‘ಮಾದಕ ದ್ರವ್ಯ ವ್ಯಸನ’ ವಿಷಯ ಮಂಡನೆ

Tuesday, December 30th, 2014

ದಿನಾಂಕ 12-12-2014 ರ ಶುಕ್ರವಾರದಂದು ವಿವೇಕಾನಂದ ಪದವಿ ಪೂರ್ವಕಾಲೇಜಿನ ಪ್ರಥಮ ಪಿ.ಯು.ಸಿ. ಕಲಾ ವಿಭಾಗದ ವಿದ್ಯಾರ್ಥಿಗಳು ‘ಮಾದಕದ್ರವ್ಯ ವ್ಯಸನ’ ಎಂಬ ವಿಷಯದ ಬಗೆಗೆ ವಿಷಯ ಮಂಡಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜೀವಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ಮುರಳಿ ಪಿ.ಜಿ, ಕಾಲೇಜಿನ ಪ್ರಾಂಶುಪಾಲ ಜೀವನ್‌ದಾಸ್ ಎ. ಉಪಸ್ಥಿತರಿದ್ದರು. ‘ಮಾದಕದ್ರವ್ಯ ವ್ಯಸನ’ ಎಂಬ ವಿಷಯದ ಬಗ್ಗೆ ಭರತ್‌ಕುಮಾರ್ ಇವರು ಮಂಡಿಸಿದರು. ‘ಮಾದಕದ್ರವ್ಯ ವ್ಯಸನದಗುಣ-ಲಕ್ಷಣಗಳು ಈ ವಿಷಯದ ಬಗೆಗೆ ನಿತಿನ್ ಸಬಾಸ್ಟಿಯನ್ ಇವರು ಮಂಡಿಸಿದರು. ‘ಮಾದಕದ್ರವ್ಯ ವ್ಯಸನದ ಪ್ರಾಕಾರಗಳು’ ಈ ವಿಷಯವನ್ನು […]

ವಿವೇಕಾನಂದ ಪ.ಪೂ.ಕಾಲೇಜಿನಲ್ಲಿ 'ವಿದ್ಯಾರ್ಥಿ ಅಂತರ್ಜಾಲ ಪ್ರಪಂಚ-2014'

ವಿವೇಕಾನಂದ ಪ.ಪೂ.ಕಾಲೇಜಿನಲ್ಲಿ ‘ವಿದ್ಯಾರ್ಥಿ ಅಂತರ್ಜಾಲ ಪ್ರಪಂಚ-2014’

Tuesday, December 23rd, 2014

ಪುತ್ತೂರು : ಗ್ರಾಮೀಣ ಪ್ರದೇಶದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅಂತರ್ಜಾಲವನ್ನು ಪರಿಚಯಿಸುವ ಕರ್ನಾಟಕ ಸರ್ಕಾರದ ಯೋಜನೆಯಾದ ವಿದ್ಯಾರ್ಥಿ ಅಂತರ್ಜಾಲ ಪ್ರಪಂಚ-2014 ಕಾರ್ಯಕ್ರಮದ ಉದ್ಘಾಟನೆ ವಿವೇಕಾನಂದ ಪ.ಪೂ. ಕಾಲೇಜಿನಲ್ಲಿ ನಡೆಯಿತು. ಆಡಳಿತ ಮಂಡಳಿ ಸಂಚಾಲಕ ಎಂ. ಟಿ. ಜಯರಾಮ ಭಟ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಪ್ರಾಚಾರ್ಯರಾದ ಜೀವನ್‌ದಾಸ್ ಉಪಸ್ಥಿತರಿದ್ದರು. ಗಣಕಶಾಸ್ತ್ರ ವಿಭಾಗ ಮುಖ್ಯಸ್ಥರಾದ ರೋಹಿತ್ ಅವರು ಸ್ವಾಗತಿಸಿ, ಕ್ಷೇತ್ರ ಶಿಕ್ಷಣ ಸಂಯೋಜಕರಾದ ಉದಯ್ ಶಂಕರ್ ಧನ್ಯವಾದ ಸಮರ್ಪಿಸಿದರು. ಉಪನ್ಯಾಸಕಿ ದೀಪ್ತಿ ಹಾಗೂ ವಿದ್ಯಾರ್ಥಿನಿ ತನ್ವಿ ಪ್ರಾರ್ಥಿಸಿದರು. […]

