ಕನಸುಗಳು-2014 ಸಮಾರೋಪ

ಕನಸುಗಳು-2014 ಸಮಾರೋಪ

Thursday, September 18th, 2014

ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕನಸುಗಳು-2014 ಶಿಬಿರದ ಸಮಾರೋಪ ಸಮಾರಂಭವು ತಾರೀಕು 13-9-2014 ರಂದು ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿಹಣಾಧಿಕಾರಿ ಪ್ರೊ| ಎ.ವಿ.ನಾರಾಯಣ್ ಇವರು ಮಕ್ಕಳು ತಮ್ಮ ವಯಸ್ಸಿಗೆ ತಕ್ಕಂತೆ ಕನಸು ಕಾಣುವುದು, ತಮ್ಮ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಕಾರ್ಯತತ್ಪರರಾಗುವುದು ಅತೀ ಮುಖ್ಯ. ನಮ್ಮ ದೇಶದಲ್ಲಿರುವ ಹಲವಾರು ವ್ಯಕ್ತಿಗಳು ಕನಸುಗಳನ್ನು ಕಾರ್ಯರೂಪಕ್ಕಿಳಿಸುವ ಪಥದಲ್ಲಿ ಅತ್ಯಂತ ಹೆಚ್ಚು ಆಸಕ್ತಿ ವಹಿಸಿದ ಕಾರಣ ಈಗ ಅತ್ಯಂತ ಗಣ್ಯವ್ಯಕ್ತಿಗಳೆನಿಸಿದ್ದಾರೆ ಎಂದರು. ಅತಿಥಿಗಳಾಗಿದ್ದ ಇಸ್ರೊ […]

ವಿವೇಕಾನಂದ ಮತ್ತು ಇಂದ್ರಪ್ರಸ್ಥ ವಿದ್ಯಾಲಯಕ್ಕೆ IಓSಇಈ-೨೦೧೪ರಲ್ಲಿ ಗ್ರಾಂಡ್ ಗೋಲ್ಡ್ ಅವಾರ್ಡ್

ವಿವೇಕಾನಂದ ಮತ್ತು ಇಂದ್ರಪ್ರಸ್ಥ ವಿದ್ಯಾಲಯಕ್ಕೆ IಓSಇಈ-೨೦೧೪ರಲ್ಲಿ ಗ್ರಾಂಡ್ ಗೋಲ್ಡ್ ಅವಾರ್ಡ್

Thursday, September 18th, 2014

INSEF-2014 ರ ವಿಜ್ಞಾನ ಮೇಳದ ಸಮಾರೋಪ ಸಮಾರಂಭವು 12-09-2014 ರಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಎರಡು ದಿನಗಳ ಕಾಲ ನಡೆದ ಈ ವಿಜ್ಞಾನ ಮೇಳದಲ್ಲಿ ಇಂದ್ರಪ್ರಸ್ಥ ವಿದ್ಯಾಲಯವು ಎರಡು ಮತ್ತು ವಿವೇಕಾನಂದ ಪದವಿ ಪೂರ್ವ ಕಾಲೇಜು ಒಂದು ಗ್ರಾಂಡ್ ಗೋಲ್ಡ್ ಅವಾರ್ಡ್‌ಗಳನ್ನು ಪಡೆದವು. ಉಳಿದಂತೆ ಹೊಂಗಿರಣ ಹೈಸ್ಕೂಲು ಸಾಗರ, ಸುಧಾನ ಹೈಸ್ಕೂಲ್ ಪುತ್ತೂರು, ಕುಮಾರ ಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇಲ್ಲಿನ ವಿದ್ಯಾರ್ಥಿಗಳು ತಲಾ ಒಂದು ಚಿನ್ನದ ಪದಕವನ್ನು ಪಡೆದುಕೋಮಡವು.ಟ್ಟು ವಿವಿಧ ಪ್ರಾಜೆಕ್ಟ್‌ಗಳಿಗೆ ಆರು ಚಿನ್ನದ ಪದಕ, ಆರು […]

