ಆಗಸ್ಟ್ 23 ರಂದು ವಿವೇಕಾನಂದ ಪಿ. ಯು. ಕಾಲೇಜಿನಲ್ಲಿ ನಡೆದ ‘ಹದಿಹರೆಯದ ಸಮಸ್ಯೆಗಳು ಮತ್ತು ಸಲಹೆಗಳು’ ಈ ಕಾರ್ಯಕ್ರಮದಲ್ಲಿ ಇಲ್ಲಿನ ಸ್ಥಳೀಯ ಖ್ಯಾತ ವೈದ್ಯರಾದ ಡಾ| ಅನಿಲ್ ಬೈಪಾಡಿತ್ತಾಯ ಹಾಗೂ ಡಾ| ಸುಲೇಖ ವರದರಾಜ್ ಮಕ್ಕಳ ತಜ್ಞರು, ವಿದ್ಯಾರ್ಥಿಗಳಿಗೆ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ನೀಡಿದರು.
ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಸಮಾಲೋಚನೆ ನಡೆಸಿದ ಇವರು ಹದಿಹರೆಯದ ವಿದ್ಯಾರ್ಥಿಗಳಲ್ಲಿ ಅಗುವಂತಹ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗಳು ವಿಷಯದ ಕುರಿತು ಚರ್ಚಿಸಿದರು. ಮಾನಸಿಕವಾಗಿ ಆಗುವ ಒತ್ತಡಗಳು, ಖಿನ್ನತೆ, ಮಾನಸಿಕ ಸ್ವಭಾವದ ಏರುಪೇರುಗಳ ಬಗ್ಗೆ ನೈಜ ಉದಾಹರಣೆಗಳೊಂದಿಗೆ, ಸುಮಾರು ಎರಡು ತಾಸುಗಳಷ್ಟು ಸಂಭಾಷಣೆ ನಡೆಸಿದರು. ಸಮಕಾಲಿನ ಉದಾಹರಣೆಗಳೊಂದಿಗೆ ಪ್ರಾಜೆಕ್ಟರ್ ಮೂಲಕ ವಿದ್ಯಾರ್ಥಿಗಳಲ್ಲಿ ಮಾನಸಿಕ ಆತ್ಮವಿಶ್ವಾಸ ಸಬಲಗೊಳಿಸುವ ವಿಡಿಯೋ ತುಣುಕುಗಳನ್ನು ತೋರಿಸಲಾಯಿತು. ಅಂತೆಯೇ ಸಲಹೆಗಳನ್ನು ವೈಯಕ್ತಿಕವಾಗಿ ಚರ್ಚಿಸಿ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಿದರು. ಕಾಲೇಜು ಪ್ರಾಂಶುಪಾಲರಾದ ಜೀವನ್ದಾಸ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಕ್ಷೇಮಪಾಲಕರಾದ ಜೀವಶಾಸ್ತ್ರ ವಿಭಾಗದ ಉಪನ್ಯಾಸಕರಾದ ಮುರಳಿ ಪಿ.ಜಿ. ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ನಾಯಕರು ವಂದಿಸಿದರು.