ವಿವೇಕಾನಂದ ಪ.ಪೂ.ಕಾಲೇಜಿನಲ್ಲಿ ರಾಜ್ಯಮಟ್ಟದ ಚದುರಂಗ ಸ್ಪರ್ಧೆ ಸಮಾರೋಪ

ವಿವೇಕಾನಂದ ಪ.ಪೂ.ಕಾಲೇಜಿನಲ್ಲಿ ರಾಜ್ಯಮಟ್ಟದ ಚದುರಂಗ ಸ್ಪರ್ಧೆ ಸಮಾರೋಪ

Thursday, December 18th, 2014

ದಕ್ಷಿಣ ಕನ್ನಡ ಹಾಗೂ ಮೈಸೂರು ಜಿಲ್ಲೆಗೆ ಪ್ರಶಸ್ತಿ ಪುತ್ತೂರು : ಪ. ಪೂ. ಶಿಕ್ಷಣ ಇಲಾಖೆ ಹಾಗೂ ವಿವೇಕಾನಂದ ಪ. ಪೂ. ಕಾಲೇಜಿನ ಜಂಟಿ ಆಶ್ರಯದಲ್ಲಿ ವಿವೇಕಾನಂದ ಪ.ಪೂ. ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ಪದವಿಪೂರ್ವ ತರಗತಿ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಚದುರಂಗ ಸ್ಪರ್ಧೆ ಸಮಾಪನಗೊಂಡಿದೆ. ಬಹುಮಾನ ವಿಜೇತ ತಂಡಗಳ ವಿವರ ಚದುರಂಗ ಸ್ಪರ್ಧೆಯ ತಂಡ ಪ್ರಶಸ್ತಿ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ದಕ್ಷಿಣ ಕನ್ನಡ ಜಿಲ್ಲೆ, ದ್ವಿತೀಯ ಸ್ಥಾನ ಮೈಸೂರು ಜಿಲ್ಲೆ. ಬಾಲಕರ ವಿಭಾಗ […]

ವಿವೇಕಾನಂದ ಪ.ಪೂ.ಕಾಲೇಜಿನಲ್ಲಿ ರಾಜ್ಯಮಟ್ಟದ ಚದುರಂಗ ಸ್ಪರ್ಧೆ

ವಿವೇಕಾನಂದ ಪ.ಪೂ.ಕಾಲೇಜಿನಲ್ಲಿ ರಾಜ್ಯಮಟ್ಟದ ಚದುರಂಗ ಸ್ಪರ್ಧೆ

Monday, December 15th, 2014

ಪುತ್ತೂರು : ‘ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಆಟ ಪಾಠ ಓಟಗಳು ಅತಗತ್ಯ. ಆಡುತ್ತಾ ಬೆಳೆಯುವ ಮಗು ಬಳಿಕ ಪಾಠ ಕಲಿಯುತ್ತದೆ. ದೈಹಿಕ ಸದೃಢತೆಗೆ ಓಟವೂ ಅಗತ್ಯವಾಗುತ್ತದೆ’ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾ ನಿರ್ದೆಶಕರಾದ ಪ್ರೋ. ಎ. ವಿ. ನಾರಾಯಣ್ ಹೇಳಿದರು. ದ. ಕ. ಜಿಲ್ಲಾ ಪ. ಪೂ. ಶಿಕ್ಷಣ ಇಲಾಖೆ ಹಾಗೂ ವಿವೇಕಾನಂದ ಪ.ಪೂ.ಕಾಲೇಜು ಜಂಟಿಯಾಗಿ ಆಯೋಜಿಸಿದ ವಿವೇಕಾನಂದ ಪ. ಪೂ. ಕಾಲೇಜಿನ ಸುವರ್ಣಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಪ.ಪೂ.ಕಾಲೇಜು ವಿದ್ಯಾರ್ಥಿಗಳ ರಾಜ್ಯ ಮಟ್ಟದ […]

