ವಿವೇಕಾನಂದ ಪ.ಪೂ.ಕಾಲೆಜಿನಲ್ಲಿ ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳು

ಪುತ್ತೂರು : ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ನಡುವಿನ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಬಾರದು. ‘ಕಲೆ, ಸಾಹಿತ್ಯ, ಸಂಗೀತ, ಅಭಿನಯ ಮೊದಲಾದ ಸಾಂಸ್ಕೃತಿಕ ವಿದ್ಯೆಗಳನ್ನು ಕೂಡಾ ಕರಗತ ಮಾಡಿಕೊಳ್ಳಬೇಕು’ ಎಂದು ವಿವೇಕಾನಂದ ಪ.ಪೂ.ಕಾಲೇಜಿನ ಸಂಚಾಲಕರಾದ ಎಂ.ಟಿ.ಜಯರಾಮ ಭಟ್ ಹೇಳಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಜಿಲ್ಲಾಮಟ್ಟದ ಪ.ಪೂ.ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಡೆದ ಜಿಲ್ಲಾಮಟ್ಟದ ಪ.ಪೂ.ತರಗತಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು ‘ಸಾಂಸ್ಕೃತಿಕ ಚಟುವಟಿಕೆಗಳು ವಿಸ್ತ್ರತ ಜೀವನದರ್ಶನ ಮಾಡುತ್ತವೆ’ಎಂದು ಅವರು ಹೇಳಿದರು.

DSC_0013

ವಿವೇಕಾನಂದ ಕಾಲೆಜಿನ ವಿಶ್ರಾಂತ ಪ್ರಾಂಶುಪಾಲ ಪ್ರೋ. ವೇದವ್ಯಾಸ ಅಧ್ಯಕ್ಷತೆ ವಹಿಸಿದ್ದರು.ಪ್ರಾಂಶುಪಾಲ ಜೀವನ್‌ದಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ಪರಮೇಶ್ವರ ಶರ್ಮ ಸ್ವಾಗತಿಸಿ, ವಿನೋದ ಸರಸ್ವತಿ ವಂದಿಸಿದರು. ಡಾ. ನಿವೇದಿತ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ 50 ಕಾಲೇಜುಗಳ 600 ಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

Highslide for Wordpress Plugin