ಎಸ್.ಡಿ.ಎಂ ನ ಶಾಬ್ಬಿಕ್ ವರ್ಮ ಗೆ ಪ್ರಶಸ್ತಿ
ವಿವೇಕಾನಂದ ಪದವಿಪೂರ್ವ ಕಾಲೇಜು, ಪುತ್ತೂರು ಇದರ ಆಶ್ರಯದಲ್ಲಿ ಪ್ರಥಮ ಬಾರಿಗೆ ಸಂಘಟಿಸಲ್ಪಟ್ಟ ಜೂನಿಯರ್ ಮಾನ್ಸೂನ್ ಚೆಸ್ ಸ್ಪರ್ಧೆಯ ಪ್ರಥಮ ಸ್ಥಾನವನ್ನು ಧರ್ಮಸ್ಥಳ ಮಂಜುನಾಥೇಶ್ವರ ಪಿ.ಯು. ಕಾಲೇಜಿನ ಶಾಬ್ಬಿಕ್ ವರ್ಮ ಪಡೆದುಕೊಂಡರು. ದ್ವೀತಿಯ ಸ್ಥಾನವನ್ನು ಅಂಡ್ರೆಯಾ ಲಾರ್ಡ್ ಡಿಸೋಜ,ಸೈಂಟ್ ಆಗ್ನೆಸ್ ಕಾಲೇಜು,ಮಂಗಳೂರು ಹಾಗೂ ತ್ರತೀಯ ಸ್ಥಾನವನ್ನು ಚಂದನ್ ವಿವೇಕಾನಂದ ಪದವಿ ಪೂರ್ವ ಕಾಲೆಜು,ಪುತ್ತೂರು ಇವರು ಪಡೆದುಕೊಂಡರು.
ದಕ್ಷಿಣಕನ್ನಡ ಜಿಲ್ಲೆಯ 7 ಪ.ಪೂ.ಕಾಲೇಜುಗಳ 44 ಸ್ಫರ್ಧಿಗಳು ಭಾಗವಹಿಸಿದ್ದರು. ಅಗೋಸ್ಟ್ 28 ರ ಬೆಳ್ಳಗೆ ಆಡಳಿ ಮಂಡಳಿಯ ಸಂಚಾಲಕರಾದ ಜಯರಾಮ ಭಟ್ ರ ಅಧ್ಯಕ್ಷತೆಯಲ್ಲಿ ಶ್ರೀ ಗಣೇಶ್ ಪ್ರಾಧ್ಯಾಪಕರು ವಿವೇಕಾನಂದ ತಾಂತ್ರಿಕ ವಿದ್ಯಾಲಯ ಇವರಿಂದ ಉದ್ಘಾಟನೆ ಗೊಂಡ ಈ ಪಂದ್ಯಾವಳಿಯು 6 ಸುತ್ತುಗಳಲ್ಲಿ ಸ್ವಿಸ್ ಮಾದರಿಯಲ್ಲಿ ಸ್ಫರ್ಧೆ ನಡೆಯಿತು.
ಉತ್ತಮ 10 ಆಟಗಾರ ಪ್ರಶಸ್ತಿ ಗಳಿಸಿದ ಇತರರೆಂದರೆ ಸ್ವರೂಪ್ ವಿವೇಕಾನಂದ ಪದವಿ ಪೂರ್ವ ಕಾಲೇಜು, ಪುತ್ತೂರು , ಹರ್ಮನ್ ಮಿಲಾಗ್ರೆಸ್ ಕಾಲೇಜು. ಮಂಗಳೂರು, ನಿತಿನ್ಚಂದ್ರ ವಿವೇಕಾನಂದ ಪದವಿ ಪೂರ್ವ ಕಾಲೇಜು, ಪುತ್ತೂರು, ಶಲಾನ್ ಜಾನೆ ಪಾಯಸ್ , ಸೈಂಟ್ ಆಗ್ನೆಸ್ ಕಾಲೇಜು, ಮಂಗಳೂರು, ಶ್ರೇಯಸ್ ವಿವೇಕಾನಂದ ಪದವಿ ಪೂರ್ವ ಕಾಲೇಜು, ಪುತ್ತೂರು,ಅನಂತ ಕೃಷ್ಣ ವಿವೇಕಾನಂದ ಪದವಿ ಪೂರ್ವ ಕಾಲೇಜು, ಪುತ್ತೂರು, ವಿನಾಯಕ ಕೆ. ಧರ್ಮಸ್ಥಳ ಮಂಜುನಾಥೇಶ್ವರ ಪಿ.ಯು. ಕಾಲೇಜು,ಉಜಿರೆ.
ವಿಜೇತರಿಗೆ ಟ್ರೋಫಿ ಹಾಗೂ ಎಲ್ಲಾ ಸುತ್ತುಗಳಲ್ಲಿ ಸ್ಫರ್ಧಿಸಿದ ಆಟಗಾರರಿಗೆ ಭಾಗವಹಿಸಿದ ಪ್ರಮಾಣ ಪತ್ರಗಳನ್ನು ನೀಡಲಾಯಿತು.ಮುಖ್ಯ ಅತಿಥಿಗಳಾದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾಗಿರುವ ಶ್ರೀ ಶಿವಪ್ರಸಾದ್ ಇ. ಇವರು ಬಹುಮಾನ ವಿತರಿಸಿದರು.ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜೀವನ್ದಾಸ್ ಅಧ್ಯಕ್ಷ ಸ್ಥಾನ ವಹಿಸಿದ್ದರು. ಶ್ರೀಮತಿ ಜ್ಯೋತಿ ಸ್ಯಾಗತಿಸಿದರು. ಶ್ರೀ ರವಿಶಂಕರ್ ಧನ್ಯವಾದ ಸಮರ್ಪಿಸಿದರು. ಉಪನ್ಯಾಸಕಿ ಕು.ಅಕ್ಷತಾ ಕಾರ್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಣ ನಿರ್ದೆಶಕರುಗಳಾದ ಶ್ರೀ ರವಿಶಂಕರ್ ವಿ.ಎಸ್. ಮತ್ತು ಡಾ. ಜ್ಯೋತಿ ಮನಮೋಹನ್ ಟೂರ್ನಮೆಂಟ್ ಸಂಯೋಜಿಸಿದ್ದರು. ನಾಗರಾಜ ನಾಯ್ಕ್ ಆಂಗ್ಲ ಭಾಷಾ ಉಪನ್ಯಾಸಕರು ಇವರು ಮುಖ್ಯ ತೀರ್ಪುಗಾರರಾಗಿ ಸಹಕರಿಸಿದ್ದರು.