ಪುತ್ತೂರು: ಆಗಸ್ಟ್ 14 ಇಲ್ಲಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಕೃಷ್ಣಾಷ್ಟಮಿಯ ಪ್ರಯುಕ್ತ ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ಜರಗಿದವು. ವಿದ್ಯಾರ್ಥಿನಿಯರಿಗೆ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ಮತ್ತು ಸಂಗೀತ ಕುರ್ಚಿ ಸ್ಪರ್ಧೆಗಳು ನಡೆದವು. ವಿದ್ಯಾರ್ಥಿನಿ ದಿಶಾ. ಇ, ದ್ವಿತೀಯ ಕಂಪ್ಯೂಟರ್ ವಿಭಾಗ ಮತ್ತು ಧನ್ಯ ಪ್ರಥಮ ಪಿ.ಯು.ಸಿ ಇವರು ಮೊಸರು ಕುಡಿಕೆ ಸ್ಪರ್ಧೆಯಲ್ಲೂ, ಹರ್ಷಿತಾ. ಡಿ ದ್ವಿತೀಯ ಇಲೆಕ್ಟ್ರಾನಿಕ್ಸ್ ವಿಭಾಗ ಮತ್ತು ರಚನಾ ಗೌಡ ಪ್ರಥಮ ಪಿ.ಯು.ಸಿ ಇವರು ಸಂಗೀತ ಕುರ್ಚಿ ಸ್ಪರ್ಧೆಯಲ್ಲೂ ವಿಜೇತರಾದರು.
ಹುಡುಗರ ವಿಭಾಗದಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆ ನಡೆದು ಪ್ರಥಮ ಕಲಾ ಮತ್ತು ವಾಣಿಜ್ಯ ವಿಭಾಗದ ತಂಡ ಪ್ರಥಮ ಸ್ಥಾನವನ್ನೂ , ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ತಂಡ ದ್ವಿತೀಯ ಸ್ಥಾನವನ್ನೂ ಪಡೆದುಕೊಂಡರು. ವಿದ್ಯಾರ್ಥಿ ಕ್ಷೇಮಪಾಲಕ ಶ್ರೀ ಪ್ರಸಾದ್ಶಾನಭಾಗ್, ಶ್ರೀಮತಿ ನಳಿನ ಕುಮಾರಿ, ಶ್ರೀ ಪ್ರಶಾಂತ್ ಶೆಟ್ಟಿ ಮತ್ತು ಇತರ ಉಪನ್ಯಾಸಕರು ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಕಾಲೇಜಿನ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಈ ಸ್ಪರ್ಧೆಗಳು ಏರ್ಪಟ್ಟಿದ್ದವು.