ಯಶಸ್ - 3 ನೇ ತಂಡದ ಆಯ್ಕೆ ಪ್ರಕ್ರಿಯೆಯ ಸಂದರ್ಶನ

ಯಶಸ್ – 3 ನೇ ತಂಡದ ಆಯ್ಕೆ ಪ್ರಕ್ರಿಯೆಯ ಸಂದರ್ಶನ

Wednesday, February 1st, 2017

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಇದರ ವತಿಯಿಂದ ನಾಗರೀಕ ಸೇವಾ ಪರೀಕ್ಷೆಗಳ ತರಬೇತಿಗಾಗಿ ನಡೆಸಲ್ಪಡುವ ಯಶಸ್ ಇದರ 3 ನೇ ತಂಡದ ಆಯ್ಕೆ ಪ್ರಕ್ರಿಯೆಯ ಸಂದರ್ಶನವು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. ಲಿಖಿತ ಪರೀಕ್ಷೆಯಲ್ಲಿ ಆಯ್ಕೆಗೊಂಡ ಸುಮಾರು 100 ವಿದ್ಯಾರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಸಂದರ್ಶನದ ಮೊದಲು ನಡೆದ ಸಭಾಕಾರ್ಯಕ್ರಮದಲ್ಲಿ ಯಶಸ್‌ನ ನೀತಿನಿಯಮಗಳನ್ನು ಶೈಕ್ಷಣಿಕ ನಿರ್ದೇಶಕರಾದ ಶ್ರೀ ವಿಘೇಶ್ವರ ವರ್ಮುಡಿ ಅವರು ವಿವರಿಸಿದರು. ಯಶಸ್‌ನ ಕಾರ್ಯಕ್ರಮದ ಬಗ್ಗೆ ಅಧ್ಯಕ್ಷರಾದ ಡಾ| ಸೂರ್ಯನಾರಾಯಣ ತಿಳಿಸಿದರು. ಕಾರ್ಯಕ್ರಮವನ್ನು ಅಧ್ಯಾಪಕಿ ಶ್ರೀಮತಿ ವಿಜಯ ಸರಸ್ವತಿ ನಿರೂಪಿಸಿದರು. […]

ದ್ವಿತೀಯ ಪದವಿ ಪೂರ್ವ ವಿದ್ಯಾರ್ಥಿಗಳ ಹೆತ್ತವರ ಸಭೆ

ದ್ವಿತೀಯ ಪದವಿ ಪೂರ್ವ ವಿದ್ಯಾರ್ಥಿಗಳ ಹೆತ್ತವರ ಸಭೆ

Wednesday, January 18th, 2017

ಪ್ರತಿಯೊಂದು ವಿದ್ಯಾಸಂಸ್ಥೆಯಿಂದ ಸಂಸ್ಕಾರಯುತ ಶಿಕ್ಷಣ ಅತ್ಯಂತ ಅವಶ್ಯಕ.ಶಿಕ್ಷಣ ಎನ್ನುವ ಶಬ್ದಕ್ಕೆ ನಿಜವಾದ ಅರ್ಥವನ್ನು ಕಲ್ಪಿಸಲು ವಿದ್ಯಾಸಂಸ್ಥೆಗಳು ಬೆಳೆಯಬೇಕು. ಯಾವುದೇ ವಸ್ತುವಿನ ಹೊರಗಿನ ಶೃಂಗಾರಕ್ಕೆ ಮಾತ್ರ ಆದ್ಯತೆ ನೀಡದೆ ಅದರ ಗುಣಮಟ್ಟದ ಕಡೆಗೆ ಹೆಚ್ಚು ಗಮನ ಹರಿಸಿದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರವೀಂದ್ರ ಪಿ. ಹೇಳಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪದವಿ ಪೂರ್ವ ವಿದ್ಯಾರ್ಥಿಗಳ ಹೆತ್ತವರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. […]

