ವಿವೇಕಾನಂದ ಪ.ಪೂ.ಕಾಲೇಜಿನಲ್ಲಿ ಚಕ್ರವರ್ತಿ ಸೂಲಿಬೆಲೆ

 ‘ತಾರುಣ್ಯ ಎನ್ನುವುದು ಮಾನವ ಜೀವಿತಾವದಿಯ ಅತ್ಯುತ್ತಮ ಕಾಲ. ಈ ಸಮಯದಲ್ಲಿ ಇಚ್ಛಾಶಕ್ತಿ, ಜ್ಞಾನಶಕ್ತಿ ಹಾಗೂ ಕ್ರೀಯಾಶಕ್ತಿಗಳ ಉದ್ದೀಪನವಾಗಬೇಕು ಸದ್ರಡ ಭಾರತ ನಿರ್ಮಾಣಕ್ಕೆ ತರುಣರು ಪಣತೊಡಬೇಕು’ ಎಂದು ಖ್ಯಾತ ವಾಗ್ಮಿ ಅಂಕಣಕಾರ ಮಿಥುನ್ ಚಕ್ರವರ್ತಿ ಸೂಲಿಬೆಲೆ ಹೇಳಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ‘ಬಹುಮಾನ ವಿತರಣ ಸಮಾರಂಭ’ದಲ್ಲಿ ಮುಖ್ಯ ಅಭ್ಯಾಗತರಾಗಿ ಪಾಲ್ಗೊಂಡು ಮಾತನಾಡಿದ ಅವರು ‘ಭಾರತ ಬದಲಾವಣೆಯ ಸಂಕ್ರಮಣ ಕಾಲದಲ್ಲಿದೆ ಇಂಥ ಸಮಯದಲ್ಲಿ ತರುಣರಾಗಿರುವ ನಾವು ಸಂತೋಷಪಡೋಣ….. ಭಾರತ ವಿಶ್ವ ಗುರುವಾಗಲು ಕಾರಣರಾಗೋಣ’ ಎಂದು ಹೇಳಿದರು.

DSC_0325

ಸಮಾರಂಭದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ ಪೈ ವಹಿಸಿದ್ದರು. ಸಂಚಾಲಕರಾದ ಜಯರಾಮ ಭಟ್ ಎಂ.ಟಿ., ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಪ್ರೋ. ಎ. ವಿ. ನಾರಾಯಣ್, ಪ್ರಾಚಾರ್ಯರಾದ ಜೀವನ್‌ದಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು.

ಶೈಕ್ಷಣಿಕ ಸಾಧಕರನ್ನು ಸಾಂಸ್ಕ್ರತಿಕ-ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರನ್ನು ಪುರಸ್ಕರಿಸಲಾಯಿತು. ವಿದ್ಯಾರ್ಥಿನಿಯರದ ಅಖಿಲಾ, ತನ್ವಿ, ಶಮಾ ಪ್ರಣಮ್ಯ ಪ್ರಾರ್ಥಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರಸಾದ್ ಶಾನ್‌ಭಾಗ್ ಸ್ವಾಗತಿಸಿದರು. ಉಪನ್ಯಾಸಕಿ ಯಶವಂತಿ ಧನ್ಯವಾದ ಸಮರ್ಪಿಸಿದರು, ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin