ವಿವೇಕಾನಂದ ಪ.ಪೂ. ಕಾಲೇಜಿನಲ್ಲಿ ಗಣಿತಶಾಸ್ತ್ರ ಕಾರ್ಯಾಗಾರ

ಪುತ್ತೂರು : ‘ಜಿಲ್ಲೆಯ ವಿಜ್ಞಾನ ಉಪನ್ಯಾಸಕರು ವಿಶೇಷ ಪ್ರತಿಭಾಶಾಲಿಗಳು, ಹಾಗಾಗಿ ವಿಜ್ಞಾನ ಕಲಿಕೆಯಲ್ಲಿ ದ.ಕ. ಜಿಲ್ಲೆ ರಾಜ್ಯದಲ್ಲಿಯೇ ಪಥಮ ಸ್ಥಾನದಲ್ಲಿದೆ. ರಾಷ್ಟ್ರ ಮಟ್ಟದಲ್ಲಿ ಚತುರ್ಥ ಸ್ಥಾನ ಹೊಂದಿದೆ. ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ಫಲಿತಾಂಶ ಬರಲು ಜಿಲ್ಲೆಯ ಉಪನ್ಯಾಸಕರು ಕಾರಣ’ ಎಂದು ಜಿಲ್ಲಾ ಪ. ಪೂ. ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೆ.ಆರ್. ತಿಮ್ಮಯ್ಯ ಅವರು ಹೇಳಿದರು. ವಿವೇಕಾನಂದ ಪ.ಪೂ. ಕಾಲೇಜಿನ ಸುವರ್ಣ ಮಹೋತ್ಸವದಂಗವಾಗಿ ಜಿಲ್ಲೆಯ ಪ.ಪೂ.ಕಾಲೇಜು ಗಣಿತಶಾಸ್ತ್ರ ಉಪನ್ಯಾಸಕರಿಗೆ ಹಮ್ಮಿಕೊಳ್ಳಲಾದ ಕಾರ್ಯಾಗಾರವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

IMG_5925

ದ.ಕ.ಜಿಲ್ಲಾ ಪ.ಪೂ ಕಾಲೇಜು ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಜಗಜೀವನ್‌ದಾಸ್ ಭಂಡಾರಿ, ವಿವೇಕಾನಂದ ಪ.ಪೂ.ಕಾಲೇಜು ಆಡಳಿತ ಮಂಡಳಿಯ ಸಂಚಾಲಕರಾದ ಎಂ.ಟಿ. ಜಯರಾಮ ಭಟ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ವಿವೇಕಾನಂದ ಪ.ಪೂ.ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಪೈಯವರು ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿಯರಾದ ತನ್ವಿ ಮತ್ತು ಸುಶ್ಮಿತ ಪ್ರಾರ್ಥಿಸಿದರು. ಉಪನ್ಯಾಸಕಿ ಚಿನ್ಮಯಿ ವಂದಿಸಿದರು. ವಿದ್ಯಾರ್ಥಿನಿ ರಶ್ಮಿ ಕಾರ್ಯಕ್ರಮ ನಿರೂಪಿಸಿದರು.

ಅನಂತರ ನಡೆದ ಕಾರ್ಯಾಗಾರದಲ್ಲಿ ಬೆಂಗಳೂರು ಎಂ.ಇ.ಎಸ್. ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಸತ್ಯಕೃಷ್ಣ, ಪೊಂಪೈ ಪ. ಪೂ. ಕಾಲೇಜಿನ ಹಿರಿಯ ಉಪನ್ಯಾಸಕರಾದ ಶ್ರೀ ಲಾರೆನ್ಸ್ ಸಿಕ್ವೇರಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಜಿಲ್ಲೆಯ ಬಹುತೇಕ ಗಣಿತಶಾಸ್ತ್ರ ಉಪನ್ಯಾಸಕರು ಕಾರ್ಯಕ್ರಮದ ಸದುಪಯೋಗ ಪಡೆದರು.

ಈ ಸಂದರ್ಭದಲ್ಲಿ ಜಿಲ್ಲಾ ಗಣಿತಶಾಸ್ತ್ರ ಉಪನ್ಯಾಸಕರ ಒಕ್ಕೂಟ ರಚಿಸಲಾಯಿತು. ಮಂಗಳೂರು ಕೆನರಾ ಪ. ಪೂ. ಕಾಲೇಜಿನ ಶ್ರೀ ರಾಜರಾಂ ಅವರು ಅಧ್ಯಕ್ಷರಾಗಿ ಹಾಗೂ ಪೊಂಪೈ ಪ. ಪೂ. ಕಾಲೇಜಿನ ಶ್ರೀ ಲಾರನ್ಸ್ ಸಿಕ್ವೇರಾ ಕಾರ್ಯದರ್ಶಿಯಾಗಿ ಆಯ್ಕೆಯಾದರು.

Highslide for Wordpress Plugin