ಬಾಲಾಪರಾಧದ ವಿಚಾರ ಮಂಡನೆ ಕಾರ್ಯಕ್ರಮ

ವಿವೇಕಾನಂದ ಪದವಿ ಪೂರ್ವಕಾಲೇಜಿನಲ್ಲಿ ಕಲಾವಿಭಾಗದ ವಿದ್ಯಾರ್ಥಿಗಳಿಂದ ಬಾಲಾಪರಾಧ ಎಂಬ ವಿಷಯದ ಕುರಿತು ವಿಚಾರ ಮಂಡನೆ ಕಾರ್ಯಕ್ರಮ ನಡೆಯಿತು. ವಿಶೇಷ ಅತಿಥಿಗಳಾಗಿ ಪುತ್ತೂರು ಪೋಲೀಸ್ ಠಾಣೆಯ ಮುಖ್ಯ ಆರಕ್ಷಕರಾಗಿ ಶ್ರೀ ರಾಧಕೃಷ್ಣ ಭಾಗವಹಿಸಿದ್ದರು. ನಂತರ ಮಾತನಾಡಿ ಬಾಲ್ಯದಲ್ಲಿ ತಂದೆ-ತಾಯಿ, ಶಿಕ್ಷಕರು, ಗೆಳೆಯ- ಗೆಳತಿಯರು ಮಕ್ಕಳ ಮನಸ್ಸಿನ ಮೇಲೆ ಪ್ರಭಾವವನ್ನು ಬೀರುತ್ತಾರೆ. ಅವರ ನಡೆ-ನುಡಿ, ಕ್ರಿಯೆ-ಪ್ರತಿಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಅನುಕರಿಸಲು ಯತ್ನಿಸುತ್ತಾರೆ. ಆದ್ದರಿಂದ ಸಮಾಜದಲ್ಲಿ ಬದುಕುವಲ್ಲಿ ಮನುಷ್ಯನ ಗುಣ ಅನುಕರಣೀಯವಾಗಬೇಕು ಎಂದರು.

DSC_0146

Shri-Radhakrishna-speaking

ಕೆಲವು ಮಕ್ಕಳು ಹಿರಿಯರಿಗೆ ಮುಜುಗುರ ಉಂಟು ಮಾಡುವ ರೀತಿಯಲ್ಲಿ ವರ್ತಿಸಬಹುದು.ಸಮಾಜ ಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಳ್ಳಬಹುದು. ಈ ಬಗೆಯ ವರ್ತನೆಗೆ ಅನುವಂಶಿಕ ಕಾರಣಗಳು, ಮಿದುಳಿಗೆ ಆಗುವ ಹಾನಿ, ತಂದೆತಾಯಿಯ ಪ್ರೀತಿಯ ಕೊರತೆ ಹೀಗೆ ಅನೇಕ ಕಾರಣಗಳಿರಬಹುದು. ಇವುಗಳಿಂದ ಮಕ್ಕಳು ಬಾಲಾಪರಾಧಿಗಳಾಗುವ ಸಾಧ್ಯತೆ ಹೆಚ್ಚು.ಇಂತವರನ್ನು ಸರಿದಾರಿಗೆ ತರುವ ಜವಾಬ್ದಾರಿ ಹೆತ್ತವರ ಮತ್ತು ಶಿಕ್ಷಕರ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜೀವನ್‌ದಾಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕೀರ್ತಿ, ಶರಣ್ಯ, ಆಶ್ರಯ್, ರಿತೇಶ್, ದಿಶಾ ಮತ್ತು ಯಶಸ್ ಬಾಲಾಪರಾಧದ ವಿವಿಧ ರೀತಿಯ ಕಾರಣಗಳು ಮತ್ತು ಪರಿಣಾಮಗಳ ಬಗ್ಗೆ ವಿಷಯ ಮಂಡನೆ ನಡೆಸಿದರು. ವಿದ್ಯಾರ್ಥಿ ಅಮೋಘ ಸ್ವಾಗತಿಸಿ ಕಾರ್ತಿಕ್ ವಂದಿಸಿದರು. ಗೌತಮ್ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು.

Highslide for Wordpress Plugin