INSEF-2014 ರ ವಿಜ್ಞಾನ ಮೇಳದ ಸಮಾರೋಪ ಸಮಾರಂಭವು 12-09-2014 ರಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಎರಡು ದಿನಗಳ ಕಾಲ ನಡೆದ ಈ ವಿಜ್ಞಾನ ಮೇಳದಲ್ಲಿ ಇಂದ್ರಪ್ರಸ್ಥ ವಿದ್ಯಾಲಯವು ಎರಡು ಮತ್ತು ವಿವೇಕಾನಂದ ಪದವಿ ಪೂರ್ವ ಕಾಲೇಜು ಒಂದು ಗ್ರಾಂಡ್ ಗೋಲ್ಡ್ ಅವಾರ್ಡ್ಗಳನ್ನು ಪಡೆದವು. ಉಳಿದಂತೆ ಹೊಂಗಿರಣ ಹೈಸ್ಕೂಲು ಸಾಗರ, ಸುಧಾನ ಹೈಸ್ಕೂಲ್ ಪುತ್ತೂರು, ಕುಮಾರ ಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇಲ್ಲಿನ ವಿದ್ಯಾರ್ಥಿಗಳು ತಲಾ ಒಂದು ಚಿನ್ನದ ಪದಕವನ್ನು ಪಡೆದುಕೋಮಡವು.ಟ್ಟು ವಿವಿಧ ಪ್ರಾಜೆಕ್ಟ್ಗಳಿಗೆ ಆರು ಚಿನ್ನದ ಪದಕ, ಆರು ಬೆಳ್ಳಿಯ ಪದಕ, 6 ರಜತ ಪದಕಗಳು ಮತ್ತು ಹಲವಾರು ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಪೈ ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ಇಂತಹ ವಿಜ್ಞಾನ ಮೇಳಗಳಲ್ಲಿ ಬಹುಮಾನ ಪಡೆಯುವುದಕ್ಕಿಂತ ಹೆಚ್ಚು ಇನ್ನೊಬ್ಬರೊಡನೆ ಬೆರೆತು ಜೀವನದ ಅನುಭವಗಳನ್ನು ಪಡೆಯಬೇಕು, ಅದು ಅವರ ಮುಂದಿನ ಜೀವನದಲ್ಲಿ ಸಹಕಾರಿಯಾಗಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ Science Socirty of India ದ ಅಧ್ಯಕ್ಷರಾದ ಶ್ರೀ ನಾರಾಯಣ ಅಯ್ಯರ್, ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರಿ ಶ್ರೀಧರ ರೈ, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ರವೀಂದ್ರ ಮತ್ತು ಶ್ರೀ ವಸಂತ ಕುಮಾರ್ ಇವರು ಉಪಸ್ಥಿತರಿದ್ದು ಬಹುಮಾನಗಳನ್ನು ವಿತರಿಸಿದರು.
ವಿದ್ಯಾರ್ಥಿನಿ ಪ್ರೇಕ್ಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಇಲೆಕ್ಟ್ರಾನಿಕ್ಸ್ ಅಧ್ಯಾಪಕ ಶ್ರೀ ಪ್ರಸಾದ್ ಶಾನುಭಾಗ್ ಅತಿಥಿಗಳನ್ನು ಸ್ವಾಗತಿಸಿದರು, ಶಿಕ್ಷಕಿ ಕು. ಸೌಮ್ಯಾ ಯನ್. ಭಟ್ ವಂದನಾಪಣೆಗೈದರು.