Principal’s desk

ಶಿಕ್ಷಣವೆಂದರೆ ಮನುಷ್ಯನಲ್ಲಿ ಅಡಕವಾಗಿರುವ ಪರಿಪೂರ್ಣತೆಯನ್ನು ಹೊರಗೆಡುವಂತದ್ದು ಇದು ಶಿಕ್ಷಣದ ಬಗ್ಗೆ ಸ್ವಾಮಿ ವಿವೇಕಾನಂದರ ವ್ಯಾಖ್ಯೆ.

ಪ್ರಸ್ತುತ ಸ್ಪರ್ಧಾತ್ಮಕ ಯುಗಲ್ಲಿ ವಿದ್ಯಾರ್ಥಿಗಳಿಗೆ ಅಂಕಗಳ ಜೊತೆಗೆ ಜೀವನ ಮೌಲ್ಯಗಳನ್ನು ಕಲಿಸಿಕೊಂಡು ಬೆಳೆಸುವುದು ಕಷ್ಟ ಸಾಧ್ಯ ಎನ್ನುವ ಅಭಿಪ್ರಾಯವಿದೆ. ಈ ಅಭಿಪ್ರಾಯಗಳಿಗೆ ತದ್ವಿರುದ್ದವಾಗಿ, ಅಂಕಗಳಿಗೂ, ಅಂಕೆಗೂ ಮೀರಿದ ಸಾಧನೆಯ ಪಥದಲ್ಲಿ ಮುನ್ನಡೆಯುತ್ತಿರುವ ಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾಗಿರುವ ಪುತ್ತೂರಿನ ಹೃದಯ ಭಾಗದಲ್ಲಿ ಸ್ಥಾಪಿತ ಸಂಸ್ಥೆ ವಿವೇಕಾನಂದ ಪದವಿ ಪೂರ್ವ ಕಾಲೇಜು.

ವ್ಯಕ್ತಿಯ ಸರ್ವಾಂಗೀಣ ವಿಕಾಸವೆಂದರೆ ಕೇವಲ ಬೌಧ್ದಿಕ ವಿಕಾಸವಲ್ಲ. ಅದು ಶಾರೀರಿಕ, ನೈತಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ವಿಕಾಸ ಕೂಡ. ಈ ನಿಟ್ಟಿನಲ್ಲಿ ಸಮಾಜದ ಎಲ್ಲಾ ವರ್ಗಗಳ ಜನರ ಶೈಕ್ಷಣಿಕ ಆಶೋತ್ತರಗಳನ್ನು ಈಡೇರಿಸುತ್ತಾ ದಾಪುಗಾಲಿಡುತ್ತಿರುವ ಈ ಸಂಸ್ಥೆ 1965 ರಿಂದ ಈ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದೆ.

ಅಧ್ಯಯನಕ್ಕೆ ಪೂರಕವಾದ ವಾತಾವರಣದಲ್ಲಿ, ವಿಶಾಲವಾದ ಕಾಲೇಜು ಆವರಣವನ್ನು ಹೊಂದಿರುವ ವಿದ್ಯಾಲಯ ಜ್ಞಾನಾರ್ಥಿಗಳಿಗೆ ವಿಪುಲ ಅವಕಾಶವನ್ನು ಒದಗಿಸುತ್ತಿದೆ. ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಗಳನ್ನು ಹೊಂದಿರುವ ಕಾಲೇಜು ಹತ್ತನೇ ತರಗತಿಯಲ್ಲಿ ಉತ್ತೀರ್ಣರಾದ ಗ್ರಾಮೀಣ ಹಾಗೂ ನಗರ ಪ್ರದೇಶದ ಎಲ್ಲಾ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶಗಳನ್ನು ಸಕಲ ಸೌಲಭ್ಯಗಳೊಂದಿಗೆ ಕಲ್ಪಿಸಿದೆ. ಶೇಕಡಾ 95 ರ ಮೇಲೆ ಅಂಕಗಳನ್ನು ಗಳಿಸಿದ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕದಲ್ಲಿ ವಿಶೇಷ ರಿಯಾಯಿತಿಯನ್ನು ಮಾಡಲಾಗಿದೆ.

