ರಾಷ್ಟ್ರಮಟ್ಟದ ಕಾರ್ಯಾಗಾರ ಮತ್ತು ಪ್ರದರ್ಶನದಲ್ಲಿ ವಿವೇಕಾನಂದ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳು

ವಿವೇಕಾನಂದ ಪದವಿ ಪೂರ್ವಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಅಮೃತ್‌ ನಾರಾಯಣ ಹೊಸಮನೆ ಇವರು ಮೃದಂಗ ವಾದನ ವಿಭಾಗದಲ್ಲಿ ಮತ್ತು ಭಾಮಿನಿ ಭಟ್ ಕೆ. ಇವರು ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಸಿ.ಸಿ,.ಆರ್.ಟಿ, ಯವರು ಗಾಂಧಿ ಜಯಂತಿಯಂದು ದೆಹಲಿಯಲ್ಲಿ ನಡೆಸಿದ ಭಾರತೀಯ ಸಂಸ್ಕೃತಿ ಮತ್ತು ಕಲೆಗಳನ್ನು ಪ್ರತಿಬಿಂಬಿಸುವ ರಾಷ್ಟ್ರಮಟ್ಟದ ಕಾರ್ಯಾಗಾರ ಮತ್ತು ಪ್ರದರ್ಶನದಲ್ಲಿ ಭಾಗವಹಿಸಿರುತ್ತಾರೆ.

Bhamini-bhat-taking-prize

Amurth-narayan-hosamane-taking-prize

ಗಾಂಧಿ ಜಯಂತಿಯಂದು ಬೆಳಿಗ್ಗೆ ಏಳರಿಂದ ಒಂಭತ್ತು ಘಂಟೆಯವರೆಗೆ ದೆಹಲಿಯ ರಾಜ್‌ಘಾಟ್­ನಲ್ಲಿ ನಡೆದ ಗಾಂಧಿ ಸ್ಮೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಸಂಜೆ ಮೂರರಿಂದ ಐದು ಘಂಟೆಯವರೆಗಿನ ಮೃದಂಗ ವಾದನ ಕಾರ್ಯಕ್ರಮದಲ್ಲಿ ಅಮೃತ್‌ನಾರಾಯಣ ಹೊಸಮನೆ ಪಾಲ್ಗೊಂಡರು.

ಪಡ್ಡಾಯೂರು ನಿವಾಸಿ ಶ್ರೀ ಬಾಲಕೃಷ್ಣ ಭಟ್ ಹೊಸಮನೆ ಮತ್ತು ಶ್ರೀಮತಿ ಜಯಲಕ್ಷ್ಮಿ ಎಸ್ ಇವರ ಸುಪುತ್ರರಾದ ಅಮೃತ್‌ನಾರಾಯಣ ಹೊಸಮನೆ ಇವರು ಈಗಾಗಲೇ 2017 ರಲ್ಲಿ ಸಿ.ಸಿ.ಆರ್.ಟಿ.ಯವರು ಹೈದರಾಬಾದ್­ನಲ್ಲಿ ನಡೆದ ರಾಷ್ಟ್ರಮಟ್ಟದ “ವಿವಿಧತೆಯಲ್ಲಿ ಏಕತೆ” ಕಾರ್ಯಾಗಾರದಲ್ಲಿಯೂ ಭಾಗವಹಿಸಿರುತ್ತಾರೆ. ಅಲ್ಲದೆ ಕಳೆದ ಆರು ವರ್ಷಗಳಿಂದ ಶಿಷ್ಯ ವೇತನವನ್ನು ಪಡೆಯುತ್ತಿದ್ದಾರೆ.

ಅದೇ ರೀತಿ ಗಾಂಧಿ ಜಯಂತಿಯಂದು ಬೆಳಿಗ್ಗೆ ಏಳರಿಂದ ಒಂಭತ್ತು ಘಂಟೆಯವರೆಗೆ ದೆಹಲಿಯ ರಾಜ್‌ಘಾಟ್­ನಲ್ಲಿ ನಡೆದ ಗಾಂಧಿ ಸ್ಮೃತಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ನಡೆದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಪುತ್ತೂರು ನಿವಾಸಿ ಡಾ| ರವಿಪ್ರಕಾಶ್ ಮತ್ತು ಡಾ| ವಿಜಯ ಸರಸ್ವತಿ ಇವರ ಸುಪುತ್ರಿಯಾದ ಭಾಮಿನ್ ಭಟ್ ಕೆ. ಇವರು ಪ್ರತಿಭಾನ್ವಿತ ಗಾಯಕಿಯಾಗಿದ್ದು ಕಳೆದ ನಾಲ್ಕು ವರ್ಷಗಳಿಂದ ಶಿಷ್ಯವೇತನ ಪಡೆಯುತ್ತಿದ್ದಾರೆ.

Highslide for Wordpress Plugin