ಪೋಷಕರ ಪಾತ್ರ ಎನ್ನುವುದು ಬಿಡುವಿಲ್ಲದ, ಸದಾ ಎಚ್ಚರವಾಗಿರಬೇಕಾದ ಪಾತ್ರವಾಗಿದ್ದು, ಮಕ್ಕಳ ಏಳ್ಗೆಯಲ್ಲಿ ಹೆತ್ತವರ ಪಾತ್ರ ಗiನಾರ್ಹವಾದುದು ಎಂದು ಮೂಡಬಿದ್ರಿಯ ಧವಳಾ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ.ಪುಂಡಿಕ್ಯಾ ಗಣಪಯ್ಯ ಭಟ್ ನುಡಿದರು. ಅವರು ಇತ್ತೀಚೆಗೆ ನಡೆದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ವಾರ್ಷಿಕ ಮಹಾಸಭೆಯ ಮುಖ್ಯ ಅತಿಥಿಯಾಗಿ ಬಾಗವಹಿಸಿದ್ದರು. ಮಕ್ಕಳನ್ನು ಬೆಳೆಸುವುದು. ಹೆತ್ತವರ ಜವಬ್ದಾರಿಯೇ ಹೊರತು ಕೇವಲ ಸಾಕುವುದು ಅಲ್ಲ ಸಾಕುವ ಪ್ರಕ್ರಿಯೆ ಕೇವಲ ಮಕ್ಕಳ ಭೌತಿಕ ಅವಶ್ಯಕತೆಯನ್ನು ಪೂರೈಸುವುದರಲ್ಲಿ ಕೊನೆಯಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಮಕ್ಕಳನ್ನು ಉನ್ನತಮಟ್ಟಕ್ಕೆ ಬೆಳೆಸಬೇಕಾಗಿದೆ ಎಂದು ಹೇಳಿದರು.
ಪ್ರತಿ ಮಗುವೂ ವಿಶಿಷ್ಠ ಎಂಬುವುದನ್ನು ಹೆತ್ತವರು ಅರಿತುಕೊಂಡು, ಒಂದು ಮಗುವನ್ನು, ಇನ್ನೊಂದು ಮಗುವಿನ ಸಾಧನೆಯ ಜೊತೆ ಹೋಲಿಸದೆ ಆ ಮಗುವಿನ ಸಾಮರ್ಥ್ಯವನ್ನು ಅರಿತು ಅದನ್ನು ಬೆಳೆಸುವುದರ ಕಡೆಗೆ ಗಮನ ನೀಡಬೇಕು. ಕೇವಲ ಇಂಜಿನಿಯರಿಂಗ್, ಮೆಡಿಕಲ್ ನಂತಹ ಶಿಕ್ಷಣ ಮಾತ್ರ ನಮ್ಮ ಕನಸಾಗದೆ ಸಮಾಜದಲ್ಲಿರುವ ಇನ್ನೂ ಅನೇಕ ಉನ್ನತ ಅವಕಾಶಗಳ ಕಡೆಗೆ ನಮ್ಮ ಮಕ್ಕಳ ಗಮನ ಹರಿಯುವಂತೆ ವಿದ್ಯಾಲಯಗಳು ಮಾಡಬೇಕಾಗಿದೆ ಎಚ್ಚರಿಸಿದರು.
ಸಮಾರಂಭದಲ್ಲಿ ವಿವೇಕಾನಂದ ವಿದ್ಯಾಲಯಗಳ ಸಂಸ್ಥಾಪಕರಾದ ಶ್ರೀ ರಾಮ ಭಟ್ ಉಪಸ್ಥಿತರಿದ್ದು ಸಂಸ್ಥೆಯ ಹುಟ್ಟಿನ ಹಿನ್ನೆಲೆಯನ್ನು ಮೆಲುಕು ಹಾಕಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಶ್ಯಾಮಸುಂದರ ರೈ, ಖಜಾಂಚಿ ಶ್ರೀ ವೆಂಕಟೇಶ ಮೂರ್ತಿ, ಕಾಲೇಜು ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಪೈ, ಸಂಚಾಲಕರಾದ ಶ್ರೀ ಜಯರಾಮ ಭಟ್, ಶ್ರೀ ವಿ.ಜಿ.ಭಟ್ ಪ್ರಾಂಶುಪಾಲರಾದ ಶ್ರೀ ಜೀವನ್ ದಾಸ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಸಂಶೋಧಕ ಶ್ರೀ ಬದನಾಜೆ ಶಂಕರಭಟ್, ಶ್ರೀ ರಾಮಕೃಷ್ಣ ಹೈಸ್ಕೂಲ್ ಶಿಕ್ಷಕಿ ಶ್ರೀಮತಿ ವಸಂತಿ ಇವರನ್ನು ಸನ್ಮಾನಿಸಲಾಯಿತು. ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಈ ಸಂಧರ್ಭದಲ್ಲಿ ಚಿನ್ನದ ಪದಕ ತೊಡಿಸಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಶ್ರೀ ರೋಹಿಣಾಕ್ಷ ಮತ್ತು ಶ್ರೀ ಪ್ರಸಾದ್ ಶಾನುಭಾಗ್ ನಿರ್ವಹಿಸಿದರು. ಶ್ರೀ ಶ್ಯಾಮಸುಂದರ ರೈ ಸ್ವಾಗತಿಸಿದರು. ಶ್ರೀಮತಿ ಯಶವಂತಿ ವಂದಿಸಿದರು.