ವಿದ್ಯಾರ್ಥಿ ನಿಲಯದ ಹೆತ್ತವರ ಸಭೆ

ವಿದ್ಯಾರ್ಥಿ ನಿಲಯದ ಹೆತ್ತವರ ಸಭೆ

Sunday, January 15th, 2017

ಮಕ್ಕಳು ಇಚ್ಛಾಶಕ್ತಿ, ಬದ್ಧತೆ, ಛಲವನ್ನು ಬೆಳೆಸಿಕೊಳ್ಳಬೇಕು. ನಕರಾತ್ಮಕ ಮಾತುಗಳನ್ನಾಡದೆ ಸಕರಾತ್ಮಕ ಮಾತುಗಳನ್ನು ಆಡುವಂತೆ ಮಕ್ಕಳಲ್ಲಿ ಜಾಗೃತಿಯನ್ನು ತರಬೇಕು. ಅಧ್ಯಯನ ಮತ್ತು ಸಹಕಾರ ಮನೋಭಾವವನ್ನು ಮಕ್ಕಳಲ್ಲಿ ಮೂಡಿಸುವುದು ಹೆತ್ತವರ ಕರ್ತವ್ಯ ಎಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಂಚಾಲಕರಾದ ಶ್ರೀ ರಾಧಕೃಷ್ಣ ಭಕ್ತ ತಿಳಿಸಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ನಿಲಯದ ಹೆತ್ತವರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಮಕ್ಕಳಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ಮೂಡಿಸಬೇಕಾದುದು ಪ್ರತಿಯೊಬ್ಬ ಹೆತ್ತವರ ಜವಾಬ್ದಾರಿ. ಜೀವನದಲ್ಲಿ ಸ್ಪಷ್ಟತೆ ಇದ್ದಾಗ ಯಶಸ್ಸು ಗಳಿಸಲು ಸಾಧ್ಯ.ವಿದ್ಯಾರ್ಥಿಗಳು […]

ಚಿಗುರು ಭಿತ್ತಿ ಪತ್ರಿಕೆಯ ಸಮಾರೋಪ ಸಮಾರಂಭ

ಚಿಗುರು ಭಿತ್ತಿ ಪತ್ರಿಕೆಯ ಸಮಾರೋಪ ಸಮಾರಂಭ

Saturday, January 7th, 2017

ವಿದ್ಯಾರ್ಥಿಗಳನ್ನು ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳುವಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜು ನಡೆಸುತ್ತಾ ಬಂದಿರುವ ’ಚಿಗುರು’ ಮಹತ್ವದ ಹೆಜ್ಜೆಯಾಗಿದ್ದು ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುತ್ತಿದೆ. ಸಾಹಿತ್ಯದ ಪ್ರಕಾರಗಳಾದ ಕಥೆ, ಕವನ, ಪ್ರಬಂಧ ಮುಂತಾದ ಸೃಜನಶೀಲ ಕ್ರಿಯೆಗಳ ಮೇಲೆ ಆಸಕ್ತಿ ಹುಟ್ಟುವಂತೆ ಮಾಡುತ್ತದೆ ಎಂದು ವಿವೇಕಾನಂದ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಡಾ| ರೋಹಿಣಾಕ್ಷ ಶಿರ್ಲಾಲು ಹೇಳಿದರು. 2016-17  ನೇ ಸಾಲಿನ ಚಿಗುರು ಭಿತ್ತಿ ಪತ್ರಿಕೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಸಾಹಿತ್ಯವು ಸಮಾಜದ ಕೈಗನ್ನಡಿ.ಪ್ರತಿಭೆ, ಪರಂಪರೆಯ ಅರಿವು ಮತ್ತು […]

IGNITE-2016 - ಕಾಲೇಜಿಗೆ ಸಮಗ್ರ ತಂಡ ಪ್ರಶಸ್ತಿ

IGNITE-2016 – ಕಾಲೇಜಿಗೆ ಸಮಗ್ರ ತಂಡ ಪ್ರಶಸ್ತಿ

Tuesday, December 27th, 2016

ಮಂಗಳೂರಿನ ಬೆಸೆಂಟ್ evening ಕಾಲೇಜಿನಲ್ಲಿ ಇತ್ತೀಚೆಗೆ ನಡೆದ IGNITE-2016 ಅಂತರ್ ಪದವಿಪೂರ್ವ ಕಾಲೇಜು ಮಟ್ಟದ ವಿವಿಧ ಸಾಂಸ್ಕೃತಿಕ ಸ್ಫರ್ಧೆಗಳಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜು ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಸಂಗೀತ ಸ್ಫರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಅಂಕಿತಾ ಮತ್ತು ತಂಡಕ್ಕೆ ಪ್ರಥಮ ಬಹುಮಾನ ಲಭಿಸಿದೆ. ಹಾಗೆಯೇ ಛಾಯಾಗ್ರಹಣ ಸ್ಫರ್ಧೆಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಮನೋಜ್­ಗೆ ಪ್ರಥಮ ಸ್ಥಾನ, ಚಿತ್ರಕಲೆಯಲ್ಲಿ ದ್ವಿತೀಯ ಕಲಾ ವಿಭಾಗದ ಲಕ್ಷ್ಮಿಪ್ರಸಾದ್ ಗೆ ಪ್ರಥಮ ಬಹುಮಾನ, ಟ್ರೆಶರ್ ಹಂಟ್ ಸ್ಫರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ […]

ವಾಣಿಜ್ಯ ಸಂಘದ ಸಮಾರೋಪ ಸಮಾರಂಭ

ವಾಣಿಜ್ಯ ಸಂಘದ ಸಮಾರೋಪ ಸಮಾರಂಭ

Tuesday, December 27th, 2016

ವಿದ್ಯಾರ್ಥಿಗಳಿಗೆ ಬದುಕಿನಲ್ಲಿ ಶಿಕ್ಷಣ ಮುಖ್ಯ. ಅದರಲ್ಲೂ ಜೀವನ ಮೌಲ್ಯ ತಿಳಿಸಿಕೊಡುವ ಶಿಕ್ಷಣ ಅತ್ಯಂತ ಹೆಚ್ಚು ಅವಶ್ಯಕ ಎಂದು ಸವಣೂರು ವಿದ್ಯಾರಶ್ಮಿ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾದ್ಯಾಪಕರಾದ ಶ್ರೀ ಪುಷ್ಪರಾಜ್ ಹೇಳಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಾಣಿಜ್ಯ ಸಂಘದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜೀವನ್‌ದಾಸ್ ವಹಿಸಿಕೊಂಡಿದ್ದರು.ಕಾರ್ಯಕ್ರಮದಲ್ಲಿ ವಾಣಿಜ್ಯ ಸಂಘದ ಸಂಯೋಜಕಿ ಕು| ಅಕ್ಷತಾ ಉಪಸ್ಥಿತರಿದ್ದರು. ಸಂಘದ ವತಿಯಿಂದ ನಡೆಸಲಾದ ಹಲವು ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ […]

ಯಶಸ್- 2017 ನೇ ತಂಡದ ಅರ್ಹತಾ ಪ್ರವೇಶ ಪರೀಕ್ಷೆ

ಯಶಸ್- 2017 ನೇ ತಂಡದ ಅರ್ಹತಾ ಪ್ರವೇಶ ಪರೀಕ್ಷೆ

Sunday, December 25th, 2016

ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಭಾರತೀಯ ನಾಗರೀಕ ಸೇವಾ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡುವ ಯಶಸ್-2017 ನೇ ತಂಡದ ಆಯ್ಕೆಗಾಗಿ ನಡೆಸಲಾಗುವ ಅರ್ಹತಾ ಪ್ರವೇಶ ಪರೀಕ್ಷೆಯು ಡಿಸೆಂಬರ್ 25 ರಂದು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. ಪುತ್ತೂರು ಅಸುಪಾಸಿನ ಸುಮಾರು 300  ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಕೊಡಗು ಜಿಲ್ಲೆಯ 8 ಕೇಂದ್ರಗಳಲ್ಲಿ ಏಕಕಾಲದಲ್ಲಿ ನಡೆದ ಪರೀಕ್ಷೆಯಲ್ಲಿ 1000 ಕ್ಕೂ ಹೆಚ್ಚು ಹತ್ತನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಮುಂದೆ ಮೌಖಿಕ […]

