ವಿಚಾರ ಮಂಡನೆ

ಇಲ್ಲಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳಿಂದ ’ವೃದ್ಧಾಪ್ಯದ ಸಮಸ್ಯೆಗಳು’ ಎಂಬ ವಿಷಯದ ಕುರಿತು ವಿಚಾರ ಮಂಡನೆಯು ನಡೆಯುತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಜೀವನ್‌ದಾಸ್ ವಹಿಸಿದ್ದರು. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದ ಇಂಗ್ಲೀಷ್ ಉಪನ್ಯಾಸಕಿ ಜಯಶ್ರೀ ಅವರು ಮಾತನಾಡಿ, ’ವೃದ್ಧಾಪ್ಯ ಎನ್ನುವುದು ನಮ್ಮಲ್ಲೊಂದು ಹೊಸತಾದ ಬದಲಾವಣೆ ಉಂಟಾಗುವ ಸಮಯ. ನಾವು ಬಾಲ್ಯದಿಂದ ಬೆಳೆಸಿಕೊಂಡು ಬಂದ ಸಂಸ್ಕಾರದಿಂದ ನಮಗೆ ವೃದ್ಧಾಪ್ಯವನ್ನ ಸಹನೀಯ ಮಾಡಲು ಸಾಧ್ಯ. ಯೋಗದಿಂದ ಅನಾರೋಗ್ಯವನ್ನು ದೂರವಿಟ್ಟರೆ ವೃದ್ದಾಪ್ಯದಲ್ಲಿ ಸುಖಜೀವನವನ್ನು ನಡೆಸಲು ಸಾಧ್ಯ ಎಂದರು’.

ಕಲಾ ವಿಭಾಗದ ವಿದ್ಯಾರ್ಥಿಗಳಾದ ಚಿತ್ರಾಕ್ಷಿ, ವಿದ್ಯಾಶ್ರೀ, ಪ್ರಜ್ಞಾ ಹಾಗೂ ಕೌಸಲ್ಯ ವಿಷಯದ ಕುರಿತು ವಿಚಾರ ಮಂಡನೆ ಮಾಡಿದರು. ಸುನೀತ ಸ್ವಾಗತಿಸಿ ದಿಶಾ ಸಾಲಿಯನ್ ವಂದಿಸಿದರು. ಅಮೂಲ್ಯ ಬಿ ಎಮ್ ಕಾರ್ಯಕ್ರಮವನ್ನು ನಿರೂಪಿಸಿದರು.

Smt.-Jayashri-speaking

Highslide for Wordpress Plugin