ಗೀತ ಸಾಹಿತ್ಯ ಕಾರ್ಯಕ್ರಮ

ತಂತ್ರಜ್ಞಾನದ ಭರಾಟೆಯಲ್ಲಿ ಮಾನವೀಯತೆ ಮರೆಯಾಗಿ ಸಂಬಂಧಗಳು ಅಳಿಸಿಹೋಗುತ್ತಿದೆ. ಅಂತರಂಗ ಬರಿದಾಗುತ್ತಿದೆ. ವಿದ್ಯಾಲಯದಲ್ಲಿ ಕಲಿತ ಆದರ್ಶವನ್ನು ಪ್ರಾಯೋಗಿಕವಾಗಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೊಳಂತಿಮೊಗರು ಸರಕಾರಿ ಪ್ರಾಥಮಿಕ ಶಾಲೆಯ ಪ್ರಾಧ್ಯಾಪಕರಾದ ಶ್ರೀ ವಿಠಲ ನಾಯಕ್ ಹೇಳಿದರು.

ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಗೀತ ಸಾಹಿತ್ಯ ಎಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

Shri-Vittala-nayak-Speaking

ತಂತ್ರಜ್ಞಾನದಿಂದಾಗಿ ನೆಮ್ಮದಿ ಕಡಿಮೆಯಾಗಿ ಒತ್ತಡ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಅವಿರತವಾಗಿ ತೊಡಗಿಸಿಕೊಳ್ಳುವುದರಿಂದ ನೆಮ್ಮದಿ ಹಾಳಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸಾಮಾನ್ಯಜ್ಞಾನದ ಜೊತೆಗೆ ನೈತಿಕ ಶಿಕ್ಷಣವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಶಿಸ್ತು, ಛಲ ಮತ್ತು ಸ್ಪಷ್ಟ ಗುರಿ ಇದ್ದಾಗ ಸಾಧನೆಯ ಉತ್ತುಂಗಕ್ಕೆ ಏರಲು ಸಾಧ್ಯ. ಗುರುಹಿರಿಯರಿಗೆ ಗೌರವ ಕೊಡುವುದರೊಂದಿಗೆ ಸಚ್ಚಾರಿತ್ರ್ಯವಂತರಾಗಿ ಉತ್ತಮ ನಡೆ ನುಡಿಯನ್ನು ಅಳವಡಿಸಿಕೊಳ್ಳಬೇಕು. ಕಠಿಣ ಪರಿಸ್ಥಿತಿಯನ್ನು ಎದುರಿಸುವ ಇಚ್ಛಾಶಕ್ತಿ, ಆತ್ಮಸ್ಥೈರ್ಯಗಳನ್ನು ಬೆಳೆಸಿಕೊಳ್ಳಬೇಕು. ಉತ್ತಮ ಸಂಸ್ಕಾರವನ್ನು ಅಳವಡಿಸಿಕೊಂಡಾಗ ವ್ಯಕ್ತಿತ್ವದ ವಿಕಾಸವಾಗುತ್ತದೆ. ಹೆತ್ತವರನ್ನು ಪ್ರೀತಿಸಿ, ಗುರುಗಳನ್ನು ಗೌರವಿಸಿ ಎಲ್ಲರನ್ನೂ ವಿಶ್ವಾಸದಿಂದ ನೋಡಿಕೊಂಡಾಗ ಬದುಕು ಸುಗಮವಾಗುತ್ತದೆ ಎಂದರು. ಜೊತೆಗೆ ತಮ್ಮ ಹಾಸ್ಯಚಟಾಕಿಗಳ ಮೂಲಕ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಮನೋರಂಜಿಸಿದರು.

ಸಮಾರಂಭದಲ್ಲಿ ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾದ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ದಯಾಮಣಿ ಸ್ವಾಗತಿಸಿದರು. ಉಪನ್ಯಾಸಕಿ ಕುಮಾರಿ ಅಕ್ಷತಾ ವಂದಿಸಿದರು.

Highslide for Wordpress Plugin