ಪುತ್ತೂರು : ‘ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಆಟ ಪಾಠ ಓಟಗಳು ಅತಗತ್ಯ. ಆಡುತ್ತಾ ಬೆಳೆಯುವ ಮಗು ಬಳಿಕ ಪಾಠ ಕಲಿಯುತ್ತದೆ. ದೈಹಿಕ ಸದೃಢತೆಗೆ ಓಟವೂ ಅಗತ್ಯವಾಗುತ್ತದೆ’ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾ ನಿರ್ದೆಶಕರಾದ ಪ್ರೋ. ಎ. ವಿ. ನಾರಾಯಣ್ ಹೇಳಿದರು. ದ. ಕ. ಜಿಲ್ಲಾ ಪ. ಪೂ. ಶಿಕ್ಷಣ ಇಲಾಖೆ ಹಾಗೂ ವಿವೇಕಾನಂದ ಪ.ಪೂ.ಕಾಲೇಜು ಜಂಟಿಯಾಗಿ ಆಯೋಜಿಸಿದ ವಿವೇಕಾನಂದ ಪ. ಪೂ. ಕಾಲೇಜಿನ ಸುವರ್ಣಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಪ.ಪೂ.ಕಾಲೇಜು ವಿದ್ಯಾರ್ಥಿಗಳ ರಾಜ್ಯ ಮಟ್ಟದ ಚದುರಂಗ ಸ್ಪರ್ಧೆಯನ್ನು ಉದ್ಘಾಟಿಸಿ ಮತನಾಡಿದರು.
ಪ.ಪೂ.ಶಿ. ಇಲಾಖೆ ಉಪನಿರ್ದೇಶಕರಾದ ಕೆ. ಆರ್. ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕಾಲೇಜು ಆಡಳಿತ ಮಂಡಳಿ ಕೋಶಾಧಿಕಾರಿ ಅಚ್ಯುತ ಪ್ರಭು, ಪುರಸಭಾಧ್ಯಕ್ಷ ಜಗದೀಶ ಶೆಟ್ಟಿ ನೆಲ್ಲಿಕಟ್ಟೆ ಶುಭ ಹಾರೈಸಿದರು. ಪ.ಪೂ.ಶಿ. ಇಲಾಖೆಯ ಕ್ರೀಡಾ ಸಂಯೋಜಕರಾದ ಡಾ.ಉಲ್ಲಾಸ್ ಕುಮಾರ್ ಮುಖ್ಯ ತೀರ್ಪುಗಾರರಾದ ಪ್ರಸನ್ನ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಜೀವನ್‌ದಾಸ್ ಸ್ವಾಗತಿಸಿದರು. ಶ್ರೀ ರವೀಶಂಕರ್ ಪ್ರಾಸ್ತವಿಕ ಮಾತುಗಳನ್ನಾಡಿದರು. ಡಾ. ಜ್ಯೋತಿ ಧನ್ಯವಾದ ಸರ್ಮಪಿಸಿದರು. ಕು.ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.
ಅನಂತರ ನಡೆದ ಚದುರಂಗ ಸ್ಪರ್ಧೆಯಲ್ಲಿ ರಾಜ್ಯದ 27 ಜಿಲ್ಲೆಗಳಿಂದ ಆಗಮಿಸಿದ 250 ಸ್ಪರ್ಧಿಗಳು ಪಾಲ್ಗೊಂಡರು. ಡಿ. 16 ರಂದು ಅಪರಾಹ್ನ ಸಮಾರೋಪ ನಡೆಯಲಿದೆ.