ಜೂನಿಯರ್ ಮಾನ್‌ಸೂನ್ ಚೆಸ್

ಜೂನಿಯರ್ ಮಾನ್‌ಸೂನ್ ಚೆಸ್

Friday, September 5th, 2014

ಎಸ್.ಡಿ.ಎಂ ನ ಶಾಬ್ಬಿಕ್ ವರ್ಮ ಗೆ ಪ್ರಶಸ್ತಿ ವಿವೇಕಾನಂದ ಪದವಿಪೂರ್ವ ಕಾಲೇಜು, ಪುತ್ತೂರು ಇದರ ಆಶ್ರಯದಲ್ಲಿ ಪ್ರಥಮ ಬಾರಿಗೆ ಸಂಘಟಿಸಲ್ಪಟ್ಟ ಜೂನಿಯರ್ ಮಾನ್‌ಸೂನ್ ಚೆಸ್ ಸ್ಪರ್ಧೆಯ ಪ್ರಥಮ ಸ್ಥಾನವನ್ನು ಧರ್ಮಸ್ಥಳ ಮಂಜುನಾಥೇಶ್ವರ ಪಿ.ಯು. ಕಾಲೇಜಿನ ಶಾಬ್ಬಿಕ್ ವರ್ಮ ಪಡೆದುಕೊಂಡರು. ದ್ವೀತಿಯ ಸ್ಥಾನವನ್ನು ಅಂಡ್ರೆಯಾ ಲಾರ್ಡ್ ಡಿಸೋಜ,ಸೈಂಟ್ ಆಗ್ನೆಸ್ ಕಾಲೇಜು,ಮಂಗಳೂರು ಹಾಗೂ ತ್ರತೀಯ ಸ್ಥಾನವನ್ನು ಚಂದನ್ ವಿವೇಕಾನಂದ ಪದವಿ ಪೂರ್ವ ಕಾಲೆಜು,ಪುತ್ತೂರು ಇವರು ಪಡೆದುಕೊಂಡರು. ದಕ್ಷಿಣಕನ್ನಡ ಜಿಲ್ಲೆಯ 7 ಪ.ಪೂ.ಕಾಲೇಜುಗಳ 44 ಸ್ಫರ್ಧಿಗಳು ಭಾಗವಹಿಸಿದ್ದರು. ಅಗೋಸ್ಟ್ 28 ರ […]

ಊಹನೆಯ ಮೂಲಕ ವರದಿ ತಯಾರಿ ಅಸಾಧ್ಯ

ಊಹನೆಯ ಮೂಲಕ ವರದಿ ತಯಾರಿ ಅಸಾಧ್ಯ

Thursday, August 21st, 2014

ಪುತ್ತೂರು: ವರದಿಗಾರನೊಬ್ಬ ಕಾರ್ಯಕ್ರಮವನ್ನು ಊಹಿಸಿಕೊಂಡು ವರದಿಯನ್ನು ತಯಾರಿಸಲು ಸಾಧ್ಯವಿಲ್ಲ. ಅನಿವಾರ್ಯವಾಗಿಯಾದರೂ ಆತ ಇಡೀ ಕಾರ್ಯಕ್ರಮವನ್ನು ಆಲಿಸಿ ವರದಿ ಮಾಡಬೇಕಾಗುತ್ತದೆ ಎಂದು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ ಕುಮಾರ್ ಕಮ್ಮಜೆ ಹೇಳಿದರು. ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ ಮತ್ತು ರೋಟರಿ ಇಂಟರ್‍ಯಾಕ್ಟ್ ಕ್ಲಬ್‌ನ ಜಂಟಿ ಆಶ್ರಯದಲ್ಲಿ ಜರಗಿದ ಪತ್ರಿಕಾ ವರದಿ ತಯಾರಿ ಮಾಹಿತಿ ಉಪನ್ಯಾಸದಲ್ಲಿ ಅವರು ವಿದ್ಯಾರ್ಥಿಗಳಿಗೆ ವರದಿ ತಯಾರಿಕಾ ವಿಧಾನವನ್ನು ತಿಳಿಸಿಕೊಟ್ಟರು. ವರದಿಗಾರರಲ್ಲಿ ಪತ್ರಿಕಾ ವರದಿಗಾರ ಮತ್ತು ಹವ್ಯಾಸಿ ವರದಿಗಾರ ಎಂದು ಎರಡು […]

