ಪ್ರತಿಭಾವಂತರು ದೇಶದ ಸಂಪತ್ತು ಉನ್ನತ ಅಂಕಗಳಿಸಿಕೊಂಡು ಕೀರ್ತಿ ಪಡೆದ ಯುವ ಜನರು ಒಳ್ಳೆಯ ಸಂಸ್ಕಾರವನ್ನು ಜೀವನದಲ್ಲಿ ರೂಢಿಸಿಕೊಂಡು ಉಳಿದವರಿಗೆ ಮಾದರಿಯಾಗಬೇಕಾಗಿದೆ ಎಂದು ವಿವೇಕಾನಂದ ವಿದ್ಯಾವರ್ದಕ ಸಂಘದ ಕೋಶಾಧಿಕಾರಿ ಶ್ರಿ ರವೀಂದ್ರ ಪಿ, ನುಡಿದರು. ಅವರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ 2012-13 ನೇ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ. ಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಇಂದು ಈ ದೇಶದಲ್ಲಿ ಹೆಚ್ಚು ಶಿಕ್ಷಣವನ್ನು ಪಡೆದವರೇ ಹೆಚ್ಚು. ಭ್ರಷ್ಟರೂ,ಅಪಾಯಕರಿಗಳೂ ಆಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಈ ದೇಶದ ಆಸ್ತಿಯಾಗಬೇಕು. ಸಮಾಜದಿಂದ ನಾವು ಪಡೆದ ಋಣವನ್ನು ತೀರಿಸುವ ನಿಟ್ಟಿನಲ್ಲಿ ಸರ್ವಪ್ರಯತ್ನವನ್ನು ಮಾಡಬೇಕಾಗಿದೆ ಎಂದರು.ವಿವೇಕಾನಂದರ ಕನಸಿನ ಬಲಿಷ್ಠ ಹಾಗು ಸದೃಢ ಭಾರತ ನಿರ್ಮಾಣದಲ್ಲಿ ನಮ್ಮೆಲ್ಲರ ಪಾಲಿದೆ ಎಂದು ನುಡಿದು ವಿದಾರ್ಥಿಗಳಿಗೆ ಶುಭ ಹಾರೈಸಿದರು.
ವಿದ್ಯಾರ್ಥಿಗಳ ಸಾಧನೆಯ ಹಿಂದೆ ವಿದ್ಯಾರ್ಥಿಗಳ ಪರಿಶ್ರಮದ ಜೊತೆಗೆ ಹೆತ್ತವರು, ಗುರುಗಳು ಹಾಗು ಸಂಸ್ಥೆಯ ಆಡಳಿತ ಮಂಡಳಿಯ ಪ್ರೋತ್ಸಾಹ ಪ್ರೇರಣೆಗಳೂ ಇರುತ್ತದೆ. ಇದನ್ನು ಸದಾ ನಾವು ನೆನಪಿಟ್ಟುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕೊಂಡಿದ್ದ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಶ್ಯಾಮಸುಂದರ ರೈ ಯವರು ವಿದಾರ್ಥಿಗಳಿಗೆ ಶುಭಹಾರೈಸಿದರು. ಶ್ರೀ ಪ್ರಸಾದ್ ಶಾನುಭಾಗ್ ಪ್ರ್ರಸ್ತಾವಿಕ ನುಡಿಗಳೊಂದಿಗೆ, ಸ್ವಾಗತಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಪೈ ,ಸಂಚಾಲಕರಾದ ಶ್ರೀ ಜಯರಾಮ್ ಭಟ್, ಶ್ರೀ ವಿ.ಜಿ ಭಟ್, ಜೀವನದಾಸ್ ಎ. ಮತ್ತು ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀ ಎಚ್. ಕೆ. ಪ್ರಕಾಶ್ ನಿರ್ವಹಿಸಿದರು. ಶ್ರೀಮತಿ ನಳಿನ ಕುಮಾರಿ ವಂದಿಸಿದರು.