ಕಾರ್ಗಿಲ್ ವಿಜಯ ದಿವಸ್ ಆಚರಣೆ

Tuesday, November 19th, 2013

ದೇಶಕ್ಕಾಗಿ ಬಲಿಧಾನ ಮಾಡಿಕೊಂಡ ವೀರ ಸೈನಿಕರನ್ನು ಸ್ಮರಣೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯ. ಸ್ಯೆನಿಕರ ಬಲಿದಾನ, ಹೋರಾಟದಿಂದಾಗಿ ದೇಶದ ನಾಗರಿಕರು ಸುರಕ್ಷಿತರಾಗಿ ಬದುಕುತ್ತಿದ್ದಾರೆ. ಹೀಗಾಗಿ ಕಾರ್ಗಿಲ್ ವಿಜಯದಿವಸದ ಆಚರಣೆ ಅರ್ಥಪೂರ್ಣ ಎಂದು ಉಪನ್ಯಾಸಕ ರೋಹಿಣಾಕ್ಷ ನುಡಿದರು. ಅವರು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಆಚರಿಸಿದ ಕಾರ್ಗಿಲ್ ವಿಜಯದಿವದ ಸಂಧರ್ಭದಲ್ಲಿ ಮಾತನಾಡುತ್ತಿದ್ದರು. ಜಗತ್ತಿನ ಅತೀ ದುರ್ಗಮ ಕದನ ಭೂಮಿಯಾದ ಕಾರ್ಗಿಲ್ ನಲ್ಲಿ ನಮ್ಮ ಯೋಧರ ಅಪ್ರತಿಮ ಹೋರಾಟದಿಂದ ಬಾರತದ ಸಾರ್ವಭೌಮತೆಯು ಉಳಿಯಿತು ಎಂದು ಹೇಳಿದರು. ಸೈನಿಕರನ್ನು ಕೇವಲ ಯುದ್ದದ ಸಂಧರ್ಭದಲ್ಲಿ […]

ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗಳು ವಿಷಯದ ಕುರಿತು ಮಾರ್ಗದರ್ಶನ

Tuesday, November 19th, 2013

ಆಗಸ್ಟ್ 23 ರಂದು ವಿವೇಕಾನಂದ ಪಿ. ಯು. ಕಾಲೇಜಿನಲ್ಲಿ ನಡೆದ ‘ಹದಿಹರೆಯದ ಸಮಸ್ಯೆಗಳು ಮತ್ತು ಸಲಹೆಗಳು’ ಈ ಕಾರ್ಯಕ್ರಮದಲ್ಲಿ ಇಲ್ಲಿನ ಸ್ಥಳೀಯ ಖ್ಯಾತ ವೈದ್ಯರಾದ ಡಾ| ಅನಿಲ್ ಬೈಪಾಡಿತ್ತಾಯ ಹಾಗೂ ಡಾ| ಸುಲೇಖ ವರದರಾಜ್ ಮಕ್ಕಳ ತಜ್ಞರು, ವಿದ್ಯಾರ್ಥಿಗಳಿಗೆ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಸಮಾಲೋಚನೆ ನಡೆಸಿದ ಇವರು ಹದಿಹರೆಯದ ವಿದ್ಯಾರ್ಥಿಗಳಲ್ಲಿ ಅಗುವಂತಹ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗಳು ವಿಷಯದ ಕುರಿತು ಚರ್ಚಿಸಿದರು. ಮಾನಸಿಕವಾಗಿ ಆಗುವ ಒತ್ತಡಗಳು, ಖಿನ್ನತೆ, ಮಾನಸಿಕ ಸ್ವಭಾವದ ಏರುಪೇರುಗಳ ಬಗ್ಗೆ […]