ವಿವೇಕಾನಂದ ಪ.ಪೂ.ಕಾಲೇಜಿನಲ್ಲಿ ಚಕ್ರವರ್ತಿ ಸೂಲಿಬೆಲೆ

ವಿವೇಕಾನಂದ ಪ.ಪೂ.ಕಾಲೇಜಿನಲ್ಲಿ ಚಕ್ರವರ್ತಿ ಸೂಲಿಬೆಲೆ

Wednesday, December 10th, 2014

 ‘ತಾರುಣ್ಯ ಎನ್ನುವುದು ಮಾನವ ಜೀವಿತಾವದಿಯ ಅತ್ಯುತ್ತಮ ಕಾಲ. ಈ ಸಮಯದಲ್ಲಿ ಇಚ್ಛಾಶಕ್ತಿ, ಜ್ಞಾನಶಕ್ತಿ ಹಾಗೂ ಕ್ರೀಯಾಶಕ್ತಿಗಳ ಉದ್ದೀಪನವಾಗಬೇಕು ಸದ್ರಡ ಭಾರತ ನಿರ್ಮಾಣಕ್ಕೆ ತರುಣರು ಪಣತೊಡಬೇಕು’ ಎಂದು ಖ್ಯಾತ ವಾಗ್ಮಿ ಅಂಕಣಕಾರ ಮಿಥುನ್ ಚಕ್ರವರ್ತಿ ಸೂಲಿಬೆಲೆ ಹೇಳಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ‘ಬಹುಮಾನ ವಿತರಣ ಸಮಾರಂಭ’ದಲ್ಲಿ ಮುಖ್ಯ ಅಭ್ಯಾಗತರಾಗಿ ಪಾಲ್ಗೊಂಡು ಮಾತನಾಡಿದ ಅವರು ‘ಭಾರತ ಬದಲಾವಣೆಯ ಸಂಕ್ರಮಣ ಕಾಲದಲ್ಲಿದೆ ಇಂಥ ಸಮಯದಲ್ಲಿ ತರುಣರಾಗಿರುವ ನಾವು ಸಂತೋಷಪಡೋಣ….. ಭಾರತ ವಿಶ್ವ ಗುರುವಾಗಲು ಕಾರಣರಾಗೋಣ’ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಆಡಳಿತ […]

ಇಸ್ರೋ ವಿಜ್ಞಾನಿಗಳೊಡನೆ ವಿದ್ಯಾರ್ಥಿ-ವಿಜ್ಞಾನಿ ಸಂವಾದ

ಇಸ್ರೋ ವಿಜ್ಞಾನಿಗಳೊಡನೆ ವಿದ್ಯಾರ್ಥಿ-ವಿಜ್ಞಾನಿ ಸಂವಾದ

Wednesday, December 10th, 2014

ನಮ್ಮ ದೇಶದ ಹಲವಾರು ಹಿರಿಯ ವಿಜ್ಞಾನಿಗಳ ಚಿಂತನೆಯ ಫಲವಾಗಿ ಇಂದು ಇಸ್ರೋ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನ ಪಡೆದಿದೆ. ಇಸ್ರೋ ಸಂಸ್ಥೆಯ ಪ್ರತಿಯೊಂದು ವಿಜ್ಞಾನಿಯೂ ತನ್ನ ಸ್ವಂತ ಏಳಿಗೆಯನ್ನು ಮರೆತು, ದೇಶ, ಸಮಾಜಕ್ಕೆ ಕೊಡುಗೆ ನೀಡುವುದರ ಬಗ್ಗೆ ಚಿಂತಿಸುವುದರಿಂದ ಇಂದು ಮಹತ್ತರ ಸಾಧನೆಗೈಯಲು ಸಾಧ್ಯವಾಗಿದೆ. ಇಂದಿನ ಜನಾಂಗದ ಒಂದಿಷ್ಟು ಯುವಕರೂ ಇದೇ ದೃಷ್ಟಿಯಲ್ಲಿ ಚಿಂತಿಸದರೆ ಈ ಪರಂಪರೆ ಮುಂದುವರಿಯಲು ಸಾಧ್ಯ. ಆಗ ಭಾರತವನ್ನು ನಾವು ಬಲಿಷ್ಠ ರಾಷ್ಟ್ರವಾಗಿ ನಿರ್ಮಿಸಲು ಯಾವುದೇ ಕಷ್ಟ ಬರಲಾರದು ಎಂದು ಇಸ್ರೋ […]

ವಿವೇಕಾನಂದ ಪ.ಪೂ.ಕಾಲೆಜಿನಲ್ಲಿ ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳು

ವಿವೇಕಾನಂದ ಪ.ಪೂ.ಕಾಲೆಜಿನಲ್ಲಿ ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳು

Wednesday, November 26th, 2014

ಪುತ್ತೂರು : ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ನಡುವಿನ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಬಾರದು. ‘ಕಲೆ, ಸಾಹಿತ್ಯ, ಸಂಗೀತ, ಅಭಿನಯ ಮೊದಲಾದ ಸಾಂಸ್ಕೃತಿಕ ವಿದ್ಯೆಗಳನ್ನು ಕೂಡಾ ಕರಗತ ಮಾಡಿಕೊಳ್ಳಬೇಕು’ ಎಂದು ವಿವೇಕಾನಂದ ಪ.ಪೂ.ಕಾಲೇಜಿನ ಸಂಚಾಲಕರಾದ ಎಂ.ಟಿ.ಜಯರಾಮ ಭಟ್ ಹೇಳಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಜಿಲ್ಲಾಮಟ್ಟದ ಪ.ಪೂ.ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಡೆದ ಜಿಲ್ಲಾಮಟ್ಟದ ಪ.ಪೂ.ತರಗತಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು ‘ಸಾಂಸ್ಕೃತಿಕ ಚಟುವಟಿಕೆಗಳು ವಿಸ್ತ್ರತ ಜೀವನದರ್ಶನ ಮಾಡುತ್ತವೆ’ಎಂದು ಅವರು ಹೇಳಿದರು. ವಿವೇಕಾನಂದ ಕಾಲೆಜಿನ ವಿಶ್ರಾಂತ […]

