ದೇಶಕ್ಕಾಗಿ ಬಲಿಧಾನ ಮಾಡಿಕೊಂಡ ವೀರ ಸೈನಿಕರನ್ನು ಸ್ಮರಣೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯ. ಸ್ಯೆನಿಕರ ಬಲಿದಾನ, ಹೋರಾಟದಿಂದಾಗಿ ದೇಶದ ನಾಗರಿಕರು ಸುರಕ್ಷಿತರಾಗಿ ಬದುಕುತ್ತಿದ್ದಾರೆ. ಹೀಗಾಗಿ ಕಾರ್ಗಿಲ್ ವಿಜಯದಿವಸದ ಆಚರಣೆ ಅರ್ಥಪೂರ್ಣ ಎಂದು ಉಪನ್ಯಾಸಕ ರೋಹಿಣಾಕ್ಷ ನುಡಿದರು.
ಅವರು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಆಚರಿಸಿದ ಕಾರ್ಗಿಲ್ ವಿಜಯದಿವದ ಸಂಧರ್ಭದಲ್ಲಿ ಮಾತನಾಡುತ್ತಿದ್ದರು. ಜಗತ್ತಿನ ಅತೀ ದುರ್ಗಮ ಕದನ ಭೂಮಿಯಾದ ಕಾರ್ಗಿಲ್ ನಲ್ಲಿ ನಮ್ಮ ಯೋಧರ ಅಪ್ರತಿಮ ಹೋರಾಟದಿಂದ ಬಾರತದ ಸಾರ್ವಭೌಮತೆಯು ಉಳಿಯಿತು ಎಂದು ಹೇಳಿದರು.
ಸೈನಿಕರನ್ನು ಕೇವಲ ಯುದ್ದದ ಸಂಧರ್ಭದಲ್ಲಿ ಮಾತ್ರ ಸ್ಮರಿಸಿಕೋಳ್ಳದೆ, ಅವರನ್ನು ಸದಾ ಗೌ ರವಿಸುವ ರಕ್ಷಣೆಯನ್ನು ನಮ್ಮ ಸರಕಾರ ಆದ್ಯತೆಯ ವಿಷಯವ್ನಾಗಿ ಸ್ವೀಕರಿಸಬೇಕು. ನಿವೃತ್ತ ಸೈನಿಕರಿಗೆ ಹಾಗೂ ಹುತಾತ್ಮ ಸೈನಿಕರ ಕುಟುಂಬ ಸದಸ್ಯರಿಗೆ ಸೂಕ್ತ ಸೌಲಭ್ಯಗಳು ಸಕಾಲದಲ್ಲಿ ದೊರೆಯುವಂತಾಗಬೇಕು ಎಂದು ಆಗ್ರಹಿಸಿದರು. ಯುವ ಜನರು ಸೈನ್ಯಕ್ಕೆ ಸೇರುವುದಕ್ಕೆ ಪೂರಕ ವಾತಾವರಣ ತಯಾರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀ ಜೀವನ್ ದಾಸ್,ವಿದ್ಯಾರ್ಥಿ ಕ್ಷೇಮ ಪಾಲಕರಾದ ಶ್ಯಾನುಭಾಗ್,ಮುರಳಿ .ಪಿ. ಜಿ, ವಿದ್ಯಾರ್ಥಿ ನಾಯಕರಾದ ಜಯರಾಮ್, ಭರತ್ರಾಜ್, ಹರ್ಷಿತ ಉಪಸ್ಥಿತರಿದ್ದರು.