ದಕ್ಷಿಣ ಕನ್ನಡ ಹಾಗೂ ಮೈಸೂರು ಜಿಲ್ಲೆಗೆ ಪ್ರಶಸ್ತಿ
ಪುತ್ತೂರು : ಪ. ಪೂ. ಶಿಕ್ಷಣ ಇಲಾಖೆ ಹಾಗೂ ವಿವೇಕಾನಂದ ಪ. ಪೂ. ಕಾಲೇಜಿನ ಜಂಟಿ ಆಶ್ರಯದಲ್ಲಿ ವಿವೇಕಾನಂದ ಪ.ಪೂ. ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ಪದವಿಪೂರ್ವ ತರಗತಿ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಚದುರಂಗ ಸ್ಪರ್ಧೆ ಸಮಾಪನಗೊಂಡಿದೆ. ಬಹುಮಾನ ವಿಜೇತ ತಂಡಗಳ ವಿವರ ಚದುರಂಗ ಸ್ಪರ್ಧೆಯ ತಂಡ ಪ್ರಶಸ್ತಿ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ದಕ್ಷಿಣ ಕನ್ನಡ ಜಿಲ್ಲೆ, ದ್ವಿತೀಯ ಸ್ಥಾನ ಮೈಸೂರು ಜಿಲ್ಲೆ. ಬಾಲಕರ ವಿಭಾಗ ಪ್ರಥಮ ಸ್ಥಾನ ಮೈಸೂರು ಜಿಲ್ಲೆ ದ್ವಿತೀಯ ಸ್ಥಾನ ದಕ್ಷಿಣ ಕನ್ನಡ ಜಿಲ್ಲೆ. ಚದುರಂಗ ಸ್ಪರ್ಧೆಯ ವೈಯುಕ್ತಿಕ ವಿಭಾಗದ ಬಹುಮಾನ ವಿಜೇತರ ವಿವರ ಹೀಗಿದೆ.
ಬಾಲಕಿಯರ ವಿಭಾಗದಲ್ಲಿ ಮೊದಲ ಸ್ಥಾನ ಆಂಡ್ರೀಯಾ ಡಿಸೋಜ ದ.ಕ.ಜಿಲ್ಲೆ, ದ್ವಿತೀಯ ಸ್ಥಾನ ಶಾಲೋನ್ ಪಾಯಸ್ ದ.ಕ.ಜಿಲ್ಲೆ, ತೃತೀಯ ಸ್ಥಾನ ಗಂಗಮ್ಮ ಮೈಸೂರು ಜಿಲ್ಲೆ, ನಾಲ್ಕನೇಯ ಸ್ಥಾನ ಸಂಯುಕ್ತ ಡಿ. ಶಜನ್ನವರ್ ಬೆಳಗಾಂ ಜಿಲ್ಲೆ, ಐದನೆಯ ಸ್ಥಾನ ಸಂಪದ ಹೆಚ್.ಆರ್. ಹಾಸನ ಜಿಲ್ಲೆ, ಬಾಲಕರ ವಿಭಾಗದಲ್ಲಿ ಮೊದಲ ಸ್ಥಾನ ಗಿರೀಶ್ ಎ. ಕೌಶಿಕ್ ಮೈಸೂರು ಜಿಲ್ಲೆ, ದ್ವಿತೀಯ ಸ್ಥಾನ ಶಾಬ್ದಿಕ್ ವರ್ಮ ದಕ್ಷಿಣ ಕನ್ನಡ ಜಿಲ್ಲೆ, ತೃತೀಯ ಸ್ಥಾನ ಅಜೈಯ್ ಎಸ್.ಎಮ್ ಶಿವಮೊಗ್ಗ ಜಿಲ್ಲೆ, ನಾಲ್ಕನೆಯ ಸ್ಥಾನ ನಿಕಿಲ್ ಆರ್ ಉಮೇಶ್ ಬೆಂಗಳೂರು ದಕ್ಷಿಣ, ಐದನೆಯ ಸ್ಥಾನ ಸಾತ್ವಿಕ್ ಎಮ್ ಬೆಂಗಳೂರು ಉತ್ತರ.
ಖ್ಯಾತ ನ್ಯಾಯವಾದಿ ಹಾಗೂ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಬಂಟ್ವಾಳ ನರಸಿಂಹ ಭಟ್ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಜಿಲ್ಲಾ ಪ.ಪೂ.ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೆ.ಆರ್. ತಿಮ್ಮಯ್ಯ, ಕಾಲೇಜು ಆಡಳಿತ ಮಂಡಳಿ ಸಂಚಾಲಕರಾದ ಜಯರಾಮ ಭಟ್‌ಎಂ.ಟಿ, ಪ.ಪೂ.ಶಿ. ಇಲಾಖೆಯ ಜಿಲ್ಲಾ ಕ್ರೀಡಾ ಸಂಯೋಜಕರಾದ ಡಾ. ಉಲ್ಲಾಸ್ ಕುಮಾರ್, ಪ.ಪೂ.ಶಿ. ಇಲಾಖೆಯ ರಾಜ್ಯ ಕ್ರೀಡಾ ಸಮಿತಿಯ ಪ್ರೇಮನಾಥ ಶೆಟ್ಟಿ ಹಾಗೂ ತೀರ್ಪುಗಾರರಾದ ಪ್ರಸನ್ನರಾವ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಕಾಲೇಜು ಪ್ರಾಂಶುಪಾಲರಾದ ಜೀವನ್‌ದಾಸ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಪ್ರಸಾದ್ ಶ್ಯಾನುಭಾಗ್ ಸ್ವಾಗತಿಸಿ, ಅಕ್ಷತಾ ವಂದಿಸಿದರು. ಡಾ. ನಿವೇದಿತಾ ಕಾರ್ಯಕ್ರಮ ನಿರೂಪಿಸಿದರು. ಸಹ ತೀರ್ಪುಗಾರರಾಗಿ ಗಣೇಶ್ ಕೋಟ್ಯಾನ್, ನಾಗರಾಜ ನಾಯ್ಕ್ ಸಹಕರಿಸಿದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಜ್ಯೋತಿ ಹಾಗೂ ರವಿಶಂಕರ್ ವಿ.ಎಸ್. ಪಂದ್ಯಾಟವನ್ನು ಸಂಯೋಜಿಸಿದ್ದರು.