ವ್ಯಕ್ತಿತ್ವ ವಿಕಸನ ಕಾರ್ಯಕ್ರಮ

ಅಂತಃಶಕ್ತಿಯನ್ನು ಅರಿತುಕೊಂಡು ಹೊಸ ಅಸ್ತಿತ್ವವನ್ನು ಸ್ಥಾಪಿಸಬೇಕು- ಆದರ್ಶ ಗೋಖಲೆ

ಮನದೊಳಗಿನ ಅಗಾಧ ಸಾಮರ್ಥ್ಯವನ್ನು ನಾವೇ ಹೊರಗೆಡಹಬೇಕು. ಅಂತಃಶಕ್ತಿಯನ್ನು ಅರಿತುಕೊಳ್ಳುವ ಮೂಲಕ ಹೊಸ ಅಸ್ತಿತ್ವವನ್ನು ಸ್ಥಾಪಿಸಬೇಕು. ನಮ್ಮನ್ನು ನಾವು ಅರ್ಥಮಾಡಿಕೊಳ್ಳುವುದರೊಂದಿಗೆ ಜೀವನಪ್ರೀತಿಯನ್ನು ರೂಢಿಸಿಕೊಳ್ಳಬೇಕು. ಒಳಗಿನ ಸುಪ್ತ ಪ್ರಜ್ಞೆಯನ್ನು ಎಚ್ಚರಿಸಿ ನಮ್ಮಲ್ಲಿ ನಾವೇ ಮಾತನಾಡಿಕೊಳ್ಳಬೇಕು ಎಂದು ಖ್ಯಾತ ವಾಗ್ಮಿ ಆದರ್ಶ ಗೋಖಲೆ ಹೇಳಿದರು.

ವಿವೇಕಾನಂದ ಪದವಿಪೂರ್ವ ಕಾಲೇಜು ಆಯೋಜಿಸಿದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

Adarsh-Gokhale-speaking

Vinay Jadav speaking

ಅಂತರಂಗ ಶುದ್ಧವಾಗಿದ್ದರೆ ಮನಸ್ಸು ಕ್ರಿಯಾಶೀಲವಾಗಿರುತ್ತದೆ. ಬಂಧುಪ್ರೇಮ, ದೇಶಪ್ರೇಮದಂಥ ಉತ್ತಮ ಉದಾತ್ತ ಆಲೋಚನೆಗಳಿಗೆ ಬದುಕನ್ನು ಬದಲಿಸುವ ಶಕ್ತಿ ಇದೆ. ದೇಹ ಮನಸ್ಸುಗಳ ನಡುವಿನ ಕೊಂಡಿ ಕಳಚಿಕೊಳ್ಳದಂತಿರಬೇಕು. ಪ್ರಾಣಾಯಾಮ, ಯೋಗಾಭ್ಯಾಸಗಳ ನೆರವಿನಿಂದ ಚಿಂತೆಯಿಲ್ಲದ ಅತಿಶ್ರೇಷ್ಠ ಮನಸ್ಥಿತಿಯನ್ನು ಸಾಧಿಸಬೇಕು. ನಮ್ಮ ಚಲನೆ ಸದಾ ಮೇಲ್ಮುಖವಾಗಿದ್ದು ಯಶಸ್ಸು ನಮ್ಮನ್ನು ಹಿಂಬಾಲಿಸುವಂತಿರಬೇಕು ಎಂದು ನುಡಿದರು.

ಇನ್ನೋರ್ವ ಸಂಪನ್ಮೂಲ ವ್ಯಕ್ತಿ ವಿನಯ ಜಾಧವ್ ಮಾತನಾಡಿ ಉತ್ತಮ ವ್ಯಕ್ತಿತ್ವದ ಜೊತೆ ಒಳ್ಳೆಯ ಅಂಕಗಳು ಸಮ್ಮಿಳಿತಗೊಂಡಗ ಯಶಸ್ವಿ ವ್ಯಕ್ತಿ ರೂಪುಗೊಳ್ಳುತ್ತಾನೆ. ತನ್ನ ಗುರಿಯನ್ನು ನಿರ್ಧರಿಸಿಕೊಂಡು ನಾಯಕತ್ವ ಗುಣ ಮನೋದೈಹಿಕ ಸಾಮರ್ಥ್ಯ,ಆತ್ಮವಿಶ್ವಾಸ, ಆತ್ಮಾವಲೋಕನ, ಬದ್ಧತೆ, ದೃಢ ಸಂಕಲ್ಪಗಳನ್ನು ಮೈಗೂಡಿಸಿಕೊಂಡಾಗ ಬದಕು ಸಫಲವಾಗುತ್ತದೆ. ಮಾನವೀಯ ಸಂಬಂಧಗಳಿಗೆ ಮಹತ್ವವನ್ನು ನೀಡಿ ಸತ್ಪಥದಲ್ಲಿ ಸಾಗಬೇಕು ಎಂದು ಕರೆ ನೀಡಿದರು.

ಉಪನ್ಯಾಸಕಿ ರಮ್ಯಜ್ಯೋತಿ ಅತಿಥಿಗಳನ್ನು ಪರಿಚಯಿಸಿದರು. ಪುಷ್ಪಲತಾ ಸ್ವಾಗತಿಸಿ ಮಮತಾ ವಂದಿಸಿದರು.

Highslide for Wordpress Plugin