ಪುತ್ತೂರು : ‘ಮುಕ್ತ ಮನಸ್ಸಿನಿಂದ ತಮ್ಮ ಸುತ್ತ ಮುತ್ತಲಿನ ವಾತಾವರಣವನ್ನು ನೋಡುವವರಿಗೆ ಸಾಹಿತ್ಯ ನಿರ್ಮಾಣ ಮಾಡಲು ಸಾಧ್ಯ’ ಎಂದು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥಡಾ. ಎಚ್.ಜಿ ಶ್ರೀಧರ್ ಹೇಳಿದರು. ವಿವೇಕಾನಂದ ಪ. ಪೂ. ಕಾಲೇಜಿನಲ್ಲಿ ಸಾಹಿತ್ಯ ವೇದಿಕೆಯ ಅಂಕುರಾರ್ಪಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಸಾಹಿತ್ಯಕ್ಕೆ ಸಹಜವಾದ ಹರಿವು ಇರುತ್ತದೆ. ಬಲವಂತವಾಗಿ ಸಾಹಿತ್ಯ ನಿರ್ಮಿಸಲು ಸಾಧ್ಯವಿಲ್ಲ ಎಂದುಹೇಳಿದರು.
ಸಭಾಧ್ಯಕ್ಷತೆ ವಹಿಸಿಧ್ದ ಆಡಳಿತ ಮಂಡಳಿ ಸಂಚಾಲಕರಾದ ಎಂ.ಟಿ. ಜಯರಾಮ ಭಟ್ ಅವರು ‘ಸಾಹಿತ್ಯ ಮನಸ್ಸನ್ನು ತಿಳಿಗೊಳಿಸುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಸಾಹಿತ್ಯದ ಅಭ್ಯಾಸದಲ್ಲಿ ತೊಡಗಬೇಕೆಂದು’ ಹೇಳಿದರು. ಪ್ರಾಂಶುಪಾಲರಾದ ಜೀವನ್ದಾಸ್ ಸಂದರ್ಭೋಚಿತವಾಗಿ ಮಾತನಾಡಿದರು. ಉಪನ್ಯಾಸಕಿ ರತ್ನಾವತಿ ಸ್ವಾಗತಿಸಿದರು. ಪುಷ್ಪಲತಾ ಕಾರ್ಯಕ್ರಮ ನಿರೂಪಿದರು. ದಿವ್ಯಾ ವಂದಿಸಿದರು.