ಕಲಾ ಸಂಘದ ಸಮಾರೋಪ ಸಮಾರಂಭ

ಕಲಾ ಸಂಘದ ಸಮಾರೋಪ ಸಮಾರಂಭ

Tuesday, December 20th, 2016

ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧಿಸಲು ನಾವೆಲ್ಲರೂ ಸಮಾಜಮುಖಿಗಳಾಗಿ ಸಮಾಜಕ್ಕೆ ಒಳಿತಾಗುವ ಕಾರ್ಯಗಳನ್ನು ಕೈಗೊಳ್ಳಬೇಕು. ಈ ಮೂಲಕ ಗುರಿಯನ್ನು ಸಾಧಿಸುವಲ್ಲಿ ಪ್ರಯತ್ನಶೀಲರಾಗಬೇಕು ಎಂದು ಪೂತ್ತೂರಿನ ನೆಲ್ಲಿಕಟ್ಟೆಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಪ್ರಾದ್ಯಾಪಕರಾದ ಡಾ| ಶ್ರೀಧರ್ ಹೇಳಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಲಾ ಸಂಘದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಒಬ್ಬ ಕಲಾವಿಭಾಗದ ವಿದ್ಯಾರ್ಥಿ ಸಮಾಜಕ್ಕೆ ಹೆಚ್ಚು ಹತ್ತಿರವಾಗಿರುತ್ತಾನೆ. ಸಮಾಜದಲ್ಲಿ ನಡೆಯುವ ವಿದ್ಯಾಮಾನಗಳ ಬಗ್ಗೆ ಜ್ಞಾನವಿದ್ದಾಗ ಆಧುನಿಕ ಜಗತ್ತಿನಲ್ಲಿ ಅರ್ಥಪೂರ್ಣವಾಗಿ ಬದುಕಲು ಸಾಧ್ಯ […]

ಕನಸುಗಳು -2016 ಕಾರ್ಯಕ್ರಮದ ಸಮಾರೋಪ ಸಮಾರಂಭ

ಕನಸುಗಳು -2016 ಕಾರ್ಯಕ್ರಮದ ಸಮಾರೋಪ ಸಮಾರಂಭ

Sunday, November 27th, 2016

ಕನಸುಗಳ ಪರಿಧಿ ವಿಸ್ತಾರವಾಗಿ ಕನಸು ನನಸಾಗಲಿ. ಇದರಿಂದ ವಿದ್ಯಾರ್ಥಿಗಳ, ಪೋಷಕರ ಕನಸು ನನಸಾಗುತ್ತದೆ ಎಂದು ಖ್ಯಾತ ವಿಜ್ಞಾನಿಯಾದ ಶ್ರೀ ಸುಧೀಂದ್ರ ಹಾಲ್ದೊಡ್ಡೇರಿ ಹೇಳಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಕನಸುಗಳಿಗೆ ವೇದಿಕೆಯನ್ನು ನೀಡುವ ಕನಸುಗಳು-2016 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಮಾನವೀಯ ಮೌಲ್ಯಗಳ ಜೊತೆಜೊತೆಗೆ ಸವಲತ್ತುಗಳನ್ನು ಹೆಚ್ಚಿಸಲು ವಿದ್ಯಾರ್ಥಿಗಳ ಪ್ರಯತ್ನ ನಿರಂತರವಾಗಿರಬೇಕು. ವ್ಯಕ್ತಿ ದೇಶಕ್ಕೆ ಕೊಡುಗೆ ನೀಡಬೇಕಾದರೆ ವಿಜ್ಞಾನಿಯೇ ಆಗಬೇಕೆಂದಿಲ್ಲ. ಯಾವುದೇ ಕ್ಷೇತ್ರದಲ್ಲಿ ಪರಿಣಿತಿಯನ್ನು […]

ಕನಸುಗಳು -2016 ಕಾರ್ಯಕ್ರಮ

ಕನಸುಗಳು -2016 ಕಾರ್ಯಕ್ರಮ

Saturday, November 26th, 2016

ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಛಲ ಮತ್ತು ಆತ್ಮವಿಶ್ವಾಸ ಇದ್ದಾಗ ತಮ್ಮ ಕನಸನ್ನು ನನಸಾಗಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ ಇದರ ವಿಶ್ರಾಂತ ಕುಲಪತಿಯವರಾದ ಡಾ| ಮೀನಾ ಚಂದಾವರ್‌ಕರ್ ಹೇಳಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಕನಸುಗಳಿಗೆ ವೇದಿಕೆಯನ್ನು ನೀಡುವ ಕನಸುಗಳು-2016 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕನಸು ಇದ್ದರೆ ಮಾತ್ರ ಜೀವನ ಪರಿಪೂರ್ಣವಾಗಿರುತ್ತದೆ. ಆದರೆ ನಮ್ಮ ಕ್ಷಮತೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳದಿದ್ದರೆ ಎಲ್ಲವೂ ವ್ಯರ್ಥ. ಯಾವ ಕನಸು […]

Highslide for Wordpress Plugin