ವಿದ್ಯಾರ್ಥಿಗಳಲ್ಲಿ ಸ್ವತಂತ್ರವಾಗಿ ಪ್ರಯೋಗಜ್ಞಾನ ಬೆಳೆಸುವ ದೃಷ್ಟಿಯಿಂದ ಏಕಕಾಲದಲ್ಲಿ ಸುಮಾರು 100 ವಿದ್ಯಾರ್ಥಿಗಳಿಗೆ ಪ್ರಯೋಗ ಮಾಡಲು ಅವಕಾಶವಿರುವ ಪ್ರಯೋಗಾಲಯಗಳು, ಜ್ಞಾನ ವೃದ್ಧಿಗೆ ಅವಶ್ಯಕವಾದ ಪುಸ್ತಕಗಳ ಭಂಡಾರ (ಗ್ರಂಥಾಲಯ)ದ ವ್ಯವಸ್ಥೆ, ದೂರ-ದೂರದ ಊರುಗಳಿಂದ ವಿದ್ಯಾರ್ಜನೆಗಾಗಿ ಆಗಮಿಸುವ ಹುಡುಗ-ಹುಡುಗಿಯರಿಗೆ ಪ್ರತ್ಯೇಕವಾದ ವಸತಿನಿಲಯದ ವ್ಯವಸ್ಥೆಯನ್ನು ಹೊಂದಿದೆ. ವಿಶಾಲವಾದ ಕ್ರೀಡಾಂಗಣವನ್ನು ಹೊಂದಿದ್ದು, ಸೂಕ್ತ ತರಬೇತಿಯೊಂದಿಗೆ ತನ್ನ ಆರಂಭದ ದಿನಗಳಿಂದಲೂ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಾ, ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ನೀಡಿದ ಕೀರ್ತಿಗೆ ಭಾಜನವಾಗಿದೆ. ಬಡ ಹಾಗೂ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಹಲವು ವಿದ್ಯಾರ್ಥಿವೇತನ ಹಾಗೂ ಉಚಿತ ಭೋಜನದ ವ್ಯವಸ್ಥೆ, ಪಠ್ಯದ ಜೊತೆ-ಜೊತೆಗೆ ವಿವಿಧ ವ್ಯಕ್ತಿತ್ವ ವಿಕಸನ ಶಿಬಿರಗಳು, ತರಬೇತಿಗಳು, ಪರಿಸರ ಸಂಘ, ಚಿಗುರು ಸಂಘ, ಚಿಗುರು ಕಲಾ ವಿಜ್ಞಾನ, ವಾಣಿಜ್ಯ ಸಂಘಗಳು. ಯೋಗ, ಧ್ಯಾನಕ್ಕಾಗಿ ಕಾಲೇಜಿನ ಪಕ್ಕದಲ್ಲೇ ಧ್ಯಾನ ಮಂದಿರ, ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಅನಾವರಣಕ್ಕಾಗಿ ಕಾಲೇಜು ಆವರಣದಲ್ಲೇ ’ವಿಕಸನ ಟಿವಿ’ ಹಾಗೂ ರೇಡಿಯೋ ಪಾಂಚಜನ್ಯ ೯೦.೮ಈಒ ಸೌಲಭ್ಯವನ್ನು ಹೊಂದಿದೆ. ಕಾಲೇಜು ವಾಹನದ ಸೌಲಭ್ಯ, ಐಎಎಸ್/ಕೆಎಎಸ್ ನಂತಹ ನಾಗರಿಕಾ ಸೇವೆಗಳ ಪರೀಕ್ಷೆಯನ್ನು ಎದುರಿಸಲು ಅವಶ್ಯವಾದ ತರಬೇತಿ ಕೊಡುತ್ತಿರುವ ’ಯಶಸ್’ ಸಂಸ್ಥೆ ಕಾಲೇಜಿನ ಕೀರ್ತಿಗೆ ಹೊಸದೊಂದು ಭಾಷ್ಯ ಬರೆದಿದೆ. ಹೀಗೆ ವ್ಯಕ್ತಿತ್ವ ವಿಕಾಸದೊಂದಿಗೆ ಉತ್ತಮ ಭವಿಷ್ಯ ರೂಪಿಸುವ ಕನಸು ಹೊತ್ತಿರುವ ವಿದ್ಯಾರ್ಥಿಗಳಿಗೆ ಪೂರಕ ವಾತಾವರಣವನ್ನು ಕಲ್ಪಿಸಲಾಗಿದೆ.

