ಕನಸುಗಳು-2014 ಸಮಾರೋಪ

ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕನಸುಗಳು-2014 ಶಿಬಿರದ ಸಮಾರೋಪ ಸಮಾರಂಭವು ತಾರೀಕು 13-9-2014 ರಂದು ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿಹಣಾಧಿಕಾರಿ ಪ್ರೊ| ಎ.ವಿ.ನಾರಾಯಣ್ ಇವರು ಮಕ್ಕಳು ತಮ್ಮ ವಯಸ್ಸಿಗೆ ತಕ್ಕಂತೆ ಕನಸು ಕಾಣುವುದು, ತಮ್ಮ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಕಾರ್ಯತತ್ಪರರಾಗುವುದು ಅತೀ ಮುಖ್ಯ. ನಮ್ಮ ದೇಶದಲ್ಲಿರುವ ಹಲವಾರು ವ್ಯಕ್ತಿಗಳು ಕನಸುಗಳನ್ನು ಕಾರ್ಯರೂಪಕ್ಕಿಳಿಸುವ ಪಥದಲ್ಲಿ ಅತ್ಯಂತ ಹೆಚ್ಚು ಆಸಕ್ತಿ ವಹಿಸಿದ ಕಾರಣ ಈಗ ಅತ್ಯಂತ ಗಣ್ಯವ್ಯಕ್ತಿಗಳೆನಿಸಿದ್ದಾರೆ ಎಂದರು.

ಅತಿಥಿಗಳಾಗಿದ್ದ ಇಸ್ರೊ ಸಂಸ್ಥೆಯ ವಿಜ್ಞಾನಿ ಡಾ| ಸುರೇಶ್ ಕುಮಾರ್ ಹೆಚ್.ಎನ್. ಅವರು ಮಂಗಳಯಾನದ ಆರಂಭದ ಹಂತದಿಂದ ಇತ್ತೀಚಿನ ಬೆಳವಣಿಗೆಯವರೆಗಿನ ಎಲ್ಲಾ ಕೆಲಸ ಕಾರ್ಯಗಳನ್ನು ಸವಿವರವಾಗಿ ದೃಶ್ಯ ಮತ್ತು ವೀಡಿಯೋಗಳ ಮೂಲಕ ವಿದ್ಯಾರ್ಥಿಗಳಿಗೆ ವಿವರಿಸಿದರು.

ಇನ್ನೋರ್ವ ಮುಖ್ಯ ಅತಿಥಿ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಶಶಿಧರ್ ಅವರು ಕನಸು ಕಾಣದಿದ್ದರೆ ನಿಮ್ಮ ಉದ್ದೇಶಗಳು ನನಸಾಗುವುದಾದರೂ ಹೇಗೆ? ಆದ್ದರಿಂದ ಕನಸುಗಳನ್ನು ಕಾಣಿ, ಅದನ್ನು ಕಾರ್ಯರೂಪಕ್ಕೆ ತನ್ನಿ. ಎಂದು ವಿದ್ಯಾರ್ಥಿಗಳಿಗೆ ಕರೆಯಿತ್ತರು. ತಮ್ಮ ಕನಸಾದ ಮಿಷನ್ 95+ ನ ವಿವರಗಳನ್ನು ತಿಳಿಸಿದರು. ನಂತರ ಅತಿಥಿಗಳು ಶಿಬಿರದಲ್ಲಿ ಭಾಗವಹಿಸಿದ 322 ವಿದ್ಯಾರ್ಥಿಗಳಿಗೆ ಸ್ಮರಣಿಕೆಯನ್ನಿತ್ತರು. ಭಾಗವಹಿಸಿದ 39 ಶಾಲೆಗಳಿಗೆ ಅಬ್ದುಲ್ ಕಲಾಂರವರ ಪೋಟೋವನ್ನು ಸ್ಮರಣಿಕೆಯಾಗಿ ನೀಡಲಾಯಿತು.

ಅತಿಥಿಗಳನ್ನು ಶ್ರೀಮತಿ ವಿನೋದಾ ಸರಸ್ವತಿ ಅವರು ಸ್ವಾಗತಿಸಿದರು. ಪ್ರಾಂಶುಪಾಲರಾದ ಶ್ರೀ ಜೀವನ್ ದಾಸ್ ಇವರು ವಂದಿಸಿದರು.

Highslide for Wordpress Plugin