IGNITE-2016 – ಕಾಲೇಜಿಗೆ ಸಮಗ್ರ ತಂಡ ಪ್ರಶಸ್ತಿ

ಮಂಗಳೂರಿನ ಬೆಸೆಂಟ್ evening ಕಾಲೇಜಿನಲ್ಲಿ ಇತ್ತೀಚೆಗೆ ನಡೆದ IGNITE-2016 ಅಂತರ್ ಪದವಿಪೂರ್ವ ಕಾಲೇಜು ಮಟ್ಟದ ವಿವಿಧ ಸಾಂಸ್ಕೃತಿಕ ಸ್ಫರ್ಧೆಗಳಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜು ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಸಂಗೀತ ಸ್ಫರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಅಂಕಿತಾ ಮತ್ತು ತಂಡಕ್ಕೆ ಪ್ರಥಮ ಬಹುಮಾನ ಲಭಿಸಿದೆ. ಹಾಗೆಯೇ ಛಾಯಾಗ್ರಹಣ ಸ್ಫರ್ಧೆಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಮನೋಜ್­ಗೆ ಪ್ರಥಮ ಸ್ಥಾನ, ಚಿತ್ರಕಲೆಯಲ್ಲಿ ದ್ವಿತೀಯ ಕಲಾ ವಿಭಾಗದ ಲಕ್ಷ್ಮಿಪ್ರಸಾದ್ ಗೆ ಪ್ರಥಮ ಬಹುಮಾನ, ಟ್ರೆಶರ್ ಹಂಟ್ ಸ್ಫರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಶ್ಯಾಮ್ ಶರಣ್ ಮತ್ತು ತಂಡಕ್ಕೆ ಪ್ರಥಮ ಬಹುಮಾನ, ಸಾಂಸ್ಕೃತಿಕ ಸ್ಫರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಅನುಷ ಮತ್ತು ತಂಡಕ್ಕೆ ಪ್ರಥಮ ಬಹುಮಾನ ಲಭಿಸಿದೆ. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜೀವನ್‌ದಾಸ್ ವಿಜೇತರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದ್ದಾರೆ.

DSC_1137

Highslide for Wordpress Plugin