ಆಯಾಯ ವಿಷಯಗಳ ವಿವಿಧ ವಿಭಾಗಗಳು ನಡೆಸುವಂತಹ ಕಾಲೇಜು ಹಾಗೂ ಅಂತರ್ ಕಾಲೇಜು ಮಟ್ಟದ ಸ್ಪರ್ಧೆ ಹಾಗೂ ಕಾರ್‍ಯಾಗಾರಗಳಲ್ಲಿ ಭಾಗವಹಿಸಲು ವಿಪುಲ ಅವಕಾಶ. ನುರಿತ, ಅನಭವೀ ಉಪನ್ಯಾಸಕರ ತಂಡ. ಸ್ಪರ್ಧಾರಹಿತ ಸೇವೆಯಲ್ಲಿ ತೊಡಗಿರುವುದು ಸಂಸ್ಥೆಯ ಹೆಗ್ಗಳಿಕೆ.

ಮಾತೃ ಸಂಸ್ಥೆಯಾದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ), ಇಲ್ಲಿನ ಹಿರಿಯರು ಸಾಕಷ್ಟು ಮುಂದಾಲೋಚನೆಯೊಂದಿಗೆ ಸಮಗ್ರ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿದ್ದು, ಪಿ.ಯು.ಸಿ ವಿದ್ಯಾಭ್ಯಾಸದ ನಂತರದ ಪದವಿ/ಇಂಜಿನಿಯರಿಂಗ್/ತಾಂತ್ರಿಕ ಶಿಕ್ಷಣ/ ಬಿ.ಎಡ್/ಕಾನೂನು ವಿದ್ಯಾಭ್ಯಾಸ ಮಾಡ ಬಯಸುವ ವಿದ್ಯಾರ್ಥಿಗಳಿಗೆ ಪೂರಕ ಸೌಕರ್ಯಗಳೊಂದಿಗೆ ಅವಕಾಶಗಳನ್ನು ಕಲ್ಪಿಸಲಾಗಿದೆ.

ವಿವೇಕಾನಂದ ಪದವಿ ಪೂರ್ವ ಕಾಲೇಜಿಗೆ ಹಲವು ವರ್ಷಗಳ ಸೇವಾ ಅನುಭವವಿದ್ದು, ಇಲ್ಲಿ ವಿದ್ಯಾರ್ಜನೆಗೈದ ಸಾವಿರಾರು ವಿದ್ಯಾರ್ಥಿಗಳು ದೇಶದ ಉದ್ದಗಲಗಳಲ್ಲಿ ಉನ್ನತ ಹುದ್ದೆಗಳಾದ ಭಾರತೀಯ ವಾಯುಸೇನೆ, ವೈದ್ಯಕೀಯ, ಶಿಕ್ಷಣ, ಮಾಧ್ಯಮ, ಬ್ಯಾಂಕಿಂಗ್, ಕ್ರೀಡೆ, ಇಂಡಿಯನ್ ಆರ್ಮಿ, ವ್ಯಾಪಾರ, ಕೃಷಿ, ಚಿತ್ರರಂಗ ಹೀಗೆ ಹತ್ತು-ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಸಾರ್ಥಕ್ಯದ ಭಾವ ನಮ್ಮಲ್ಲಿ ಮೂಡಿಸಿದೆ. ಸಂಸ್ಥೆಯ ಈ ಅಗಣಿತ ಸಾಧನೆಯ ಹಿಂದೆ ಹಲವು ಹಿರಿಯರ ನಿತ್ಯ ನಿರಂತರ ಹೋರಾಟ, ಆಶೀರ್ವಾದವಿದೆ. ಕಿರಿಯರ ಸಹಕಾರವಿದೆ, ಬಡವ-ಬಲ್ಲವ ಮೇಲು-ಕೀಳು ಅನ್ನೋ ತಾರತಮ್ಯ ಇಲ್ಲದೆ ಸರ್ವರಿಗೂ ಶಿಕ್ಷಣ ಅನ್ನೋ ಧ್ಯೇಯದೊಂದಿಗೆ ಸಮಾಜದ ಎಲ್ಲಾ ವರ್ಗದವರನ್ನೂ ಮುಖ್ಯವಾಹಿನಿಗೆ ತರಬೇಕೆಂಬ ನಮ್ಮ ಪ್ರಯತ್ನಕ್ಕೆ ನಿಮ್ಮ ಸಹಕಾರವೂ ಇರಲಿ.

ಧನ್ಯವಾದಗಳು,
ಮಹೇಶ್ ನಿಟಿಲಾಪುರ
ಪ್ರಾಂಶುಪಾಲರು

Highslide for Wordpress Plugin