ವಿದ್ಯಾರ್ಥಿ ಸಂಘದ ಚುನಾವಣೆ

Tuesday, November 19th, 2013

ವಿವೇಕಾನಂದ ಪದವಿ ಪೂರ್ವ ಕಾಲೇಜಿನ ೨೦೧೩-೨೦೧೪ ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆ ಇತ್ತೀಚೆಗೆ ನಡೆದು, ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶ್ರೀ ಜಯರಾಮ. ದ್ವಿತೀಯ ಪಿಯುಸಿ, ಕಾರ್ಯದರ್ಶಿಯಾಗಿ ಶ್ರೀ. ಭರತ್ ರಾಜ್ ದ್ವಿತೀಯ ಪಿಯುಸಿ, ಹಾಗೂ ಜೊತೆ ಕಾರ್ಯದರ್ಶಿಯಾಗಿ ಕುಮಾರಿ ಹರ್ಷಿತಾ ಅಡೈ ಇವರುಗಳು ಆಯ್ಕೆಯಾಗಿರುತ್ತಾರೆ. ಪ್ರತಿ ತರಗತಿಗಳಿಂದ ಆಯ್ಕೆಯಾದ ಎರಡು ತರಗತಿ ಪ್ರತಿನಿಧಿಗಳು ವಿದ್ಯಾರ್ಥಿಸಂಘದ ಈ ಪದಾಧಿಕಾರಿಗಳನ್ನು ಮತದಾನದ ಮೂಲಕ ಆಯ್ಕೆ ಮಾಡಿದರು. ಚುನಾವಣಾ ಪ್ರಕ್ರಿಯೆಯನ್ನು ಪ್ರಾಂಶುಪಾಲರಾದ ಜೀವನ್ ದಾಸ್, ಉಪನ್ಯಾಸಕರುಗಳಾದ ಶ್ರೀ ಪ್ರಸಾದ್ ಶ್ಯಾನಭಾಗ್, […]

ಪ್ರತಿಭಾನ್ವಿತರು ಮಾದರಿಯಾಗಬೇಕು: ರವೀಂದ್ರ ಪಿ.

Tuesday, November 19th, 2013

ಪ್ರತಿಭಾವಂತರು ದೇಶದ ಸಂಪತ್ತು ಉನ್ನತ ಅಂಕಗಳಿಸಿಕೊಂಡು ಕೀರ್ತಿ ಪಡೆದ ಯುವ ಜನರು ಒಳ್ಳೆಯ ಸಂಸ್ಕಾರವನ್ನು ಜೀವನದಲ್ಲಿ ರೂಢಿಸಿಕೊಂಡು ಉಳಿದವರಿಗೆ ಮಾದರಿಯಾಗಬೇಕಾಗಿದೆ ಎಂದು ವಿವೇಕಾನಂದ ವಿದ್ಯಾವರ್ದಕ ಸಂಘದ ಕೋಶಾಧಿಕಾರಿ ಶ್ರಿ ರವೀಂದ್ರ ಪಿ, ನುಡಿದರು. ಅವರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ 2012-13 ನೇ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ. ಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಇಂದು ಈ ದೇಶದಲ್ಲಿ ಹೆಚ್ಚು ಶಿಕ್ಷಣವನ್ನು ಪಡೆದವರೇ ಹೆಚ್ಚು. ಭ್ರಷ್ಟರೂ,ಅಪಾಯಕರಿಗಳೂ ಆಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ […]

