Google Science Fair ನಲ್ಲಿ ಭಾಗವಹಿಸಲಿರುವ ಸ್ವಸ್ತಿಕ್‌ಪದ್ಮ

Swastik-Padmaವಿವೇಕಾನಂದ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಸ್ವಸ್ತಿಕ್‌ಪದ್ಮ ಇವರು ಅಂತರಾಷ್ಡ್ರೀಯ ಮಟ್ಟದ ISEF-2018 (International Science and Engineering Fair-2018) ಇದರಲ್ಲಿ ತೋರಿಸಿದ ಸಾಧನೆಯನ್ನು ಪರಿಗಣಿಸಿ ಅಮೇರಿಕಾದಲ್ಲಿರುವ MIT (Massachusetts Institute of Technology) Lincoln Laboratory and International Astronomical Union  ಸಂಸ್ಥೆಯು ಇವರ ಹೆಸರನ್ನು ಮೈನರ್ ಗ್ರಹ (Minor Planet) ಗೆ ನೀಡಿದೆ.

ಇವರು 2019 ರ ಮೇ ತಿಂಗಳಲ್ಲಿ ನಡೆಯುವ Google Science Fair ನಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಇದರಲ್ಲಿ Desal: Development of a novel and feasible floating desalination device ಎಂಬ ವಿಷಯದ ಕುರಿತು ಸಂಶೋಧನೆ ನಡೆಸಲಿದ್ದಾರೆ.

ಇವರು ಬಂಟ್ವಾಳ ತಾಲೂಕಿನ ಕೆದಿಲದ ಮುರ್ಗಜೆ ಶ್ರೀ ರಾಮ ಭಟ್ ಎಂ ಮತ್ತು ಮಲ್ಲಿಕಾ ಇವರ ಪುತ್ರ. ವಿದ್ಯಾರ್ಥಿಯ ಈ ಅಮೋಘ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದ ಅಭಿನಂದಿಸಿದ್ದಾರೆ.

Highslide for Wordpress Plugin