ಹದಿಹರೆಯದ ಸಮಸ್ಯೆ : ವಿವೇಕಾನಂದ ಪ.ಪೂ. ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮ

ಹದಿಹರೆಯದ ಸಮಸ್ಯೆ : ವಿವೇಕಾನಂದ ಪ.ಪೂ. ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮ

Wednesday, August 20th, 2014

ಹದಿಹರೆಯದಲ್ಲಿ ಮಾನಸಿಕವಾಗಿ ಕುಗ್ಗಿದಲ್ಲಿ ಜೀವನಪೂರ್ತಿ ಕೀಳರಿಮೆಯಿಂದ ಬಳಲುವ ಸಾಧ್ಯತೆಯಿದೆ ಎಂದು ಖ್ಯಾತ ಚರ್ಮರೋಗ ತಜ್ಞ ಡಾ.ಬದರಿನಾಥ ಅವರು ಹೇಳಿದರು. ವಿವೇಕಾನಂದ ಪದವಿ ಪೂರ್ವ ಕಾಲೇಜಿನ ರೋಟರಿ ಇಂಟರ್‍ಯಾಕ್ಟ್ ಕ್ಲಬ್‌ನ ವತಿಯಿಂದ ನಡೆದ ಹದಿಹರೆಯದ ಸಮಸ್ಯೆಗಳು ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಇನೋರ್ವ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಡಾ. ಸುಲೇಖಾ ವರದರಾಜ್ ಅವರು ಮಾತನಾಡಿ ಅವಕಾಶಗಳು ಕೈ ತಪ್ಪಿದಾಗ ವಿದ್ಯಾರ್ಥಿನಿಯರು ಖಿನ್ನರಾಗಬಾರದು. ಸದಾವಕಾಶಗಳು ಒದಗಿ ಬರುತ್ತವೆ ಎಂಬ ನಿರೀಕ್ಷೆಯಲ್ಲಿ ಇರಬೇಕುಎಂಬ ಕಿವಿ ಮಾತು ಹೇಳಿದರು. […]

ವಿವೇಕಾನಂದ ಪ.ಪೂ ಕಾಲೇಜಿನಲ್ಲಿ ಅಷ್ಟಮಿ ಪ್ರಯುಕ್ತ ಸ್ಪರ್ಧೆಗಳು

ವಿವೇಕಾನಂದ ಪ.ಪೂ ಕಾಲೇಜಿನಲ್ಲಿ ಅಷ್ಟಮಿ ಪ್ರಯುಕ್ತ ಸ್ಪರ್ಧೆಗಳು

Friday, August 15th, 2014

ಪುತ್ತೂರು: ಆಗಸ್ಟ್ 14 ಇಲ್ಲಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಕೃಷ್ಣಾಷ್ಟಮಿಯ ಪ್ರಯುಕ್ತ ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ಜರಗಿದವು. ವಿದ್ಯಾರ್ಥಿನಿಯರಿಗೆ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ಮತ್ತು ಸಂಗೀತ ಕುರ್ಚಿ ಸ್ಪರ್ಧೆಗಳು ನಡೆದವು. ವಿದ್ಯಾರ್ಥಿನಿ ದಿಶಾ. ಇ, ದ್ವಿತೀಯ ಕಂಪ್ಯೂಟರ್ ವಿಭಾಗ ಮತ್ತು ಧನ್ಯ ಪ್ರಥಮ ಪಿ.ಯು.ಸಿ ಇವರು ಮೊಸರು ಕುಡಿಕೆ ಸ್ಪರ್ಧೆಯಲ್ಲೂ, ಹರ್ಷಿತಾ. ಡಿ ದ್ವಿತೀಯ ಇಲೆಕ್ಟ್ರಾನಿಕ್ಸ್ ವಿಭಾಗ ಮತ್ತು ರಚನಾ ಗೌಡ ಪ್ರಥಮ ಪಿ.ಯು.ಸಿ ಇವರು ಸಂಗೀತ ಕುರ್ಚಿ ಸ್ಪರ್ಧೆಯಲ್ಲೂ ವಿಜೇತರಾದರು. ಹುಡುಗರ […]