ಹೆತ್ತವರನ್ನು ಮಕ್ಕಳನ್ನು ಸಾಕುವುದಲ್ಲ, ಬೆಳೆಸಬೇಕಾಗಿದೆ – ಡಾ. ಪುಂಡಿಕ್ಯಾ ಗಣಪಯ್ಯ ಭಟ್

Tuesday, November 19th, 2013

ಪೋಷಕರ ಪಾತ್ರ ಎನ್ನುವುದು ಬಿಡುವಿಲ್ಲದ, ಸದಾ ಎಚ್ಚರವಾಗಿರಬೇಕಾದ ಪಾತ್ರವಾಗಿದ್ದು, ಮಕ್ಕಳ ಏಳ್ಗೆಯಲ್ಲಿ ಹೆತ್ತವರ ಪಾತ್ರ ಗiನಾರ್ಹವಾದುದು ಎಂದು ಮೂಡಬಿದ್ರಿಯ ಧವಳಾ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ.ಪುಂಡಿಕ್ಯಾ ಗಣಪಯ್ಯ ಭಟ್ ನುಡಿದರು. ಅವರು ಇತ್ತೀಚೆಗೆ ನಡೆದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ವಾರ್ಷಿಕ ಮಹಾಸಭೆಯ ಮುಖ್ಯ ಅತಿಥಿಯಾಗಿ ಬಾಗವಹಿಸಿದ್ದರು. ಮಕ್ಕಳನ್ನು ಬೆಳೆಸುವುದು. ಹೆತ್ತವರ ಜವಬ್ದಾರಿಯೇ ಹೊರತು ಕೇವಲ ಸಾಕುವುದು ಅಲ್ಲ ಸಾಕುವ ಪ್ರಕ್ರಿಯೆ ಕೇವಲ ಮಕ್ಕಳ ಭೌತಿಕ ಅವಶ್ಯಕತೆಯನ್ನು ಪೂರೈಸುವುದರಲ್ಲಿ ಕೊನೆಯಾಗುತ್ತದೆ. ಅದಕ್ಕಿಂತ ಹೆಚ್ಚಾಗಿ […]

ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ

ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ

Friday, November 15th, 2013

ಪ್ರತಿಯೊಬ್ಬ ವ್ಯಕ್ತಿಯಲ್ಲೂ ವ್ಯಕ್ತಿತ್ವವಿರುತ್ತದೆ. ಅದು ವಿಕಸನಗೊಳ್ಳಬೇಕಾದರೆ ಪ್ರಯತ್ನ ಅಗತ್ಯ ಎಂದು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶ್ರೀ ಸೂರ್ಯನಾರಾಯಣ ಬಿ.ವಿ ಯವರು ಹೇಳಿದರು. ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆದ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹೇಗೆ ತಯಾರಿ ನಡೆಸಬೇಕು, ಹೇಗೆ ಪರೀಕ್ಷೆಗಳನ್ನು ಎದುರಿಸಬೇಕು ಎಂಬದನ್ನು ತಿಳಿಸಿದರು. ಸಮಸ್ಯೆಗಳನ್ನು ಎದುರಿಸಲು ಬೇಕಾದ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು. […]

'ಗೀತೆಗಳ ಕಲಿಕೆಯಿಂದ ಮನಸ್ಸಿಗೆ ಸಮಾಧಾನ'

‘ಗೀತೆಗಳ ಕಲಿಕೆಯಿಂದ ಮನಸ್ಸಿಗೆ ಸಮಾಧಾನ’

Friday, November 15th, 2013

ಗೀತೆಗಳ ಕಲಿಕೆಯು ಮನುಷ್ಯನ ಮನಸ್ಸಿಗೆ ಸಹನೆ ಮತ್ತು ಸಮಾಧಾನ ತಂದು ಕೊಡುತ್ತದೆ. ಇಂದು ನವಜಾತ ಶಿಶುವಿನಿಂದ ತೊಡಗಿ ವಯೋವೃದ್ಧರನ್ನು ಕೂಡ ಕಸದ ತೊಟ್ಟಿಯಲ್ಲಿ ಕಾಣುವ ಪರಿಸ್ಥಿತಿ ಬಂದೊದಗಿದೆ. ಸಣ್ಣ ಮಕ್ಕಳೂ ಕೂಡ ಜೀವನದಲ್ಲಿ ಜಿಗುಪ್ಸೆ ತಾಳಿ ಸಾವಿಗೆ ಮುಖ ಮಾಡುತ್ತಿದ್ದಾರೆ. ಪರೀಕ್ಷಾ ಫಲಿತಾಂಶದ ದಿನದ ಆತ್ಮಹತ್ಯೆಗಳು ಸಹಜ ಎಂಬಂತಾಗಿದೆ. ಇಂತಹ ಮಾನಸಿಕ ಆತಂಕಗಳಿಂದ ದೂರವಾಗಲು ಗೀತೆಗಳ ಕಲಿಕೆಯು ಸಹಾಯವಾಗುತ್ತದೆ. ತಾಳ್ಮೆ, ಸಹನೆ ಮತ್ತು ಸಮಾಧಾನವು ಗೀತೆಗಳಿಂದ ಲಭಿಸುತ್ತದೆ ಎಂದು ಬೊಳಂತಿಮೊಗರು ಶಾಲೆಯ ಅಧ್ಯಾಪಕ ಶ್ರೀ ವಿಠಲ ನಾಯಕ […]