2014-15 ನೇ ಸಾಲಿನ ವಾರ್ಷಿಕ ಕ್ರೀಡಾಕೂಟ

2014-15 ನೇ ಸಾಲಿನ ವಾರ್ಷಿಕ ಕ್ರೀಡಾಕೂಟ

Saturday, November 22nd, 2014

2014-15 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ 14-11-2014 ರಂದು ನಡೆಯಿತು. ಪ್ರಾಂಶುಪಾಲರಾದ ಜೀವನ್ ದಾಸ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ರಾಷ್ಟ್ರೀಯ ಈಜುಪಟು ಕಾಶಿಮಠ ಈಶ್ವರಭಟ್ ಅವರು ಮುಖ್ಯ ಅತಿಥಿಯಾಗಿ ಕ್ರೀಡಾಕೂಟವನ್ನು ಉದ್ಘಾಟಿಸಿದರು.

ವಿವೇಕಾನಂದ ಪ.ಪೂ. ಕಾಲೇಜಿನಲ್ಲಿ ಗಣಿತಶಾಸ್ತ್ರ ಕಾರ್ಯಾಗಾರ

ವಿವೇಕಾನಂದ ಪ.ಪೂ. ಕಾಲೇಜಿನಲ್ಲಿ ಗಣಿತಶಾಸ್ತ್ರ ಕಾರ್ಯಾಗಾರ

Thursday, November 6th, 2014

ಪುತ್ತೂರು : ‘ಜಿಲ್ಲೆಯ ವಿಜ್ಞಾನ ಉಪನ್ಯಾಸಕರು ವಿಶೇಷ ಪ್ರತಿಭಾಶಾಲಿಗಳು, ಹಾಗಾಗಿ ವಿಜ್ಞಾನ ಕಲಿಕೆಯಲ್ಲಿ ದ.ಕ. ಜಿಲ್ಲೆ ರಾಜ್ಯದಲ್ಲಿಯೇ ಪಥಮ ಸ್ಥಾನದಲ್ಲಿದೆ. ರಾಷ್ಟ್ರ ಮಟ್ಟದಲ್ಲಿ ಚತುರ್ಥ ಸ್ಥಾನ ಹೊಂದಿದೆ. ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ಫಲಿತಾಂಶ ಬರಲು ಜಿಲ್ಲೆಯ ಉಪನ್ಯಾಸಕರು ಕಾರಣ’ ಎಂದು ಜಿಲ್ಲಾ ಪ. ಪೂ. ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೆ.ಆರ್. ತಿಮ್ಮಯ್ಯ ಅವರು ಹೇಳಿದರು. ವಿವೇಕಾನಂದ ಪ.ಪೂ. ಕಾಲೇಜಿನ ಸುವರ್ಣ ಮಹೋತ್ಸವದಂಗವಾಗಿ ಜಿಲ್ಲೆಯ ಪ.ಪೂ.ಕಾಲೇಜು ಗಣಿತಶಾಸ್ತ್ರ ಉಪನ್ಯಾಸಕರಿಗೆ ಹಮ್ಮಿಕೊಳ್ಳಲಾದ ಕಾರ್ಯಾಗಾರವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ದ.ಕ.ಜಿಲ್ಲಾ ಪ.ಪೂ […]

ಕಬ್ಬಡಿ ಪಂದ್ಯಾಟ - ಪಂಜಾಬ್‌ನಲ್ಲಿ ನಡೆಯುವ SGFI ಸ್ಪರ್ಧೆಗೆ ಆಯ್ಕೆ

ಕಬ್ಬಡಿ ಪಂದ್ಯಾಟ – ಪಂಜಾಬ್‌ನಲ್ಲಿ ನಡೆಯುವ SGFI ಸ್ಪರ್ಧೆಗೆ ಆಯ್ಕೆ

Saturday, September 20th, 2014

ಇತ್ತೀಚೆಗೆ ಹರಿದ್ವಾರದಲ್ಲಿ ನಡೆದ ವಿದ್ಯಾಭಾರತಿ ಅಖಿಲ ಭಾರತ ಮಟ್ಟದ ಕಬ್ಬಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ತಂಡ. ಈ ಮೂಲಕ ಅಕ್ಟೋಬರ್ ತಿಂಗಳು ಪಂಜಾಬ್‌ನಲ್ಲಿ ನಡೆಯುವ SGFI ಸ್ಪರ್ಧೆಗೆ ಅರ್ಹತೆ ಗಳಿಸಿರುತ್ತಾರೆ.

Highslide for Wordpress Plugin