ವಿವೇಕಾನಂದ ಪ. ಪೂ. ಕಾಲೇಜಿನಲ್ಲಿ ಸಾಹಿತ್ಯ ವೇದಿಕೆಯ ಅಂಕುರಾರ್ಪಣ

ವಿವೇಕಾನಂದ ಪ. ಪೂ. ಕಾಲೇಜಿನಲ್ಲಿ ಸಾಹಿತ್ಯ ವೇದಿಕೆಯ ಅಂಕುರಾರ್ಪಣ

Thursday, August 14th, 2014

ಪುತ್ತೂರು :  ‘ಮುಕ್ತ ಮನಸ್ಸಿನಿಂದ ತಮ್ಮ ಸುತ್ತ ಮುತ್ತಲಿನ ವಾತಾವರಣವನ್ನು ನೋಡುವವರಿಗೆ ಸಾಹಿತ್ಯ ನಿರ್ಮಾಣ ಮಾಡಲು ಸಾಧ್ಯ’ ಎಂದು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥಡಾ. ಎಚ್.ಜಿ ಶ್ರೀಧರ್ ಹೇಳಿದರು. ವಿವೇಕಾನಂದ ಪ. ಪೂ. ಕಾಲೇಜಿನಲ್ಲಿ ಸಾಹಿತ್ಯ ವೇದಿಕೆಯ ಅಂಕುರಾರ್ಪಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಸಾಹಿತ್ಯಕ್ಕೆ ಸಹಜವಾದ ಹರಿವು ಇರುತ್ತದೆ. ಬಲವಂತವಾಗಿ ಸಾಹಿತ್ಯ ನಿರ್ಮಿಸಲು ಸಾಧ್ಯವಿಲ್ಲ ಎಂದುಹೇಳಿದರು. ಸಭಾಧ್ಯಕ್ಷತೆ ವಹಿಸಿಧ್ದ ಆಡಳಿತ ಮಂಡಳಿ ಸಂಚಾಲಕರಾದ ಎಂ.ಟಿ. ಜಯರಾಮ ಭಟ್ ಅವರು ‘ಸಾಹಿತ್ಯ ಮನಸ್ಸನ್ನು […]

ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ

ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ

Saturday, August 9th, 2014

ಪುತ್ತೂರು :  ‘ವಿದ್ಯಾರ್ಥಿಗಳಿಗೆ ಎಲ್ಲಾ ಜ್ಞಾನ ಶಿಸ್ತುಗಳ ಬಗೆಗೆ ಪ್ರೀತಿ ಮತ್ತು ಗೌರವವಿರಬೇಕು. ಯಾವ ಹುದ್ದೆಯನ್ನೇರಿದರೂ ಮಾನವೀಯತೆ ಮೂಲ ಜೀವದ್ರವ್ಯವಾಗಿರಬೇಕು’ ಎಂದು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಆಡಳಿತಾಧಿಕಾರಿ ಡಾ. ಶ್ರುತಕೀರ್ತಿರಾಜ ಹೇಳಿದರು. ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿ ಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ‘ವಿಜ್ಞಾನ ವಿಷಯಗಳಿಗೆ ಹಲವು ಅವಕಾಶಗಳಿರುವುದು ನಿಜವಾದರೂ ಕಲೆ ಮತ್ತು ವಾಣಿಜ್ಯ ವಿಷಯಗಳಲ್ಲಿಯೂ ಅಭ್ಯಾಸ ನಡೆಸಿ ಉನ್ನತ ಹುದ್ದೆಗಳಿಸಲು ಸಾಧ್ಯ’ ಎಂದು ಅವರು […]

