ವಿವೇಕಾನಂದ ಪ.ಪೂ. ಕಾಲೇಜಿನಲ್ಲಿ ಅಭಿನಂದನಾ ಸಮಾರಂಭ

ಪುತ್ತೂರು.ಜು. 7: ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ, ವಿವೇಕಾನಂದ ಪ.ಪೂ. ಕಾಲೇಜಿನ 313 ವಿದ್ಯಾರ್ಥಿಗಳನ್ನು ಗೌರವಿಸುವ ಅಭಿನಂದನಾ ಸಮಾರಂಭ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಸಂಚಾಲಕ ರಾಧಾಕೃಷ್ಣ ಭಕ್ತ ಅವರು ಮಾತನಾಡಿ ಅಧಿಕ ಅಂಕ ಗಳಿಸಿರುವ ವಿದ್ಯಾರ್ಥಿಗಳು ಕೇವಲ ವೃತ್ತಿಪರ ಶಿಕ್ಷಣದ ಬಗೆಗೆ ಮಾತ್ರ ಚಿಂತಿಸದೆ, ಐ.ಎ.ಎಸ್, ಐ.ಪಿ.ಎಸ್ ನಂಥ ಪರೀಕ್ಷೆಗಳನ್ನು ಬರೆಯಲು ಮನಸ್ಸು ಮಾಡಬೇಕು.ಆಡಳಿತ್ಮಾತಕ ಹುದ್ದೆಗೇರಿ,ದೇಶಸೇವೆ ಮಾಡುವಂತಾಗಬೇಕುಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ವಸಂತ ಕುಮಾರ್ ಕೆ. ಅವರು ವಿವೇಕಾನಂದ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆಡಳಿತ ಮಂಡಳಿ ಸಂಚಾಲಕರಾದ ಜಯರಾಮ ಭಟ್ ಅವರು ವಿದ್ಯಾರ್ಥಿಗಳಿಗೆ ಶುಭಕೋರಿದರು.

ಉಪನ್ಯಾಸಕರಾದ ಶ್ರೀಮತಿ ಮಾಧವಿ ಪಟೇಲ್, ಕು.ವಿದ್ಯಾಲಕ್ಮೀ ಹಾಗೂ ಶ್ರೀ ಪ್ರಶಾಂತ್ ಶೆಟ್ಟಿ ಅವರು ವಿಶಿಷ್ಟ ಶ್ರೇಣಿ ಪಡೆದ ವಿದ್ಯಾರ್ಥಿಗಲ ಯಾದಿಯನ್ನು ವಾಚಿಸಿದರು.ಅಭಿನಂದನೆ ಸ್ವೀಕರಿಸಿದ ಪೈಕಿ ಶರಣ್ಯ ಬಿ.ಕೆ, ಸುಧೀಂದ್ರರಾವ್, ಶ್ರೀವತ್ಸ, ವಸುಂಧರಲಕ್ಮೀ ಕೃತಜ್ಞತೆಯ ಮಾತುಗಳನ್ನಾಡಿದರು.ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಹೆಚ್.ಕೆ.ಪ್ರಕಾಶ್ ಅಭಿನಂದನಾಭಾಷಣ ಮಾಡಿದರು. ಪ್ರಾಂಶುಪಾಲರಾದ ಜೀವನ್‌ದಾಸ್, ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು ಸಂದರ್ಭೋಕಿವಾಗಿ ಮಾತನಾಡಿದರು.ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರಸಾದ್ ಶ್ಯಾನ್‌ಭಾಗ್ ಸ್ವಾಗತಿಸಿ, ಪ್ರಸ್ತಾವನೆಗೈದರು.ಉಪನ್ಯಾಸಕಿ ಕು.ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು, ಶ್ರೀಮತಿ ವಿನೋದ ಸರಸ್ವತಿ ವಂದಿಸಿದರು.

Highslide for Wordpress Plugin