ಪುತ್ತೂರು : ಶ್ರೀಮಂತಿಕೆ ಇದ್ದಾಗ ಸಮಸ್ಯೆಗಳಿಲ್ಲ ಎನ್ನುವುದು ಸುಳ್ಳು. ಸಮಸ್ಯೆಗಳು ಎಲ್ಲರನ್ನೂ ಕಾಡುತ್ತವೆ. ಸೀಮಿತ ಖರ್ಚಿನಲ್ಲಿ ಪರಿಶುದ್ಧ್ಧ ಜೀವನ ನಡೆಸಬೇಕು. ಸೂಕ್ತವೆನಿಸುವ ಆಶ್ರಮ, ಆಸರೆತಾಣಗಳಿಗೆ ನೆರವು ನೀಡಬೇಕು. ಕೊಡುಗೈದಾನಿಗಳಾದಾಗಲೇ ಸಮಸ್ಯೆಗಳು ವಿರಳವಾಗುವುದಕ್ಕೆ ಸಾಧ್ಯ.ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಾಹಣಾಧಿಕಾರಿಗಳಾದ ಪ್ರೊ.ಎ.ವಿ.ನಾರಾಯಣ್ ಅವರು ಹೇಳಿದರು. ಕನ್ಯಾನದ ಭಾರತ ಸೇವಾಶ್ರಮದಲ್ಲಿ ಪುತ್ತೂರು ವಿವೇಕಾನಂದ ಪ. ಪೂ.ಕಾಲೇಜಿನ ಕಲಾಸಂಘದ ವತಿಯಿಂದ ಹಮ್ಮಿಕೊಳ್ಳಲಾದ ‘ಹಿರಿ-ಕಿರಿಯರ ಸ್ನೇಹ ಸಮ್ಮಿಲನ’ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕಾಲೇಜು ಸಂಚಾಲಕ ಎಂ.ಟಿ. ಜಯರಾಮಭಟ್ ಅವರು ವೃದ್ದಾಪ್ಯವೆನ್ನುವುದು ಶಾಪವಲ್ಲ, ಬದುಕಿನ ಗತಿ ಯೆಂದು ವಿವರಿಸಿದರು. ಭಾರತ ಸೇವಾಶ್ರಮದ ಅಧ್ಯಕ್ಷರಾದ ಈಶ್ವರ ಭಟ್ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಜೀವನ್ದಾಸ್, ಕಲಾಸಂಘದ ಸಂಯೋಜಕಿ ಮೋನಿಷಾ, ಹಿರಿಯ ವಿದ್ಯಾರ್ಥಿ ಮಿಲನ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಡಾ. ನವೀನ್ ಕುಮಾರ್ ಮರಿಕೆ ಪ್ರಸ್ತಾವನೆ ಮಾಡಿದರು. ವಿದ್ಯಾರ್ಥಿನಿ ದಿವ್ಯಾ ಸ್ವಾಗತಿಸಿ, ಸನತ್ ವಂದಿಸಿದರು. ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಆಶ್ರಮದ ಹಿರಿ-ಕಿರಿಯರೊಂದಿಗೆ ಬೆರೆತು ವಿದ್ಯಾರ್ಥಿಗಳು ಹಲವು ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.