ಎಸ್. ಎಂ. ಕುಶೆ ವಿದ್ಯಾಸಂಸ್ಥೆಯ ’ಸರೋಜ್ ಮಧು ಕಲಾ ಉತ್ಸವ – 2018’ ದಲ್ಲಿ ರನ್ನರ್ ಅಪ್ ಪ್ರಶಸ್ತಿ

ಮಂಗಳೂರಿನ ಅತ್ತಾವರದ ಸರೋಜಿನಿ ಮಧುಸೂಧನ ಕುಶೆ ಕಾಲೇಜಿನಲ್ಲಿ ನಡೆದ ಎರಡು ದಿನಗಳ ’ಸರೋಜ್ ಮಧು ಕಲಾ ಉತ್ಸವ -2018’ ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಹಲವು ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾರೆ.

Prize-winners

ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ರಾಮ್‌ಪ್ರಸಾದ್ ಪ್ರಥಮ, ಸುಹಾನ್ ಶೆಟ್ಟಿ ತೃತೀಯ ಬಹಮಾನವನ್ನು ಭರತನಾಟ್ಯ ಯುಗ ಸ್ಫರ್ಧೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಜಾಹ್ನವಿ ಮತ್ತು ಗಾನವಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಭಜನಾ ಸ್ಫರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಶ್ರೀಚೈತ್ರ ಮತ್ತು ತಂಡವು ತೃತೀಯ ಸ್ಥಾನವನ್ನು ಪಡೆದುಕೊಂಡಿದೆ. ರಂಗೋಲಿ ಸ್ಫರ್ಧೆಯಲ್ಲಿ ನೇಹಾ ಮತ್ತು ತಂಡ ತೃತೀಯ ಸ್ಥಾನವನ್ನು ಪಡೆದುಕೊಂಡಿತು. ಪುರಾಣಸಾರ ಸ್ಪರ್ಧೆಯಲ್ಲಿ ಕಲಾ ವಿಭಾಗದ ಶರತ್ ಮತ್ತು ತಂಡ ಪ್ರಥಮ ಸ್ಥಾನ, ಜಾನಪದ ನೃತ್ಯದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ನೇಹಾ ಮತ್ತು ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ರಾಗ್ ತರಾಂಗ್ ವೈಯುಕ್ತಿಕ ವಿಭಾಗದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಜಾನ್ವಿ ಡಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡರು. ಒಟ್ಟು ಸ್ಪರ್ಧೆಯಲ್ಲಿ ವಿವೇಕಾನಂದ ಪದವಿ ಪೂರ್ವ ವಿದ್ಯಾಸಂಸ್ಥೆಯು ದ್ವಿತೀಯ ಸ್ಥಾನವನ್ನು (ರನ್ನರ್ ಆಫ್) ಬಹುಮಾನವನ್ನು ಪಡೆದುಕೊಂಡಿತ್ತು.

Highslide for Wordpress Plugin