ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ‘ಕನಸುಗಳು ಸಮಾರೋಪ ಸಮಾರಂಭ ನ. 30 ರಂದು ನಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಸಂಚಾಲಕ ಶ್ರೀ ರಾಧಾಕೃಷ್ಣ ಭಕ್ತ ವಹಿಸಿ, ಮಾತಾನಾಡಿ, ಇಲ್ಲಿ ನಡೆದ ವಿಚಾರಗಳು ಮನಸ್ಸಿನ ಕನಸನ್ನೂ ನನಸಾಗಿಸಲು ಅನುಕೂಲವಾಗಲಿ ಎಂದು ಶುಭಹಾರೈಸಿದರು. ಮುಖ್ಯ ಅತಿಥಿಯಾಗಿ ಭಾರತ ಸರಕಾರದ ನಿವೃತ್ತ ಕಾರ್ಯದರ್ಶಿ, ಪರಮಾಣು ಶಕ್ತಿ, ಬಾಹ್ಯಕಾಶ, ಭೂಮಿಯ ಆಯೋಗಗಳ ಹಣಕಾಸು ವಿಭಾಗದ ಸದಸ್ಯ ಶ್ರೀ. ವಿ.ವಿ.ಭಟ್, ಸಂಯೋಜಕ ಶ್ರೀ.ವಿ.ಜಿ.ಭಟ್ ಉಪಸ್ಥಿತರಿದ್ದರು.
ಈಸಂದರ್ಭದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವಿಜ್ಞಾನಿಗಳು ಹಾಗೂ ಬೆಂಗಳೂರಿನ ಇಸ್ರೋ ಸಲಹೆಗಾರ ಡಾ.ರಂಗನಾಥ ನವಲಗುಂದ ಬಹುಮಾನ ವಿತರಿಸಿ, ಶುಭ ಹಾರೈಸಿದರು.. ಗ್ರೀಷ್ಮಾ ಗ್ರಾಮ ವೀಕ್ಷಣೆಯ ಕುರಿತ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಾಂಶುಪಾಲ ಜೀವನ್ ದಾಸ್ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿ, ವಂದಿಸಿದರು. ಉಪನ್ಯಾಸಕಿ ಶ್ರೀಮತಿ ನಳಿನಕುಮಾರಿ ಸ್ವಾಗತಿಸಿ, ವಿದ್ಯಾರ್ಥಿನಿ ಕುಮಾರಿ ಜಾಹ್ನವಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಕು. ರಮ್ಯಾಜ್ಯೋತಿ ಸಹಕರಿಸಿದರು.
ಎರಡನೇ ದಿನದ ಕಾರ್ಯಕ್ರಮ ಬೆಳಿಗ್ಗೆ ಉದ್ಘಾಟನೆಗೊಂಡು ಸಂಜೆ ಸಮಾರೋಪ ಸಮಾರಂಭ ನಡೆಯಿತು. ಉದ್ಘಾಟನಾ ಕಾರ್ಯಕ್ರಮದ ವಿಶೇಷ ಉಪನ್ಯಾಸಕ ಗದಗ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿರವರು ಮಾತನಾಡಿ ಚಾಣಕ್ಯ, ವಿದ್ಯಾರಣ್ಯ ಬಿಟ್ಟರೆ ದೇಶದ ಸ್ಪಷ್ಟ ಚಿತ್ರಣ ಕೊಟ್ಟವರು ವಿವೇಕಾನಂದರು. ರೋಗಿಯ ರೋಗದ ಚರಿತ್ರೆ ತಿಳಿಯದೆ ಸರಿಯಾದ ಚಿಕಿತ್ಸೆ ನೀಡಲೂ ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಭಾರತ ಕಟ್ಟಲು ಹೊರಟ ನಾವು ಭಾರತದ ಹಿಂದಿನ ಸ್ಥಿತಿ ಗತಿ, ಶಕ್ತಿ ದೌರ್ಬಲ್ಯ ತಿಳಿಯದೆ ಹೊರಟರೆ ದೇಶ ಕಟ್ಟಲು ಸಾಧ್ಯವಿಲ್ಲ ಎಂದರು. ಮುಖ್ಯ ಅತಿಥಿಯಾಗಿ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಉಪಸ್ಥಿತರಿದ್ದರು. ವಿವೇಕನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ. ಶಿವಪ್ರಸಾದ್ ಇ. ಸಭಾಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಶ್ರೀ ರೋಹಿಣಾಕ್ಷ ಸ್ವಾಗತಿಸಿ, ಶ್ರೀ ಪ್ರಶಾಂತ್ ಶೆಟ್ಟಿ ವಂದಿಸಿದರು.. ವಿದ್ಯಾರ್ಥಿ ಶ್ರೀವತ್ಸಾ ಕಾರ್ಯಕ್ರಮ ನಿರೂಪಿಸಿದರುಉಪನ್ಯಾಸಕಿ ಸುನೀತಾ ಸಹಕರಿಸಿದರು.