ವಿವೇಕಾನಂದ ಪ.ಪೂ.ಕಾಲೇಜಿನಲ್ಲಿ ರೋಟರಿ ಇಂಟರ್‍ಯಾಕ್ಟ್ ಕ್ಲಬ್‌ನ ಉದ್ಘಾಟನೆ

ವಿವೇಕಾನಂದ ಪ.ಪೂ.ಕಾಲೇಜಿನಲ್ಲಿ ರೋಟರಿ ಇಂಟರ್‍ಯಾಕ್ಟ್ ಕ್ಲಬ್‌ನ ಉದ್ಘಾಟನೆ

Thursday, August 7th, 2014

ಪುತ್ತೂರು : ಸಂಘಟನೆಯ ಮೂಲಕ ವಿದ್ಯಾರ್ಥಿಗಳಿಗೆ ಲೋಕಾನುಭವ ಹೆಚ್ಚಾಗುತ್ತದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ವ್ಯಕ್ತಿಗಳೊಂದಿಗೆ ಬೆರೆಯುವ ಅವಕಾಶ ಇಂಟರ್‍ಯಾಕ್ಟ್ ಕ್ಲಬ್‌ನ ಸದಸ್ಯರಿಂದ ವಿದ್ಯಾರ್ಥಿಗಳಿಗೆ ದೊರೆಯುತ್ತದೆ ಎಂದು ರೋಟರಿ ಕ್ಲಬ್‌ನ ಜಿಲ್ಲಾ ಕಾರ್ಯದರ್ಶಿಯಾಗಿರುವ ಡಾ.ಸೂರ್ಯನಾರಾಯಣ ಕೆ.ಅವರು ಹೇಳಿದರು. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ರೋಟರಿ ಕ್ಲಬ್ ನ ಘಟಕವಾದ ಇಂಟರ್‍ಯಾಕ್ಟ್ ಕ್ಲಬ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ರೋಟರಿಕ್ಲಬ್ ನ ಪುತ್ತೂರು ಪೂರ್ವದ ಅಧ್ಯಕ್ಷರಾಗಿರುವ ಕೆ.ವಿ.ಶೆಣೈ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಜೀವನ್ […]

ಭಾರತ ಸೇವಾಶ್ರಮದಲ್ಲಿ ವಿವೇಕಾನಂದ ಪ.ಪೂ.ಕಾಲೇಜು ವಿದ್ಯಾರ್ಥಿಗಳ ಕಾರ್ಯಕ್ರಮ

ಭಾರತ ಸೇವಾಶ್ರಮದಲ್ಲಿ ವಿವೇಕಾನಂದ ಪ.ಪೂ.ಕಾಲೇಜು ವಿದ್ಯಾರ್ಥಿಗಳ ಕಾರ್ಯಕ್ರಮ

Wednesday, August 6th, 2014

ಪುತ್ತೂರು :  ಶ್ರೀಮಂತಿಕೆ ಇದ್ದಾಗ ಸಮಸ್ಯೆಗಳಿಲ್ಲ ಎನ್ನುವುದು ಸುಳ್ಳು. ಸಮಸ್ಯೆಗಳು ಎಲ್ಲರನ್ನೂ ಕಾಡುತ್ತವೆ. ಸೀಮಿತ ಖರ್ಚಿನಲ್ಲಿ ಪರಿಶುದ್ಧ್ಧ ಜೀವನ ನಡೆಸಬೇಕು. ಸೂಕ್ತವೆನಿಸುವ ಆಶ್ರಮ, ಆಸರೆತಾಣಗಳಿಗೆ ನೆರವು ನೀಡಬೇಕು. ಕೊಡುಗೈದಾನಿಗಳಾದಾಗಲೇ ಸಮಸ್ಯೆಗಳು ವಿರಳವಾಗುವುದಕ್ಕೆ ಸಾಧ್ಯ.ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಾಹಣಾಧಿಕಾರಿಗಳಾದ ಪ್ರೊ.ಎ.ವಿ.ನಾರಾಯಣ್ ಅವರು ಹೇಳಿದರು. ಕನ್ಯಾನದ ಭಾರತ ಸೇವಾಶ್ರಮದಲ್ಲಿ ಪುತ್ತೂರು ವಿವೇಕಾನಂದ ಪ. ಪೂ.ಕಾಲೇಜಿನ ಕಲಾಸಂಘದ ವತಿಯಿಂದ ಹಮ್ಮಿಕೊಳ್ಳಲಾದ ‘ಹಿರಿ-ಕಿರಿಯರ ಸ್ನೇಹ ಸಮ್ಮಿಲನ’ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಇನ್ನೋರ್ವ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕಾಲೇಜು […]

Highslide for Wordpress Plugin