ಪುತ್ತೂರು. : ಜೂ 19 : ವಿದ್ಯಾರ್ಥಿಗಳು ತಮ್ಮ ಕಲಿಕೆಯೊಂದಿಗೆ ವಿವೇಕಾನಂದರ ಆದರ್ಶವನ್ನು ಪಾಲಿಸುವಂತಾಗಬೇಕು ಎಂದು ಕೆ ರಾಮಭಟ್ ಹೇಳಿದರು. ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪೃಥಮ ಪಿಯು ವಿದ್ಯಾರ್ಥಿಗಳ ಹೆತ್ತವರ ಸಮಾವೇಶದಲ್ಲಿ ಅವರು ಮಾತನಾಡುತ್ತಾ ವಿವೇಕಾನಂದರ ಹೆಸರಿನಲ್ಲಿ ನಡೆಯುತ್ತಿರುವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದರು.
ವಿದ್ಯಾರ್ಥಿ ಕ್ಷೇಮಪಾಲಕ ಪ್ರಸಾದ್ ಶಾನ್ಭಾಗ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡುತ್ತಾ ಕಾಲೇಜಿನ ಶಿಸ್ತು, ನಿಯಮಗಳ ಕುರಿತು ಮಾಹಿತಿ ನೀಡಿದರು. ಹೆಚ್ ಕೆ ಪ್ರಕಾಶ್ ಸಿ.ಇ.ಟಿ ಮತ್ತು ಬ್ರಿಡ್ಜ್ ಕೋರ್ಸುಗಳ ಮಾಹಿತಿ ನೀಡಿದರು. ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಜಯರಾಮ ಭಟ್ ಎಂ.ಟಿ, ಪ್ರೊ. ಎ.ವಿ ನಾರಾಯಣ ಕಾರ್ಯನಿರ್ವಹಣಾಧಿಕಾರಿ, ವಸಂತ ಕುಮಾರ್ ಸಿ.ಕೆ. ಅಧ್ಯಕ್ಷರು ಶಿಕ್ಷಕ-ರಕ್ಷಕ ಸಂಘ, ವಿದ್ಯಾರ್ಥಿಗಳಿಗೆ ಶುಭಾಶು ಕೋರಿದರು. ಪ್ರಾಂಶುಪಾಲ ಜೀವನ್ದಾಸ್ ವಿದ್ಯಾರ್ಥಿಗಳಿಗೆ ಪೂರಕ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ ಪೈಯವರು ವಿದ್ಯಾರ್ಥಿಗಳು ಮತ್ತು ಹೆತ್ತವರಿಗೆ ಕಿವಿಮಾತು ಹೇಳಿದರು. ವಸತಿನಿಲಯ ಕ್ಷೇಮಪಾಲಕರಾದ ಶ್ರೀಧರ ನಾಕ್ ವಸತಿ ನಿಲಯದ ಕುರಿತು ಮಾಹಿತಿ ನೀಡಿದರು. ಉಪನ್ಯಾಕಿ ಶ್ರೀಮತಿ ಯಶವಂತಿ ವಂದಿಸಿ. ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.