ಹದಿಹರೆಯದಲ್ಲಿ ಮಾನಸಿಕವಾಗಿ ಕುಗ್ಗಿದಲ್ಲಿ ಜೀವನಪೂರ್ತಿ ಕೀಳರಿಮೆಯಿಂದ ಬಳಲುವ ಸಾಧ್ಯತೆಯಿದೆ ಎಂದು ಖ್ಯಾತ ಚರ್ಮರೋಗ ತಜ್ಞ ಡಾ.ಬದರಿನಾಥ ಅವರು ಹೇಳಿದರು. ವಿವೇಕಾನಂದ ಪದವಿ ಪೂರ್ವ ಕಾಲೇಜಿನ ರೋಟರಿ ಇಂಟರ್ಯಾಕ್ಟ್ ಕ್ಲಬ್ನ ವತಿಯಿಂದ ನಡೆದ ಹದಿಹರೆಯದ ಸಮಸ್ಯೆಗಳು ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಇನೋರ್ವ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಡಾ. ಸುಲೇಖಾ ವರದರಾಜ್ ಅವರು ಮಾತನಾಡಿ ಅವಕಾಶಗಳು ಕೈ ತಪ್ಪಿದಾಗ ವಿದ್ಯಾರ್ಥಿನಿಯರು ಖಿನ್ನರಾಗಬಾರದು. ಸದಾವಕಾಶಗಳು ಒದಗಿ ಬರುತ್ತವೆ ಎಂಬ ನಿರೀಕ್ಷೆಯಲ್ಲಿ ಇರಬೇಕುಎಂಬ ಕಿವಿ ಮಾತು ಹೇಳಿದರು.
ಆಡಳಿತ ಮಂಡಳಿ ಸಂಚಾಲಕರಾದ ಜಯರಾಮಭಟ್ ಎಂ. ಟಿ. ವರು ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಜೀವನ್ದಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀಮತಿ ವಿನೋದ ಸರಸ್ವತಿ ಸ್ವಾಗತಿಸಿ, ಪ್ರಸಾದ್ ಶ್ಯಾನುಭಾಗ್ ವಂದಿಸಿದರು. ನಳಿನ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.