ರಾಜಸ್ಥಾನದಲ್ಲಿ ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದ ತಂಡ

ರಾಜಸ್ಥಾನದಲ್ಲಿ ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದ ತಂಡ

Friday, November 15th, 2013

ರಾಜಸ್ಥಾನದ ಸುಜಾನ್‌ಘಡ್‌ನಲ್ಲಿ ಸೆಪ್ಟೆಂಬರ್ 16 ರಿಂದ 19 ರ ವರೆಗೆ ನಡೆದ ವಿದ್ಯಾಭಾರತಿಯ ರಾಷ್ಟ್ರಿಯ ಚೆಸ್ ಸ್ಪರ್ಧೆಯಲ್ಲಿ ಹುಡುಗಿಯರ ವಿಭಾಗದಲ್ಲಿ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕವನ್ನೊಳಗೊಂಡ ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನವನ್ನು ಪಡೆದು, ಭಾರತ ಸರಕಾರದ ‘School Games Federation  of  India’  ನಡೆಸುವ ಈ ವಿಭಾಗದ ಅತ್ಯುನ್ನತ ಸ್ಪರ್ಧೆಯಲ್ಲಿ ವಿದ್ಯಾಭಾರತಿಯ ರಾಷ್ಟ್ರೀಯ ತಂಡವಾಗಿ ಚೆನೈನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿಗಳೊಂದಿಗೆ, ನಾಗರಾಜ್ ಆಂಗ್ಲ ಉಪನ್ಯಾನಸಕರು ತಂಡದ ಕೋಚ್, ರವಿಶಂಕರ್ ಮತ್ತು […]

Result March 2013 – 98%

Tuesday, July 23rd, 2013

DISTINCTION -204 FIRST CLASS -437 SECOND CLASS- 77 THIRD CLASS – 16 TOTAL PERCENTAGE – 98%.

ವಿವೇಕಾನಂದ ಪದವಿ ಪೂರ್ವ ಕಾಲೇಜು ಹೆತ್ತವರ ಸಮಾವೇಶ

Wednesday, June 12th, 2013

ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ಸೇರ್ಪಡೆಯಾದ ವಿದ್ಯಾರ್ಥಿಗಳ ಮತ್ತು ಅವರ ಹೆತ್ತವರ ಸಮಾವೇಶವು ದಿನಾಂಕ 9.6.2013 ಆದಿತ್ಯವಾರ ಬೆಳಗ್ಗೆ 9.30ರಿಂದ ಕಾಲೇಜಿನ ಕೇಶವ ಸಂಕಲ್ಪ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀನಿವಾಸ್ ಪೈ ಇವರು ವಹಿಸಿದರೆ, ಮುಖ್ಯ ಅತಿಥಿಗಳಾಗಿ ಆಡಳಿತ ಮಂಡಳಿಯ ಸಂಚಾಲಕರಾದ ಕೇಶವ ಮೂರ್ತಿ ಡಿ ಹಾಗೂ ಸಂಯೋಜನಾಧಿಕಾರಿ ವಿ.ಜಿ.ಭಟ್ ಭಾಗವಹಿಸಿದರು. ಬೆಳಗ್ಗೆ 9.30ರಿಂದ ವಿಜ್ಞಾನ ವಿಭಾಗಕ್ಕೆ ಸೇರ್ಪಡೆಯಾದ ವಿದ್ಯಾರ್ಥಿಗಳ ಹಾಗೂ ಅವರ ಹೆತ್ತವರ ಸಮಾವೇಶ ನಡೆದರೆ, […]

Highslide for Wordpress Plugin