ವಿಜ್ಞಾನ ಮಾದರಿ ಸ್ಪರ್ಧೆ : ಸ್ವಸ್ತಿಕ್ ಪದ್ಮಅಂತರ್‌ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

swastik-padmaವಿವೇಕಾನಂದ ಪದವಿ ಪೂರ್ವಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಶ್ರೀ ಸ್ವಸ್ತಿಕ್ ಪದ್ಮಇವರು ತಯಾರಿಸಿದ Innovative Eco Friendly cost effective material developed from LDPE Plastic material ಎಂಬ ವಿಜ್ಞಾನ ಮಾದರಿಯು IRIS ಗೆ ಆಯ್ಕೆಯಾಗಿ, ರಾಷ್ಟ್ರ ಮಟ್ಟದ ವಿಜ್ಞಾನ ಮಾದರಿಯಲ್ಲಿ ಪ್ರಥಮ ಸ್ಥಾನ ಪಡೆದು ಅಂತರ್‌ರಾಷ್ಟ್ರೀಯ ಮಟ್ಟಕ್ಕೆಆಯ್ಕೆಯಾಗಿದ್ದಾರೆ.

ಅಲ್ಲದೆ ಇವರ ಅಸಾಧಾರಣ ಪ್ರತಿಭೆ ಮತ್ತು ಸಾಧನೆಗಾಗಿ 14-11-2017 ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯುವ National Child Award for Exceptional Achievement ಎಂಬ ಪ್ರಶಸ್ತಿಗೆ ರಾಷ್ಟ್ರಪತಿಯವರಿಂದ ಪುರಸ್ಕೃತಗೊಳ್ಳಲಿದ್ದಾರೆ. ಇದರೊಂದಿಗೆ ಹತ್ತು ಸಾವಿರರೂಪಾಯಿ ನಗದು, ಬೆಳ್ಳಿ ಪದಕವನ್ನು ಪಡೆಯಲಿದ್ದಾರೆ. ಇವರು ಬಂಟ್ವಾಳ ತಾಲೂಕಿನ ಕೆದಿಲದ ಮುರ್ಗಜೆ ಶ್ರೀ ರಾಮ ಭಟ್ ಎಂ ಮತ್ತು ಮಲ್ಲಿಕಾ ದಂಪತಿಗಳ ಪುತ್ರ. ವಿದ್ಯಾರ್ಥಿಯ ಸಾಧನೆಗೆಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದ ಅಭಿನಂದಿಸಿದ್ದಾರೆ.

Highslide for Wordpress Plugin