ತರುವುದು, ಸ್ವಾತಂತ್ರ್ಯ, ಸಮಾನತೆ, ನ್ಯಾಯ, ಸಹೋದರತ್ವವನ್ನು ಬೆಳೆಸಿ ಅವರವರ ಕರ್ತವ್ಯವನ್ನು ಅರಿತು ಬಾಳಿದಾಗ ಮಹಾತ್ಮಾ ಗಾಂಧೀಜಿಯವರ ಸರ್ವೋದಯ ಸಮಾಜದ ಪರಿಕಲ್ಪನೆಗಳ ಅನಷ್ಟಾನ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ. ಜೀವನ್‌ದಾಸ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಉಪನ್ಯಾಸಕಿ ಶ್ರೀಮತಿ ಉಷಾ ಎನ್. ಒ. ಸಂಯೋಜಿಸಿದರು. ವಿದ್ಯಾರ್ಥಿಗಳಾದ ಕು. ವಸುಂಧರ ಲಕ್ಷ್ಮೀ ಸ್ವಾಗತಿಸಿ, ಕು. ಶ್ವೇತಾಜೆ ರಾವ್ ನಿರ್ವಹಿಸಿ ವಂದಿಸಿದರು.

Highslide for Wordpress Plugin